LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಯುಎಸ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ ಕಾರ್ಲೋಸ್ ಅಲ್ಕರಾಝ್

 

ಯುಎಸ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕರಾಝ್ ಅನಿರೀಕ್ಷಿತ ಸೋಲು ಕಂಡಿದ್ದಾರೆ. ಅಮೆರಿಕದ ಬೆನ್ ಶೆಲ್ಟನ್ ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ಅಲ್ಕರಾಝ್ ಅವರನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಈ ಸೋಲಿನೊಂದಿಗೆ, ಅಲ್ಕರಾಝ್ ಅವರ 18 ಪಂದ್ಯಗಳ ಗೆಲುವಿನ ಸರಣಿ ಅಂತ್ಯಗೊAಡಿದೆ. ಶೆಲ್ಟನ್ ಈಗ ಫ್ರಾನ್ಸಿಸ್ ಟಿಯಾಫೊ ಅವರನ್ನು ಎದುರಿಸಲಿದ್ದಾರೆ. ಇದು ಯುಎಸ್ ಓಪನ್ ಇತಿಹಾಸದ ದೀರ್ಘ ಪಂದ್ಯಗಳಲ್ಲಿ ಒಂದಾಗಿತ್ತು.ಯುಎಸ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ಪಂದ್ಯಾವಳಿಯನ್ನು ಗೆಲ್ಲುವ ನೆಚ್ಚಿನ ಆಟಗಾರನೆನಿಸಿಕೊಂಡಿದ್ದ ಕಾರ್ಲೋಸ್ ಅಲ್ಕರಾಝ್, ಅಮೆರಿಕದ ಬೆನ್ ಶೆಲ್ಟನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಶೆಲ್ಟನ್, ಅಲ್ಕರಾಝ್ ಅವರನ್ನು 6-7 (5), 6-1, 6-3, 1-6, 7-6 (10-7) ಅಂತರದಲ್ಲಿ ಸೋಲಿಸಿದರು. 4 ಗಂಟೆ 28 ನಿಮಿಷಗಳ ಕಾಲ ನಡೆದ ಈ ಪಂದ್ಯ ಯುಎಸ್ ಓಪನ್ ಇತಿಹಾಸದಲ್ಲಿ ಅತಿ ದೀರ್ಘ ಸಮಯ ನಡೆದ ಪಂದ್ಯವೂ ಆಗಿತ್ತು. ಆದಾಗ್ಯೂ ಈ ಪಂದ್ಯದಲ್ಲಿ ಅಲ್ಕರಾಝ್ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ, ಗ್ರ್ಯಾಂಡ್ ಸ್ಯಾಮ್ ಪಂದ್ಯಾವಳಿಗಳಲ್ಲಿ ಅಲ್ಕರಾಝ್ ಅವರ 18 ಪಂದ್ಯಗಳ ಗೆಲುವಿನ ಸರಣಿ ಕೊನೆಗೊಂಡಿದೆಅಲ್ಕರಾಝ್ ಮೊದಲ ಸೆಟ್ ಅನ್ನು ಟೈಬ್ರೇಕ್‌ನಲ್ಲಿ ಗೆದ್ದರು. ಎರಡನೇ ಸೆಟ್‌ನಲ್ಲಿ ಬಲವಾದ ಪುನರಾಗಮನ ಮಾಡಿದ ಶೆಲ್ಟನ್ ಸೆಟ್ ಅನ್ನು 6-1 ರಿಂದ ಗೆದ್ದರು. ನಂತರ ಮೂರನೇ ಸೆಟ್ ಕೂಡ 6-3 ರಿಂದ ಶೆಲ್ಟನ್ ಪಾಲಾಯಿತು. ನಾಲ್ಕನೇ ಸೆಟ್‌ನಲ್ಲಿ ಲಯಕ್ಕೆ ಮರಳಿದ ಅಲ್ಕರಾಝ್ 6-1 ರಿಂದ ಗೆದ್ದರು. ಐದನೇ ಮತ್ತು ನಿರ್ಣಾಯಕ ಸೆಟ್ 6-6 ರ ಸಮಬಲದೊಂದಿಗೆ ಅಂತ್ಯಗೊಂಡಿತು. ಹೀಗಾಗಿ ಟೈಬ್ರೇಕ್‌ನಲ್ಲಿ ವಿಜೇತರನ್ನು ನಿರ್ಧರಿಸಬೇಕಾಯಿತು. ಈ ಟೈಬ್ರೇಕ್‌ನಲ್ಲಿ ಶೆಲ್ಟನ್ 10-7 ಅಂತರದಿAದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.ಶೆಲ್ಟನ್ ಈಗ ಸೆಮಿಫೈನಲ್‌ನಲ್ಲಿ ಫ್ರಾನ್ಸಿಸ್ ಟಿಯಾಫೊ ಅವರನ್ನು ಎದುರಿಸಲಿದ್ದಾರೆ. ಟಿಯಾಫೊ ನಾಲ್ಕು ಗಂಟೆ 38 ನಿಮಿಷಗಳ ಕಾಲ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೈಕೆಲ್ಸನ್ ಅವರನ್ನು 5-7, 3-6, 7-5, 6-3, 7-6 (10-6) ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಸಾಧಿಸಿದ್ದಾರೆ. ಇನ್ನು ಈ ಪಂದ್ಯಾವಳಿಯಲ್ಲಿ ಅಲ್ಕರಾಝ್ ಅವರ ಪ್ರದರ್ಶನವನ್ನು ನೋಡುವುದಾದರೆ.ಮೊದಲ ಸುತ್ತಿನಲ್ಲಿ ಸೈಫುಲ್ಲಾ ಅವರನ್ನು 6-4, 6-4, 6-4 ಅಂತರದಲ್ಲಿ ಸೋಲಿಸಿದ ಅಲ್ಕರಾಝ್, ಎರಡನೇ ಸುತ್ತನ್ನು 4-6, 6-0, 6-3, 6-2 ಅಂತರದಲ್ಲಿ ಗೆದ್ದರು. ಮೂರನೇ ಸುತ್ತಿನಲ್ಲಿ ವೈಬಿ ವು ಅವರನ್ನು 6-3, 6-4, 6-1 ಸೆಟ್‌ಗಳಿಂದ ಸೋಲಿಸಿದ ಅಲ್ಕರಾಝ್, 16 ರ ಸುತ್ತಿನಲ್ಲಿ ಟಾಮಿ ಪಾಲ್ ಅವರನ್ನು 6-4, 6-3, 6-4 ಸೆಟ್‌ಗಳಿಂದ ಮಣಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST