ಏಷ್ಯನ್ ಕ್ರೀಡಾಕೂಟ: ಮುಂದಿನ ತಿಂಗಳು ಏಷ್ಯನ್ ಕ್ರೀಡಾಕೂಟ ಶುರುವಾಗಲಿದೆ. ಭಾರತ ತನ್ನ 12 ಸದಸ್ಯರ ಈಜು ತಂಡವನ್ನು ಘೋಷಿಸಿದೆ. ಈ ಬಾರಿ ಬಹುಭಾಷಾ ನಟನ ಮಗನಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ.ಮುಂಬರುವ 2026ರ ಏಷ್ಯನ್ ಕ್ರೀಡಾಕೂಟ (Asian Games) ಸೆಪ್ಟೆಂಬರ್ 19ರಂದು ಆರಂಭವಾಗಲಿದೆ. ಭಾರತೀಯ ಕ್ರೀಡಾಪಟುಗಳು(Athletes) ಅನೇಕ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ತಂಡ (Indian team ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಈಗ ಭಾರತ 12 ಸದಸ್ಯರ ಈಜು ತಂಡವನ್ನು ಘೋಷಿಸಿದೆ. ಬಹುಭಾಷಾ ಸ್ಟಾರ್ ನಟ ಆರ್. ಮಾಧವನ್ ಅವರ ಮಗ (R. Madhavan) ವೇದಾಂತ್ ಮಾಧವನ್ Vedant Madhavan) ಕೂಡ ಈ ತಂಡದಲ್ಲಿ ಸ್ಥಾನ ಪಡೆದಿರುವುದು ದೊಡ್ಡ ಸುದ್ದಿ. 21 ವರ್ಷದ ವೇದಾಂತ್ ಕಳೆದ ಕೆಲವು ವರ್ಷಗಳಿಂದ ಸುದ್ದಿಯಲ್ಲಿದ್ದಾರೆ. ಈಜು ಕ್ರೀಡೆಯಲ್ಲಿ ವೇದಾಂತ್ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇದೀಗ ವೇದಾಂತ್ ಮಾಧವನ್ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.ಒಲಿಂಪಿಯನ್‌ಗಳೊಂದಿಗೆ ಸ್ಟಾರ್ ಮಗ: ವೇದಾಂತ್ ಅವರು ಜಪಾನ್‌ನಲ್ಲಿ ಈಜು ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಸಜ್ಜಾಗಿದ್ದಾರೆ. ಅವರು ಈಗಾಗಲೇ ಭಾರತಕ್ಕೆ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಈಗ ಅವರ ಗಮನ ಏಷ್ಯನ್ ಕ್ರೀಡಾಕೂಟದ ಮೇಲೆ ಇದೆ. ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಶ್ರೀಹರಿ ನಟರಾಜ್ ಮತ್ತು ಸಜನ್ ಪ್ರಕಾಶ್ ಅವರೊಂದಿಗೆ 12 ಸದಸ್ಯರ ತಂಡದಲ್ಲಿ ಅವರನ್ನು ಸೇರಿಸಲಾಗಿದೆ.ಏಷ್ಯನ್ ಕ್ರೀಡಾಕೂಟ ಆರಂಭ: ಏಷ್ಯನ್ ಕ್ರೀಡಾಕೂಟದ ಈಜು ಸ್ಪರ್ಧೆ ಸೆಪ್ಟೆಂಬರ್ 20 ರಿಂದ 25 ರವರೆಗೆ ನಡೆಯಲಿದೆ. ವೇದಾಂತ್ ಪುರುಷರ 200 ಮೀಟರ್ ಬ್ಯಾಕ್‌ಸ್ಟೊçÃಕ್, 200 ಮೀಟರ್ ಫ್ರೀಸ್ಟೆöÊಲ್ ಮತ್ತು 4x200 ಮೀಟರ್ ಫ್ರೀಸ್ಟೆöÊಲ್ ರಿಲೇಯಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಅವರು ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಜೊತೆಗೆ ಅವರು ಭಾರತಕ್ಕೆ ಪದಕ ಗೆದ್ದರೆ ಇತಿಹಾಸ ಸೃಷ್ಟಿಸಲು ಪಣ ತೊಟ್ಟಿರುವಂತೆ ಕಾಣಿಸುತ್ತಿದ್ದಾರೆ. ವೇದಾಂತ್ ಮಾಧವನ್ ಮೊದಲು ಜೂನಿಯರ್ ಹಂತದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. 2018ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಏಜ್ ಗ್ರೂಪ್ ಚಾಂಪಿಯನ್‌ಶಿಪ್‌ನಲ್ಲಿ 1500 ಮೀಟರ್ ಫ್ರೀಸ್ಟೆöÊಲ್‌ನಲ್ಲಿ ಕಂಚಿನ ಪದಕ ಗೆದ್ದರು. ಇದು ಅವರ ಮೊದಲ ಅಂತಾರಾಷ್ಟ್ರೀಯ ಪದಕ.