ಚನ್ನೈ: ಮಹೇಂದ್ರ ಸಿಂಗ್ ಧೋನಿ ಹಾಗೂ ಸಿಎಸ್‌ಕೆ ಸಂಬಂಧ ನೆನ್ನೆ-ಮೊನ್ನೆಯದಲ್ಲ. 2008ರಲ್ಲಿ ಐಪಿಎಲ್ ಆರಂಭವಾದ ವರ್ಷದಿಂದ ಧೋನಿ, ಸಿಎಸ್‌ಕೆ ತಂಡವನ್ನು ಮುನ್ನಡೆಸಿ, ಯಶಸ್ವಿ ನಾಯಕನಾಗಿ ಹಾಗೂ ತಂಡವನ್ನು ಯಶಸ್ವಿ ತಂಡವನ್ನಾಗಿ ಮಾಡುವಲ್ಲಿ ಕ್ಯಾಪ್ಟನ್‌ಕೂಲ್ ಪಾತ್ರ ದೊಡ್ಡದಿದೆ. ಆದರೆ, ಈಗ ಧೋನಿಗೆ 45 ವರ್ಷವಾಗಿದ್ದು, ಮೈದಾನದಲ್ಲಿ ಮೊದಲಿನ ಮೋಡಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಧೋನಿ ಈಗ ಸಿಎಸ್‌ಕೆ ತಂಡದಲ್ಲಿ ಪಾಲುದಾರನಾಗಲು ಮನಸ್ಸು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ತಂಡದ ಮ್ಯಾನೇಜ್‌ಮೆಂಟ್ ಅಷ್ಟು ಮನಸ್ಸು ಮಾಡುತ್ತಿಲ್ಲ ಎಂಬ ಆಂತರಿಕ ಮಾಹಿತಿ ಲಭ್ಯವಾಗಿದೆ.25% ಶೇರ್? ಕೊಡಿ!: ದೊರೆತಿರುವ ಮಾಹಿತಿಯಂತೆ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ ಇಲ್ಲಿವರೆಗೆ ಐದು ಬಾರಿ ಚಾಂಪಿಯನ್ಸ್ ಆಗುವ ಮೂಲಕ ಐಪಿಎಲ್‌ನಲ್ಲಿ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಈ ಸಾಧನೆ ಮಾಡುವಲ್ಲಿ ಧೋನಿ ಪಾತ್ರ
ಪ್ರಮುಖವಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ತಂಡದೊಂದಿಗೆ ಸುಮಾರು 19-20 ವರ್ಷಗಳ ಸಂಬಂಧವಿರುವ ಸಲುಗೆಯ ಮೇಲೆ ಧೋನಿ ತಂಡದ ಮಾಲೀಕತ್ವದಲ್ಲಿ ಶೇ. 25 ರಷ್ಟು ಪಾಲುದಾರಿಕೆಯನ್ನು ಕೇಳಿದ್ದಾರೆ. ಆದರೆ ಅದನ್ನು ನೀಡಲು ಮ್ಯಾನೇಜ್‌ಮೆಂಟ್ ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ. ಧೋನಿ ಶೇ. 25 ಕೇಳಿದಕ್ಕೆ ಮ್ಯಾನೇಜ್‌ಮೆಂಟ್ ಶೇ.4 ಪಾಲುದಾರಿಕೆ ಕೊಡಲು ಮುಂದಾದಾಗ, ಧೋನಿ 25 ಬೇಡ ಕನಿಷ್ಟ ಶೇ.20 ರಷ್ಟು ಪಾಲುದಾರಿಕೆ ಕೊಡಿ ಎಂದಾಗ ವ್ಯವಸ್ಥಾಪಕ ಮಂಡಳಿಯವರು ಶೇ. 5.5ಕ್ಕಿಂಗ ಹೆಚ್ಚು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ, ಈ ಎಲ್ಲಾ ವ್ಯವಹಾರ ಕೇವಲ ಧೋನಿ ಮತ್ತು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ನಡುವೆ ಮಾತುಕತೆ ಮೂಲಕ ನಡೆದಿದೆ ಹೊರತು ಯಾವುದೇ ಲಿಖಿತ ರೂಪದಲ್ಲಿ ನಡೆದಿದೆ ಎಂದು ಪುರಾವೆಗಳು ದೊರೆತಿಲ್ಲ. ಈಗ ಧೋನಿಗೆ 45 ವರ್ಷ ಮೊದಲು ಗ್ರೌಂಡ್‌ನಲ್ಲಿ ಮಾಡುತ್ತಿದ್ದ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. 2026 ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ 4 ಕೋಟಿ ಕೊಟ್ಟು ಧೋನಿಯನ್ನು ಉಳಿಸಿಕೊಂಡಿತು. ಆದರೆ ಅವರು ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಅಷ್ಟೇ ಅಲ್ಲದೇ ಕಳೆದ ಕೆಲವು ಸೀಸನ್‌ಗಳಲ್ಲಿ ಸಿಎಸ್‌ಕೆ ತಂಡ ನಿರಸ ಪ್ರದರ್ಶನ ನೀಡುತ್ತಿದ್ದು, ಇದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿ ಪರಿಣಮಿಸಿದೆ.