ಚಿಂತಾಮಣಿ: ಭಾರತ ಚುನಾವಣಾ ಆಯೋಗದ ಎಸ್‌ಐಆರ್-2026ರ ಪರಿಷ್ಕೃ ತ ವೇಳಾಪಟ್ಟಿಯಂತೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಸೋಮವಾರ (ಆ.24) ಪ್ರಕಟಿಸಲಾ ಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪಕ್ರಿಯೆ ಮತ್ತಷ್ಟು ಚುರುಕುಗೊಂಡಿದೆ. ಕರಡು ಪಟ್ಟಿ ಪ್ರಕಟವಾದ ಹಿನ್ನೆ ಲೆಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿ ನಿಧಿಗಳ ಸಭೆ ನಡೆಸಿದ ಚುನಾವಣಾ ಆಡಳಿತ, ಪಟ್ಟಿ ಯಲ್ಲಿನ ವಿವರಗಳು ಹಾಗೂ ಮುಂದಿನ ಹಂತದ ಪ್ರಕ್ರಿಯೆಗಳ ಕುರಿತು ಮಾಹಿತಿ ಹಂಚಿಕೊಂಡಿತೆಂದು ಮತದಾರರ ನೊಂದಣಾಧಿಕಾರಿ ಮಲ್ಲಿನಾಥ್ ಹೂನಳ್ಳಿ ತಿಳಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಚಿಂತಾಮಣಿ ಕ್ಷೇತ್ರದಲ್ಲಿ ಒಟ್ಟು 2,31,861 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ಈ ಪೈಕಿ ಆ.17ರವರೆಗೆ 1,95,156 ಮತದಾರರ ಗಣತಿ ನಮೂನೆಗಳನ್ನು ಬಿಎಲ್‌ಗಳು ಸ್ವೀಕರಿಸಿ, ಬಿಎಲ್‌ಒ ಆಪ್ ಮೂಲಕ ಮಾಹಿತಿ ಯನ್ನು ಡಿಜಿಟಲೀಕರಣಗೊಳಿಸಿದ್ದಾರೆ. ಇದು ಒಟ್ಟು ಮತದಾರರ ಪೈಕಿ ಶೇ.84.17ರಷ್ಟಾಗಿದೆ.ಎಸ್‌ಐಆರ್ ಪ್ರಕ್ರಿಯೆಯಲ್ಲಿ 6,596 ಮಂದಿ ಮೃತ ಪಟ್ಟಿರುವುದು, 26,593 ಮಂದಿ ಶಾಶ್ವತ ಸ್ಥಳಾಂತರಗೊAಡಿರುವುದು, 2,350 ಮಂದಿ ಈಗಾಗಲೇ ಎರಡೆರಡು ಕಡೆ ನೋಂದಣಿಯಾಗಿರುವುದು, ಹಾಗೂ 1,161 ಮಂದಿ ಗೈರುಹಾಜರಾಗಿರುವುದು ಸೇರಿದಂತೆ ಒಟ್ಟು 36,705 ಮತದಾರರನ್ನು ಅದ್ದೋ ಎಎಸ್ ಡಿಡಿಒ ವಿಭಾಗದಲ್ಲಿ ಗುರುತಿಸಲಾಗಿದೆ. ಇದು ಕ್ಷೇತ್ರದ ಒಟ್ಟು ಮತದಾರರ ಪೈಕಿ ಶೇ.15.83ರಷ್ಟಾಗಿದೆ.ಇದೇ ವೇಳೆ ಚುನಾವಣಾ ತಂತ್ರಾಂಶದಲ್ಲಿ 12,6 49ಮತದಾರರ ಮಾಹಿತಿಯಲ್ಲಿ ಅನೋಮಲಿ ಹಾಗೂ 3,388 ಮತದಾರರ ವಿವರಗಳಲ್ಲಿ ನೋ ಮ್ಯಾಪಿಂಗ್ ಕಂಡುಬಂದಿದ್ದು, ಒಟ್ಟು 16,037 ಮತದಾರರ ಮಾಹಿತಿಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಸಂಬAಧಪಟ್ಟ ಬಿಎಲ್‌ಒಗಳ ಮೂಲಕ ನೋಟಿಸ್ ಜಾರಿ ಮಾಡಿ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು. ಬಳಿಕ ನಿಯಮಾನುಸಾ ರ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಅ ಥವಾ ಇತರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಡಳಿತ ತಿಳಿಸಿದೆ.
ಪರಿಶೀಲನಾ ಕಾರ್ಯವನ್ನು ಮತ್ತಷ್ಟು ಪರಿಣಾಮ ಕಾರಿಯಾಗಿ ಕೈಗೊಳ್ಳಲು ಪ್ರಸ್ತುತ ಇರುವ ಮತದಾರ ನೋಂದಣಾಧಿಕಾರಿ ಹಾಗೂ ಇಬ್ಬರು ಸಹಾಯಕ ಮತದಾರ ನೋಂದಣಾಧಿಕಾರಿಗಳ ಜೊತೆಗೆ ಎಂಟು ಹೆಚ್ಚುವರಿ ಸಹಾಯಕ ಮತದಾರ ನೋಂದಣಾಧಿಕಾ ರಿಗಳನ್ನು ನೇಮಕ ಮಾಡುವಂತೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನ ದಂತೆ 1,200ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳ ಪುನರ್‌ವಿಂಗಡಣೆಯನ್ನೂ ಕೈಗೊಳ್ಳ ಲಾಗಿದೆ.ಇದರ ಪರಿಣಾಮವಾಗಿ ಚಿಂತಾಮಣಿ ವಿಧಾ ನಸಭಾ ಕ್ಷೇತ್ರದಲ್ಲಿ ಈ ಹಿಂದೆ ಇದ್ದ 271 ಮತಗಟ್ಟೆಗಳ ಸಂಖ್ಯೆ 282ಕ್ಕೆ ಏರಿಕೆಯಾಗಿದ್ದು, 11 ಹೊಸ ಮತ ಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಆ.24ರಂದು ಪ್ರಕಟಗೊಂಡಿರುವ ಕರಡು ಮತದಾರರ ಪಟ್ಟಿಯನ್ನು ಕ್ಷೇತ್ರದ ಎಲ್ಲ ಮತಗಟ್ಟೆಗಳು, ಗ್ರಾಮ ಪಂಚಾಯಿತಿ ಕಚೇರಿಗಳು, ಸಹಾಯಕ ಮತದಾರ ನೋಂ ದಣಾಧಿಕಾರಿಗಳ ಕಚೇರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸ ಲಾಗಿದೆ. ಕರಡು ಪಟ್ಟಿಯಂತೆ ಕ್ಷೇತ್ರದಲ್ಲಿ ಒಟ್ಟು 1,95,156 ಮತದಾರರಿದ್ದು, 96,677 ಪುರುಷರು, 98,457 ಮಹಿಳೆಯರು ಹಾಗೂ 22 ಇತರೆ ಮತದಾರರು ಸೇರಿದ್ದಾರೆ.
ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಸೇವಾ ಮತ ದಾರರ ಕರಡು ಪಟ್ಟಿಯನ್ನೂ ಪ್ರಕಟಿಸಲಾಗಿದ್ದು, ಒಟ್ಟು 48ಸೇವಾ ಮತದಾರರು ಇದ್ದಾರೆ. ಇವರೆಲ್ಲರೂ ಪುರುಷ ರಾಗಿದ್ದು, ಮಹಿಳೆ ಹಾಗೂ ಇತರೆ ವರ್ಗದಲ್ಲಿ ಯಾವುದೇ ಸೇವಾ ಮತದಾರರು ಇಲ್ಲ. ಜೂನ್ 16ರಿಂದ ಆಗಸ್ಟ್ 21ರವರೆಗೆ ಮತದಾರರ ಪಟ್ಟಿಗೆ ಸಂಬAಧಿಸಿದAತೆ ನಮೂ ನೆ-6ರಲ್ಲಿ 1,295, ನ ಮೂನೆ-7ರಲ್ಲಿ 101 ಹಾಗೂ ನ ಮೂನೆ-8ರಲ್ಲಿ 2,393 ಅರ್ಜಿಗಳು ಸೇರಿದಂತೆ ಒಟ್ಟು 3,789 ಅರ್ಜಿಗಳು ಸ್ವೀಕೃತವಾಗಿವೆ. ಎಸ್‌ಐಆರ್-2026ರ ಪರಿಷ್ಕöÈತ ವೇಳಾಪಟ್ಟಿಯಂತೆ ಆ.24ರಿಂದ ಸೆ.23ರವರೆಗೆ ಕರಡು ಮತದಾರರ ಪಟ್ಟಿಗೆ ಸಂಬAಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೆ.24ರಿಂದ ಅ.22ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಪರಿಶೀಲನೆ ಹಾಗೂ ವಿಲೇ ವಾರಿ ನಡೆಯಲಿದ್ದು, ಅ.27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.ಚಿಂತಾಮಣಿ ಕ್ಷೇತ್ರದಲ್ಲಿ ಮಾನ್ಯತೆ ಪಡೆದ ರಾಜಕೀ ಯ ಪಕ್ಷಗಳು ಬಿಎಲ್‌ಎ-1 ಹಾಗೂ ಬಿಎಲ್-2ಗಳನ್ನು ನೇಮಕ ಮಾಡಿದ್ದು, ರಾಜಕೀಯ ಪಕ್ಷಗಳ ಸಹಭಾಗಿತ್ವದೊ ಂದಿಗೆ ಕರಡು ಪಟ್ಟಿಯ ಪರಿಶೀಲನೆ ಹಾಗೂ ಹಕ್ಕು-ಆಕ್ಷೇಪಣೆಗಳ ವಿಲೇವಾರಿಗೆ ಚುನಾವಣಾ ಆಡಳಿತ ಸಿದ್ಧತೆ ಮಾಡಿಕೊಂಡಿದೆಯೆಂದು ಮತದಾರರ ನೋಂದಣಾಧಿಕಾರಿ ತಿಳಿಸಿದ್ದಾರೆ.