LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಪಾಕಿಸ್ತಾನಕ್ಕೆ ಕ್ರೀಡಾಪಟುಗಳನ್ನು ಕಳುಹಿಸಲು ಭಾರತ ಒಪ್ಪಿಗೆ?


ನವದೆಹಲಿ/ಇಸ್ಲಾಮಾಬಾದ್: 2027ರ ದಕ್ಷಿಣ ಏಷ್ಯಾ ಫೆಡರೇಷನ್ (SAF) ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಈ ಕ್ರೀಡಾಕೂಟಕ್ಕೆ ಭಾರತ ಒಪ್ಪಿಗೆ ನೀಡಿದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಕ್ರೀಡಾಪಟುಗಳು ಪಾಕಿಸ್ತಾನಕ್ಕೆ ತೆರಳಿದಂತಾಗಲಿದೆ.2025ರ ಏಪ್ರಿಲ್ 22 ರಂದು ಕಾಶ್ಮೀರದ ಬೈಸರನ್ ಕಣಿವೆ ಪ್ರದೇಶದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ನಾಗರಿಕರು ಹತ್ಯೆಗೀಡಾಗಿದ್ದರು. ಈ ದಾಳಿಯ ಬಳಿಕ ಭಾರತ-ಪಾಕಿಸ್ತಾನ (India-Pakistan)  ನಡುವಿನ ಎಲ್ಲಾ ರಾಜತಾಂತ್ರಿಕ ಹಾಗೂ ಕ್ರೀಡಾ ಸಂಬಂಧಗಳು ಸ್ರಬ್ಧಗೊಂಡಿವೆ. ಪಾಕಿಸ್ತಾನಿ ಮಾಧ್ಯಮಗಳ ವರದಿ ಪ್ರಕಾರ, ದಕ್ಷಿಣ ಏಷ್ಯಾ ಒಲಿಂಪಿಕ್ಸ್ ಅಸೋಸಿಯೇಷನ್‌ನ ಉನ್ನತ ಮಟ್ಟದ ಸಭೆಯಲ್ಲಿ ಭಾರತ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ 2027ರ (SAF) ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಪಾಕಿಸ್ತಾನ ನೀಡಿದ ಆಹ್ವಾನವನ್ನ ಭಾರತ ತಾತ್ವಿಕವಾಗಿ ಒಪ್ಪಿಕೊಂಡಿದೆ ಎನ್ನಲಾಗಿದೆ.ಸಾವಿರ ಸಲ ಹೇಳುತ್ತೇನೆ, ನಾನು ತಪ್ಪೇ ಮಾಡಿಲ್ಲ: 4 ಗಂಟೆ ಇ.ಡಿ ವಿಚಾರಣೆ ಬಳಿಕ ನಾಗೇಂದ್ರ ಸ್ಪಷ್ಟನೆ 2027ರ (SAF) ಕ್ರೀಡಾಕೂಟವು ಏಪ್ರಿಲ್ 4 ರಿಂದ 11ರ ವರೆಗೆ ನಡೆಯುವ ಸಾಧ್ಯತೆಗಳಿವೆ. ಭಾರತದಿಂದ ಎಷ್ಟು ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂಬ ವಿವರಗಳನ್ನ 2027ರ ಜನವರಿಯಲ್ಲಿ ತಿಳಿಸಲಾಗುವುದು 
ಎಂದು ವರದಿಯಲ್ಲಿ ಹೇಳಲಾಗಿದೆ.22 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಬಹುಕ್ರೀಡಾಕೂಟ: ಪಾಕಿಸ್ತಾನ ಕೊನೆಯ ಬಾರಿ 2004ರಲ್ಲಿ ಇಸ್ಲಾಮಾಬಾದ್‌ನಲ್ಲಿ Sಂಈ ಕ್ರೀಡಾಕೂಟ ಆಯೋಜಿಸಿತ್ತು. ಇದೀಗ 22 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಮತ್ತೆ ಬಹುಕ್ರೀಡಾ ಅಂತಾರಾಷ್ಟ್ರೀಯ ಕೂಟ ನಡೆಯಲಿದೆ. 2027ರ ಆವೃತ್ತಿಯಲ್ಲಿ ಒಟ್ಟು 28 ಕ್ರೀಡೆಗಳು ನಡೆಯುವ ನಿರೀಕ್ಷೆಯಿದ್ದು, ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರ್ ನಗರಗಳು ಆತಿಥ್ಯ ವಹಿಸಲಿವೆ.
ಇಸ್ಲಾಮಾಬಾದ್‌ನಲ್ಲಿ ಸ್ಕ್ಯಾಷ್, ಟೆನಿಸ್ ಮತ್ತು ಮಾರ್ಷಲ್ ಆರ್ಟ್ಸ್ ಸೇರಿದಂತೆ 15 ಕ್ರೀಡೆಗಳು ನಡೆಯಲಿವೆ. ಲಾಹೋರ್‌ನಲ್ಲಿ ಕ್ರಿಕೆಟ್, ಹಾಕಿ, ಈಜು ಸೇರಿದಂತೆ 10 ಕ್ರೀಡಾ ವಿಭಾಗಗಳು ನಡೆಯಲಿವೆ. ಪೇಶಾವರ್‌ಗೆ ಮೂರು ಕ್ರೀಡೆಗಳ ಆತಿಥ್ಯ ನೀಡಲಾಗಿದೆ. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST