LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಸೂಪರ್‌ನೋವಾ ಫುಟ್ಬಾಲ್ ಚಾಂಪಿಯನ್‌ಶಿಪ್‌ಗೆ ಅದ್ದೂರಿ ಚಾಲನೆ


ಬೆಂಗಳೂರು: ಬೆಂಗಳೂರಿನ ಡಿಪೋ18 ಮೈದಾನದಲ್ಲಿ ಭಾನುವಾರ ನಡೆದ ಸಮಾರೋಪದೊಂದಿಗೆ ಮೊದಲ ಬಾರಿಗೆ ಆಯೋಜಿಸಲಾದ ಸೂಪರ್ನೋವಾ ಫುಟ್ಬಾಲ್ ಚಾಂಪಿಯನ್ಷಿಪ್ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕ್ಯಾಪ್ರಿ ಸ್ಪೋರ್ಟ್ಸ್ ನ ನೋವಾ ಸ್ಪೋರ್ಟ್ಸ್ ಉಪಕ್ರಮದಡಿ ನಡೆದ ಈ ಚಾಂಪಿಯನ್ಷಿಪ್ನಲ್ಲಿ 13, 15 ಮತ್ತು 17 ವರ್ಷದೊಳಗಿನವರ ವಿಭಾಗಗಳಲ್ಲಿ ಎರಡು ದಿನಗಳ ಕಾಲ ಸ್ಪರ್ಧಿಸಿದವು.ಬಾಲಕಿಯರನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾಗಿದ್ದ ಈ ಚಾಂಪಿಯನ್ಷಿಪ್ನಲ್ಲಿ ಮೈದಾನದಿಂದ ಹಿಡಿದು ಫುಟ್ಬಾಲ್ ಪಂದ್ಯಗಳವರೆಗೆ ಹಾಗೂ ಪಂದ್ಯಗಳ ಸುತ್ತಮುತ್ತಲಿನ ಸಂಪೂರ್ಣ ಅನುಭವಕ್ಕೆ ವಿಶೇಷ ಆದ್ಯತೆ ನೀಡಲಾಗಿತ್ತು.ಡಿಪೋ18ಕ್ಕೆ ಆಗಮಿಸಿದ ಆಟಗಾರ್ತಿಯರು, ತರಬೇತುದಾರರು ಹಾಗೂ ಕುಟುಂಬ ಸದಸ್ಯರಿಗೆ ಶಾಲಾ ಮಟ್ಟದ ಬಾಲಕಿಯರ ಫುಟ್ಬಾಲ್ನಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವಂತಹ ಪಂದ್ಯಾವಳಿ ಅನುಭವ ದೊರೆಯಿತು. ಹಲವು ಮೈದಾನಗಳು, ವೃತ್ತಿಪರವಾಗಿ ನಿರ್ವಹಿಸಲಾದ ಸ್ಪರ್ಧಾ ಮಾದರಿ ಹಾಗೂ ಉನ್ನತ ಮಟ್ಟದ ಫುಟ್ಬಾಲ್ ಪಂದ್ಯಗಳ ವಾತಾವರಣವನ್ನು ಹೋಲುವ ಉತ್ಸಾಹಭರಿತ ವಾತಾವರಣ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿತ್ತು.ಪಂದ್ಯಗಳಲ್ಲಿಯೂ ಅದೇ ಮಟ್ಟದ ಪೈಪೋಟಿ ಕಂಡುಬಂತು. ಎರಡು ದಿನಗಳಲ್ಲಿ ಒಟ್ಟು 69 ಪಂದ್ಯಗಳು ನಡೆದಿದ್ದು, 222 ಗೋಲುಗಳು ದಾಖಲಾಗಿವೆ. ಎಲ್ಲಾ ತಂಡಗಳು ಕೊನೆಯ ಸೀಟಿಯವರೆಗೂ ಹೋರಾಟ ನಡೆಸಿದ್ದು, ಮೂರು ವಯೋಮಾನದ ವಿಭಾಗಗಳಲ್ಲೂ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿದ್ದವು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST