LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬ್ಯಾಸ್ಕೆಟ್‍ಬಾಲ್: ಪಿಪಿಸಿ, ಬೀಗಲ್ಸ್‍ಗೆ ಜಯ

ಬೆಂಗಳೂರು: ಬೀಗಲ್ಸ್ ಬಿ.ಸಿ ಮತ್ತು ಪಿ.ಪಿ.ಸಿ ತಂಡಗಳು ರಾಜ್ಯ ಯೂತ್ (16 ವರ್ಷದೊಳಗಿನವರ) ಬ್ಯಾಸ್ಕೆಟ್‍ಬಾಲ್ ಚಾಂಪಿಯನ್‍ಷಿಪ್‍ನ ಬಾಲಕರ ವಿಭಾಗದ ಸೆಮಿಫೈನಲ್ ಲೀಗ್‍ನ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದವು.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‍ಬಾಲ್ ಅಂಕಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೀಗಲ್ಸ್ ತಂಡವು 66-62ರಿಂದ ಬಿ.ಸಿ.ಬಿ.ಸಿ.ತಂಡವನ್ನು ಸೋಲಿಸಿದರೆ, ಪಿ.ಪಿ.ಸಿ. ತಂಡವು 79-47ರಿಂದ ಮೈಸೂರು ಜಿಲ್ಲಾ ತಂಡವನ್ನು ಮಣಿಸಿತು.

ಬಾಲಕಿಯರ ವಿಭಾಗದ ಸೆಮಿಫೈನಲ್ ಲೀಗ್‍ನ ಮೊದಲ ಪಂದ್ಯದಲ್ಲಿ ಮೌಂಟ್ಸ್ ಕ್ಲಬ್ ತಂಡವು 73-45ರಿಂದ ಯಂಗ್ ಓರಿಯನ್ಸ್ ಎಸ್.ಸಿ ತಂಡವನ್ನು; ಮತ್ತೊಂದು ಪಂದ್ಯದಲ್ಲಿ ಮೈಸೂರು ಜಿಲ್ಲಾ ‘ಎ’ ತಂಡವು 63-54ರಿಂದ ಬೀಗಲ್ಸ್ ಬಿ.ಸಿ ತಂಡವನ್ನು ಸೋಲಿಸಿತು.ಸೆಮಿಫೈನಲ್ ಲೀಗ್‍ನ ಎರಡನೇ ಸುತ್ತಿನ ಪಂದ್ಯಗಳು ಮತ್ತು ಫೈನಲ್ ಹಣಾಹಣಿ ಮಂಗಳವಾರ ನಡೆಯಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST