LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಭಾರತದ ವನಿತೆಯರಿಂದ ದಿಟ್ಟ ಆಟ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್‍ಸ್ವೀಪ್

ವಡೋದರಾ: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯವನ್ನು 5 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಭಾರತೀಯ ವನಿತೆಯರು 3-0ರಿಂದ ಸರಣಿ ಕ್ಲೀನ್‍ಸ್ವೀಪ್ ಮಾಡಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ವೆಸ್ಟ್‍ಇಂಡೀಸ್ ವನಿತೆಯರು ನೀಡಿದ 163 ರನ್‍ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತೀಯ ವನಿತೆಯರು 5 ವಿಕೆಟ್ ಕಳೆದುಕೊಂಡು 21 ಓವರ್‍ಗಳು ಉಳಿದಿರುವಂತೆಯೇ ಗುರಿಮುಟ್ಟಿ ವಿಜಯಿಯಾಯಿತು.

ಭಾರತ ಪರ ಆರಂಭಿಕರಾದ ಸ್ಮೃತಿ ಮಂಧಾನ(4) ಮತ್ತು ಪ್ರತಿಕಾ ರಾವಲ್(18) ಬೇಗನೆ ಔಟಾದರೂ ಮಧ್ಯಮ ಕ್ರಮಾಂಕದ ಬ್ಯಾಟರ್‍ಗಳು ತಂಡಕ್ಕೆ ಆಸರೆ ಒದಗಿಸಿ ತಂದವನ್ನು ಗೆಲುವಿನ ಗೆರೆ ದಾಟಲು ನೆರವಾದರು. ಹರ್ಮನ್‍ಪ್ರೀತ್ ಕೌರ್(32), ಜೆಮಿಮಾ ರೋಡ್ರಿಗಸ್(29), ದೀಪ್ತಿ ಶರ್ಮ(39) ದಿಟ್ಟ ಬ್ಯಾಟಿಂಗ್‍ನಿಂದ ಆಸರೆ ಒದಗಿಸಿದರು. ಪ್ರವಾಸಿ ತಂಡದ ಪರ ಡಿಯಾಂಡ್ರಾ, ಆಲಿಯಾ, ಹೇಯ್ಲಿ, ಫ್ಲೆಚರ್, ಕರಿಷ್ಮಾ ತಲಾ 1 ವಿಕೆಟ್ ಪಡೆದರು.

ಟಾಸ್ ಗೆದ್ದ ಪ್ರವಾಸಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆರಿಸಿಕೊಂಡಿತು. ಭಾರತೀಯ ಬೌಲರ್‍ಗಳ ಶಿಸ್ತುಬದ್ಧ ದಾಳಿ ವೆಸ್ಟ್ ಇಂಡೀಸ್ ತನ್ನ ನಿರ್ಧಾರವನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿತು. ದೀಪ್ತಿ ಶರ್ಮ(31ಕ್ಕೆ 6) ಮತ್ತು ರೇಣುಕಾ ಸಿಂಗ್(29ಕ್ಕೆ 4) ದಾಳಿಗೆ ತತ್ತರಿಸಿದ ವೆಸ್ಟ್‍ಇಂಡೀಸ್ ತಂಡ, ರನ್ ಗಳಿಸಲು ತಿಣುಕಾಡಿತು. ಅಂತಿಮವಾಗಿ ಭಾರತ ವೆಸ್ಟ್‍ಇಂಡೀಸ್ ಅನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಹೇಯ್ಲಿಪಡೆ 167 ರನ್‍ಗಳಿಗೆ ಸರ್ವಪತನ ಕಂಡಿತು.

ಬಾಕ್ಸ್- ದೀಪ್ತಿ ಪಂಚ ವಿಕೆಟ್ ಸಾಧನೆ ಆಲ್‍ರೌಂಡ್ ಆಟ ಪ್ರದರ್ಶಿಸಿದ ಭಾರತದ ದೀಪ್ತಿ ಶರ್ಮ 39 ರನ್ ಗಳಿಸಿದ್ದಲ್ಲದೆ 6 ವಿಕೆಟ್ ಪಡೆದು ಗೆಲುವಿನಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು. ವೆಸ್ಟ್ ಇಂಡೀಸ್‍ನ ಶಿಮೇನ್, ಚಿನೆಲ್, ಜೈದಾ, ಆಲಿಯಾ, ಫ್ಲೆಚರ್ ಮತ್ತು ಅಶ್ಮಿನಿ ವಿಕೆಟ್‍ಗಳನ್ನು ದೀಪ್ತಿ ಪಡೆದರು. ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು. ಸರಣಿಯುದ್ದಕ್ಕೂ ಮೊನಚಾದ ಬೌಲಿಂಗ್ ದಾಳಿ ನಡೆಸಿ ಒಟ್ಟು 10 ವಿಕೆಟ್ ಕಬಳಿಸಿದ ವೇಗದ ಬೌಲರ್ ರೇಣುಕಾ ಸಿಂಗ್ ಸರಣಿ ಶ್ರೇಷ್ಛ ಪ್ರಶಸ್ತಿಗೆ ಭಾಜನರಾದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು