ಕೊಲಂಬೊ: ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಪರ ಕನ್ನಡಿಗ ದೇವದತ್ ಪಡಿಕ್ಕಲ್‌ತಮ್ಮ ಅಮೋಘ ಪ್ರದರ್ಶನವನ್ನು ಎರಡನೇ ಟೆಸ್ಟ್ನಲ್ಲೂ ಮುಂದುವರೆಸಿ ಸ್ಮರಣೀಯ ಶತಕ ಬಾರಿಸಿದ್ದಾರೆ. ಈ ಸರಣಿಯಲ್ಲಿ ಪಡಿಕ್ಕಲ್ ಅವರ ಸತತ ಎರಡನೇ ಶತಕವಾಗಿದ್ದರೆ, ಅವರ ಟೆಸ್ಟ್ ವೃತ್ತಿಜೀವನದ ಎರಡನೇ ಶತಕವೂ ಇದಾಗಿದೆ. ಪಡಿಕ್ಕಲ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 250 ರನ್‌ಗಳ ಗಡಿ ದಾಟಿದ್ದು, ದೊಡ್ಡ ಮೊತ್ತ ಪೇರಿಸುವತ್ತ ಹೆಜ್ಜೆ ಇಟ್ಟಿದೆ.
ಗಿಲ್ ಜೊತೆಗೆ 120 ರನ್‌ಗಳ ಜೊತೆಯಾಟ: ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸಾಧಾರಣ ಆರಂಭ ಲಭಿಸಿತು. ಮೊದಲ ವಿಕೆಟ್‌ಗೆ ರಾಹುಲ್ ಮತ್ತು ಜೈಸ್ವಾಲ್ 37 ರನ್‌ಗಳ ಜೊತೆಯಾಟ ನೀಡಿದರು. 18 ರನ್ ಬಾರಿಸಿ ರಾಹುಲ್ ಔಟಾದ ಬಳಿಕ ಬ್ಯಾಟಿಂಗ್‌ಗೆ ಬಂದ ಪಡಿಕ್ಕಲ್ ಮೊದಲ ಟೆಸ್ಟ್ನಲ್ಲಿ ಎಲ್ಲಿಗೆ ನಿಲ್ಲಿಸಿದ್ದರೋ ಅಲ್ಲಿಂದಲೇ ತಮ್ಮ ಆಟವನ್ನು ಮುಂದುವರೆಸಿದರು. ಇದರ ಫಲವಾಗಿ ಪಡಿಕ್ಕಲ್ ದಿನದಾಟದ ಎರಡನೇ ಸೆಷನ್‌ನಲ್ಲಿ 90 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಇದರ ಜೊತೆಗೆ ಪಡಿಕ್ಕಲ್ ನಾಯಕ ಶುಭ್‌ಮನ್ ಗಿಲ್ ಜೊತೆಗೆ ಮೂರನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟವನ್ನು ನಿರ್ಮಿಸಿದರು.ದಿಗ್ಗಜರ ಪಟ್ಟಿಯಲ್ಲಿ ಸ್ಥಾನ: ನಾಯಕ ಶುಭ್‌ಮನ್ ಗಿಲ್ ಔಟಾದ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸಿದ ದೇವದತ್ ಪಡಿಕ್ಕಲ್ 7ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಹಾಗೂ 1 ಸಿಂಗಲ್ ಕದಿಯುವ ಮೂಲಕ ತಮ್ಮ ಎರಡನೇ ಶತಕವನ್ನು 178 ಎಸೆತಗಳಲ್ಲಿ ಪೂರೈಸಿದರು. ಈ ಮೂಲಕ ಪಡಿಕ್ಕಲ್ ಶ್ರೀಲಂಕಾದಲ್ಲಿ 2 ಟೆಸ್ಟ್ ಶತಕಗಳನ್ನು ಬಾರಿಸಿದ್ದ ದಿಗ್ಗಜರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಡಿಕ್ಕಲ್‌ಗೂ ಮೊದಲು ವಿನೋದ್ ಕಾಂಬ್ಳಿ, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಶಿಖರ್ ಧವನ್ ಈ ಸಾಧನೆ ಮಾಡಿದ್ದರು. ಇದರರ್ಥ ಪಡಿಕ್ಕಲ್ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ ಏಳನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು.
3ನೇ ಕ್ರಮಾಂಕದಲ್ಲಿ ಐತಿಹಾಸಿಕ ಶತಕ: ಸಾಯಿ ಸುದರ್ಶನ್ ಗಾಯಗೊಂಡ ಕಾರಣದಿಂದಾಗಿ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದಿರುವ ಪಡಿಕ್ಕಲ್ ಈ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಟೆಸ್ಟ್ನಲ್ಲಿ ಕ್ರಮವಾಗಿ 167 ಮತ್ತು 44 ರನ್‌ಗಳ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್ ಇದೀಗ ಎರಡನೇ ಟೆಸ್ಟ್ನಲ್ಲೂ 117 ರನ್‌ಗಳ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಪಡಿಕ್ಕಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಭಾರತದ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದ ದಾಖಲೆಯಲ್ಲಿ 6ನೇ ಸ್ಥಾನದಲ್ಲಿದ್ದ ಪಾಲಿ ಉಮ್ರಿಗರ್ ಅವರನ್ನು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ 28 ಶತಕಗಳನ್ನು ಬಾರಿಸಿರುವ
ರಾಹುಲ್ ದ್ರಾವಿಡ್ ಮೊದಲ ಸ್ಥಾನದಲ್ಲಿದ್ದಾರೆ.