LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬ್ರಾಡ್‍ಮನ್ ದಾಖಲೆ ಸರಿದೂಗಿಸಿದ ಮೆಂಡಿಸ್

ಗಾಲೆ: ಶ್ರೀಲಂಕಾದ ಕಮಿಂಡು ಮೆಂಡಿಸ್ ಕ್ರಿಕೆಟ್ ದಂತಕತೆ ಡೊನಾಲ್ಡ್ ಬ್ರಾಡ್‍ಮನ್ ಅವರ ದಾಖಲೆ ಯೊಂದನ್ನು ಸರಿದೂಗಿಸಿದ್ದಾರೆ. ಕೇವಲ 13 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರ್ತಿಗೊಳಿಸಿ ಬ್ರಾಡ್‍ಮನ್ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನಿಯಾಗಿದ್ದಾರೆ.ಬ್ರಾಡ್‍ಮನ್ 1930ರ ಆಯಶಸ್ ಸರಣಿಯ ಹೇಡಿಂಗ್ಲೆ ಟೆಸ್ಟ್‍ನಲ್ಲಿ ಈ ಸಾಧನೆಗೈದಿದ್ದರು.

ಇಂಗ್ಲೆಂಡ್‍ನ ಹರ್ಬಟ್ ಸಟ್‍ಕ್ಲಿಫ್ ಮತ್ತು ವೆಸ್ಟ್ ಇಂಡೀಸ್‍ನ ಎವರ್ಟನ್ ವೀಕ್ಸ್ ಜಂಟಿ ಅಗ್ರಸ್ಥಾನದಲ್ಲಿದ್ದಾರೆ (12 ಇನ್ನಿಂಗ್ಸ್).ನ್ಯೂಜಿಲ್ಯಾಂಡ್ ಎದುರಿನ ಗಾಲೆ ಟೆಸ್ಟ್ ಪಂದ್ಯದ 2ನೇ ದಿನ ಈ ದಾಖಲೆ ನಿರ್ಮಾಣಗೊಂಡಿತು. ಶ್ರೀಲಂಕಾ 5 ವಿಕೆಟಿಗೆ 602 ರನ್ ಪೇರಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. ಕಮಿಂಡು ಮೆಂಡಿಸ್ 182 ರನ್ ಬಾರಿಸಿ ಅಜೇಯರಾಗಿ ಉಳಿದರು (250 ಎಸೆತ, 16 ಬೌಂಡರಿ, 4 ಸಿಕ್ಸರ್). ಕುಸಲ್ ಮೆಂಡಿಸ್ ಅಜೇಯ 106 ರನ್ ಹೊಡೆದರು. ಇವರ ಶತಕ ಪೂರ್ತಿಯಾದೊಡನೆ ಲಂಕಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST