LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಓಂಕಾರ್ ಸಾಳ್ವಿ ಆರ್‍ಸಿಬಿ ಬೌಲಿಂಗ್ ಕೋಚ್

ಓಂಕಾರ್ ಸಾಳ್ವಿ ಅವರು ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಫ್ರಾಂಚೈಸಿ ಸೋಮವಾರ ಈ ಘೋಷಣೆ ಮಾಡಿತು.

ಓಂಕಾರ್ ಸಾಳ್ವಿ ಇದಕ್ಕೂ ಮುನ್ನ ಕೋಲ್ಕತಾ ನೈಟ್‍ರೈಡರ್ ತಂಡದ ಸಹಾಯಕ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದರು.ಕಳೆದ ಸೀಸನ್‍ನಲ್ಲಿ ಮುಂಬಯಿ ತಂಡದ ರಣಜಿ ಟ್ರೋಫಿ ಹಾಗೂ ಇರಾನಿ ಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಈ ಬಾರಿಯ ರಣಜಿ ಸೀಸನ್ ಮುಗಿದೊಡನೆ ಸಾಳ್ವಿ ಆರ್‍ಸಿಬಿ ಪಾಳೆಯವನ್ನು ಸೇರಿಕೊಳ್ಳಲಿದ್ದಾರೆ. ಮಾಜಿ ಕ್ರಿಕೆಟಿಗ ಆವಿಷ್ಕಾರ್ ಸಾಳ್ವಿ ಅವರ ಕಿರಿಯ ಸಹೋದರನಾಗಿರುವ ಓಂಕಾರ್ ಸಾಳ್ವಿ ರೈಲ್ವೇಸ್ ಪರ 2005ರಲ್ಲಿ ಕೇವಲ ಒಂದು ಲಿಸ್ಟ್-ಎ ಪಂದ್ಯ ಆಡಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST