LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಜೂನಿಯರ್ ಸ್ಕ್ವಾಷ್: ಭಾರತದ ಸವಾಲು ಅಂತ್ಯ

ಭಾರತದ ಬಾಲಕರ ಮತ್ತ ಬಾಲಕಿಯರ ತಂಡಗಳು ಹೂಸ್ಟನ್‍ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‍ಷಿಪ್‍ನ ಕ್ವಾರ್ಟರ್ ಫೈನಲ್‍ನಲ್ಲಿ ಪರಾಭವಗೊಂಡಿವೆ.

ಆರನೇ ಶ್ರೇಯಾಂಕದ ಬಾಲಕರ ತಂಡ 1-2ರಿಂದ ನಾಲ್ಕನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ವಿರುದ್ಧ ಸೋಲನುಭವಿಸಿತು.ಬಾಲಕಿಯರ ತಂಡವೂ 1-2ರಿಂದ ಮೂರನೇ ಶ್ರೇಯಾಂಕದ ಮಲೇಷ್ಯಾ ತಂಡದ ವಿರುದ್ಧ ಸೋಲು ಕಂಡಿತು.ಯುವರಾಜ್ ವಾಧ್ವಾನಿ 3-2ರಿಂದ ಸಿಜೋನ್ ಓಹ್ ವಿರುದ್ಧ ಗೆಲ್ಲುವ ಮೂಲಕ ಬಾಲಕರ ತಂಡಕ್ಕೆ ಭಾನುವಾರ ಗೆಲುವಿನ ಆರಂಭ ಒದಗಿಸಿದ್ದರು. ಕಳೆದ ವಾರ ವೈಯಕ್ತಿಕ ವಿಭಾಗದಲ್ಲಿ ಕಂಚು ಗೆದ್ದಿದ್ದ ಶೌರ್ಯ ಬಾವಾ ಅವರು ಬೆಳ್ಳಿ ಪದಕ ವಿಜೇತ ಜೂ ಯಾಂಗ್ ವಿರುದ್ಧ ನಾಲ್ಕು ತೀವ್ರ ಪೈಪೋಟಿ ಗೇಮ್‍ಗಳಲ್ಲಿ ಸೋಲುಂಡರು.

ನಿರ್ಣಾಯಕ ಪಂದ್ಯದಲ್ಲಿ ಅರಿಹಂತ್ ಕೆ.ಎಸ್ ಅವರು ಕುನ್ ಕಿಮ್‍ಗೆ ಶರಣಾದರು. ಬಾಲಕಿಯರ ವಿಭಾಗದಲ್ಲಿ ಶಮೀನಾ ರಿಯಾಜ್ ಅವರು ವಿಟ್ನಿ ವಿಲ್ಸನ್ ವಿರುದ್ಧ ಸೋಲುಂಡ ನಂತರ ನಡೆದ ತೀವ್ರ ಹಣಾಹಣಿಯ ಪಂದ್ಯದಲ್ಲಿ ಅನಾಹತ್ ಸಿಂಗ್ ಅವರು 3-2ರಿಂದ ಥನುಸಾ ಉತ್ರಿಯಾನ್ ವಿರುದ್ಧ ಜಯಗಳಿಸಿದರು. ನಿರ್ಣಾಯಕ ಪಂದ್ಯದಲ್ಲಿ ಗೆಲುವಿಗಾಗಿ ಪ್ರಬಲ ಪೈಪೋಟಿ ನೀಡಿದ ನಿರುಪಮಾ ದುಬೆ ಅವರು 2-3ರಿಂದ ಡೋಯ್ಸ್ ಯೆ ಸ್ಯಾನ್ ಲಿ ಅವರಿಗೆ ಶರಣಾದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು