LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

 ಪ್ರೊ ಕಬಡ್ಡಿ ಲೀಗ್: ದೇಶ್ವಾಲ್ ಮಿಂಚು, ಜೈಪುರಕ್ಕೆ ಸುಲಭ ಗೆಲುವು

ಹೈದರಾಬಾದ್: ನಾಯಕ ಅರ್ಜುನ್ ದೇಶ್ವಾಲ್ ಅವರ ಅಮೋಘ ರೇಡಿಂಗ್ ಪ್ರದರ್ಶನದ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ  ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 30 ಪಾಯಿಂಟ್‍ಗಳ ಅಂತರದಿಂದ ಸುಲಭವಾಗಿ ಸೋಲಿಸಿತು.
ಇದು ಜೈಪುರ ತಂಡಕ್ಕೆ ಎರಡನೇ ಜಯ. ಟೈಟನ್ಸ್ ತಂಡಕ್ಕೆ ಆಡಿರುವ ಮೂರು ಪಂದ್ಯಗಳಲ್ಲಿ ಇದು ಸತತ ಎರಡನೇ ಸೋಲು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ದಿನದ ಮೊದಲ ಹಣಾಹಣಿಯಲ್ಲಿ ತೆಲುಗು ಟೈಟನ್ಸ್ ತಂಡವನ್ನು ನಾಲ್ಕು ಬಾರಿ ಆಲೌಟ್ ಮಾಡಿದ ಜೈಪುರ ತಂಡ 52-22 ಅಂಕಗಳಿಂದ ಭರ್ಜರಿ ಜಯ ಗಳಿಸಿತು. ಹಾಲಿ ಟೂರ್ನಿಯಲ್ಲಿ ತಂಡವೊಂದು ದಾಖಲಿಸಿದ ಅತಿ ದೊಡ್ಡ ಅಂತರದ ಗೆಲುವು ಇದಾಗಿದೆ. ವಿರಾಮದ ವೇಳೆ ವಿಜೇತ ತಂಡ 18-13ರಲ್ಲಿ ಮುಂದಿತ್ತು.

ಆತಿಥೇಯ ತಂಡದ ಸ್ಟಾರ್ ರೈಡರ್ ಪವನ್ ಕುಮಾರ್ (7 ಅಂಕ) ಅವರನ್ನು ಪದೇ ಪದೆ ರಕ್ಷಣಾ ಕೋಟೆಯಲ್ಲಿ ಬಂಧಿಸಿ ಟೈಟನ್ಸ್ ತಂಡದ ಆತ್ಮವಿಶ್ವಾಸ ಕುಗ್ಗಿಸಿದ ಪ್ಯಾಂಥರ್ಸ್ ಆಟಗಾರರು, ದ್ವಿತೀಯಾರ್ಧದಲ್ಲಿ ಮೂರು ಬಾರಿ ಟೈಟನ್ಸ್ ತಂಡವನ್ನು ಆಲೌಟ್ ಮಾಡಿದರು.ಆರಂಭದಲ್ಲಿ ನಾಯಕ ಪವನ್ ಕುಮಾರ್ ಸೆಹ್ರಾವತ್ ಅವರ ಚಾಕಚಕ್ಯತೆಯ ರೇಡಿಂಗ್‍ನಿಂದ ಟೈಟನ್ಸ್ ತಂಡ ಮೊದಲ ಹತ್ತು ನಿಮಿಷಗಳ ಆಟದಲ್ಲಿ8-6 ಅಂಕಗಳಿಂದ ಮುನ್ನಡೆ ಸಾಧಿಸಿತು. ಜೈಪುರ ತಂಡದ ಪರ ಅರ್ಜುನ್ ಆರಂಭದಲ್ಲಿ ಏಕಾಂಗಿ ಹೋರಾಟ ನಡೆಸಿದರು. ಆದರೆ ಪವನ್ ಕುಮಾರ್ ಅವರನ್ನು ಟ್ಯಾಕಲ್ ಮಾಡಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದ ಜೈಪುರ ನಂತರ ಮೇಲುಗೈ ಸಾಧಿಸುತ್ತ ಹೋಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು