ಲಂಡನ್: ಕಳೆದ ತಿಂಗಳು ಲಾರ್ಡ್ಸ ಟೆಸ್ಟ್ನಲ್ಲಿ ಪಾಕಿಸ್ತಾನ ತಂಡ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ಮತ್ತೊಂದು ವಿವಾದ ಸ್ಫೋಟಗೊಂಡಿದೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಆಂತರಿಕ ಶಿಸ್ತಿನ ವಿಚಾರಣೆ ಆರಂಭಿಸಿದೆ ಎಂದು ವರದಿಯಾಗಿದೆ.ಕಳೆದ ತಿಂಗಳು ಇಂಗ್ಲೆAಡ್ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಅದ್ರಲ್ಲೂ ಐತಿಹಾಸಿಕ ಲಾರ್ಡ್್ಸ ಮೈದಾನದಲ್ಲಿ ಆ.27 ರಂದು ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪಾಕ್ 194 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಸರಣಿ ಅಂತಿಮ ಟೆಸ್ಟ್ಗೂ ಮುನ್ನವೇ ತಂಡದಲ್ಲಿ ಭಾರೀ ಬದಲಾವಣೆ ಕೂಡ ಮಾಡಲಾಗಿತ್ತು. 7 ಆಟಗಾರರನ್ನ ತಂಡದಿಂದ ಕೈಬಿಡಲಾಗಿತ್ತು. ಇದರ ಜೊತೆಗೆ ಕೋಚಿಂಗ್ ಸಿಬ್ಬಂದಿಯ ಇಬ್ಬರು ಸದಸ್ಯರನ್ನೂ ತೆಗೆದುಹಾಕಲಾಯಿತು. ವಕ್ತಾರ ಅಮೀರ್ ಮಿರ್ ಅವರು ಸೆಪ್ಟೆಂಬರ್ 7ರಂದು ತನಿಖೆ ಆರಂಭಿಸಿರುವುದನ್ನ ಖಚಿತಪಡಿಸಿದ್ದಾರೆ. ತಂಡದೊಳಗಿನ ಶಿಸ್ತು ಮತ್ತು ನಡವಳಿಕೆಗೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಶಿಸ್ತು ಮತ್ತು ನಡವಳಿಕೆಗೆ ಸಂಬಂಧಿಸಿದ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ Pಅಃ ಆಂತರಿಕ ಶಿಸ್ತು ತನಿಖೆಯನ್ನು ಆರಂಭಿಸಿದೆ. ಈ ವಿಷಯವನ್ನು ಮಂಡಳಿಯ ನಿಯಮಾವಳಿಗಳ ಪ್ರಕಾರ ಪರಿಶೀಲಿಸಲಾಗುತ್ತಿದೆ. ಸಂಬAಧಪಟ್ಟ ಎಲ್ಲರಿಗೂ ತಮ್ಮ ವಿಚಾರ ಮಂಡಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ ಅಮೀರ್.ಮ್ಯಾಚ್ ಫಿಕ್ಸಿಂಗ್ ಆರೋಪ ಮತ್ತೆ ಮುನ್ನೆಲೆಗೆ: Pಅಃ ಆರಂಭಿಸಿರುವ ಆಂತರಿಕ ತನಿಖೆಯ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಮತ್ತೆ ಹುಟ್ಟಿಕೊಂಡಿವೆ. ಪಾಕ್‌ನ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ತಂಡದಲ್ಲಿನ ಇತ್ತೀಚಿನ ಭಾರೀ ಬದಲಾವಣೆಗಳು ಕೇವಲ ಆಟಗಾರರ ಪ್ರದರ್ಶನಕ್ಕೆ ಸೀಮಿತವಾಗಿರದೇ, ಇನ್ನೂ ಅನೇಕ ಕಾರಣಗಳಿರಬಹುದು ಎಂಬ ಚರ್ಚೆ ಹುಟ್ಟಿಕೊಂಡಿವೆ. ಮತ್ತೊಂದು ಕಡೆ ಕೆಲ ಆಟಗಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಪಿಸಿಬಿಗೆ ಒಪ್ಪಿಸಿದ್ದು, ಅಂತಿಮ ಟೆಸ್ಟ್ ಮುಗಿಯುವವರೆಗೆ ಪಿಸಿಬಿ ವಶದಲ್ಲಿರಲಿವೆ ಎಂದು ತಿಳಿದು ಬಂದಿದೆ. ಇದು ಮ್ಯಾಚ್‌ಫಿಕ್ಸಿಂಗ್ ವದಂತಿಗಳಿಗೆ ಪುಷ್ಠಿ ನೀಡಿವೆ.