LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಹಣಕ್ಕಾಗಿ ಗೆಳೆಯನ ಕೊಲೆ: ಪೊಲೀಸ್‌ ತನಿಖೆಯಲ್ಲಿ ಹೊರಬಿದ್ದ ಸತ್ಯ

ದೇವನಹಳ್ಳಿ: ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ. ಅಲ್ಲಿನ ಬಡಾವಣೆಯ ಮಣ್ಣಿನಲ್ಲಿ ಪೊಲೀಸರು ಇಂಚಿಂಚೂ ಶೋಧ ನಡೆಸುತ್ತಿದ್ದರೆ, ಇತ್ತ ಕೆರೆ ನೀರು ಏರಿ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ‌. ಕೆರೆಯಲ್ಲಿ ಎಲ್ಲಾ ಕಡೆ ಹುಡುಕಾಡಿದ ಪೊಲೀಸರಿಗೆ ಚೀಲದ ಮೂಟೆಯೊಂದು ಸಿಕ್ಕಿದೆ. ಮೂಟೆಯಲ್ಲಿ ಏನಿದೆ ಅಂತ ಕುತೂಹಲದಿಂದ ನೋಡಿದವರಿಗೆ ಕಾಣಿಸಿದ್ದು ಎರಡು ತಿಂಗಳ ಹಿಂದದೆ ಕೊಳೆತು ಅರೆ ಬರೆ ಬೆಂದಿರುವ ಮೃತದೇಹದ ಅಂಗಾಂಗಗಳು ಈ ರೀತಿ ಕ್ರೂರವಾಗಿ ಕೊಲೆಯಾಗಿರುವವರ ಹೆಸರು ದೇವರಾಜ್.

ಜೊತೆಯಲ್ಲೇ ಊಟ ಮಾಡಿ, ಕಷ್ಟ ಬಂದಾಗ ಕೇಳಿದಾಗಲೆಲ್ಲ ಲಕ್ಷ ಲಕ್ಷ ರೂಪಾಯಿ ಹಣ ಕೊಟ್ಟಿದ್ದ ಸ್ನೇಹಿತನನ್ನೇ ಸಿನಿಮೀಯ ರೀತಿಯಲ್ಲಿ ಹತ್ಯೆ ಮಾಡಿರುವವನ್ನು ಕೊನೆಗೂ ಪೊಲೀಸರು ಬಲೆಗೆ ಕೆಡವಿದ್ದಾರೆ. ರಾಜ್ ಕುಮಾರ್ ಮತ್ತು ಅನಿಲ್ ಎಂಬವರನ್ನು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ನಿವಾಸಿಯಾದ ರಾಜ್ ಕುಮಾರ್ ಎಂಬವರು ಪಕ್ಕದ ಗ್ರಾಮದ ದೇವರಾಜ್ ಜೊತೆ ಸೇರಿ ರಿಯಲ್ ಎಸ್ಟೇಟ್ ಮತ್ತು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ದೆಹಲಿಯಿಂದ ತಂದು ಇಲ್ಲಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಕಳೆದ ಕೆಲ‌ ವರ್ಷಗಳಿಂದ ಇಬ್ಬರೂ ಜೊತೆಯಾಗಿಯೇ ವ್ಯವಹಾರ ಮಾಡುತ್ತಿದ್ದರು. ಅಂತಾರಾಜ್ಯ ವಾಹನಗಳನ್ನು ತಂದು ಮಾರಾಟ ಮಾಡಿ ಬಂದ ಲಾಭದ ಹಣವನ್ನ ಹಂಚಿಕೊಳ್ಳುತ್ತಿದ್ದರು.

ಹೀಗಾಗಿ ಲಕ್ಷ ಲಕ್ಷ ರೂಪಾಯಿ ಹಣವನ್ನು ಸ್ನೇಹಿತ ರಾಜ್ ಕುಮಾರ್​ಗೆ ದೇವರಾಜ್ ನಂಬಿಕೆ ಮೇಲೆ ಕೊಟ್ಟಿದ್ದರು. ಕೆಲ ತಿಂಗಳುಗಳಿಂದ ಕೊಟ್ಟ ಹಣವನ್ನ ವಾಪಸ್ ಕೇಳಿದ್ದರಂತೆ. ಪದೇಪದೇ ಹಣ ವಾಪಸ್ ಕೇಳಿದ್ದಕ್ಕೆ ರೊಚಿಗೆದ್ದ ರಾಜ್ ಕುಮಾರ್, ಸ್ನೇಹಿತ ದೇವರಾಜ್​ರನ್ನು ಕೊಲೆ ಮಾಡುವ ಸ್ಕೇಚ್ ಹಾಕಿದ್ದಾನೆ. ಅಲ್ಲದೆ ಅದಕ್ಕಾಗಿ ಆಂಧ್ರ ಮೂಲದ ಅನಿಲ್ ಎಂಬ ಸ್ನೇಹಿತನನ್ನ ಕರೆಸಿಕೊಂಡಿದ್ದು ಯುಪಿ ರಿಜಿಸ್ಟರ್ ಮೂಲದ ಕಾರಿನಲ್ಲಿ ಅಕ್ಟೋಬರ್ 17 ರಂದು ಹಣ ನೀಡುವುದಾಗಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಸ್ನೇಹಿತನ ಸಂಚು ತಿಳಿಯದೆ ಕಾರು ಹತ್ತಿದ ದೇವರಾಜ್​​ನನ್ನು ನಿರ್ಜನ‌ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಇದೇ ವೇಳೆ, ಕಾರಿನಲ್ಲಿ ಮುಂದೆ ಕುಳಿತಿದ್ದ ದೇವರಾಜ್​​ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಅನಿಲ್ ಕೊಲೆ ಮಾಡಿದ್ದಾನೆ.

ದೇವರಾಜ್​​ರನ್ನು ಕೊಲೆ ಮಾಡುವ ಮುನ್ನವೇ ಖಾಸಗಿ ಬಡಾವಣೆಯಲ್ಲಿ ಸಂಪು ಕಟ್ಟಬೇಕು ಎಂಬ ನೆಪದಲ್ಲಿ ರಾಜ್​ಕುಮಾರ್ ಜೆಸಿಬಿ ಮೂಲಕ ಗುಂಡಿ‌ ತೆಗೆಸಿದ್ದ. ನಂತರ ಅದೇ ಗುಂಡಿಯಲ್ಲಿ ದೇವರಾಜ್ ಮೃತದೇಹವನ್ನು ಹಾಕಿ ಮಣ್ಣು ಮುಚ್ಚಿದ್ದಾರೆ.

ಕೊಲೆ ಮಾಡಿದ ನಂತರ ಮೂರು ದಿನಗಳ ಬಳಿಕ ಕೊಲೆ ಮಾಡಿದ ದೇವರಾಜ್ ಕುಟುಂಬಸ್ಥರ ಜೊತೆಗೂಡಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೇವರಾಜ್ ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ. ಹೀಗಾಗಿ ಎಲ್ಲಾ ಅಯಾಮದಲ್ಲೂ ತನಿಖೆ ನಡೆಸಿದ ಇನ್ಸ್​​​ಪೆಕ್ಟರ್ ಸಾಧಿಕ್ ಪಾಷಗೆ ಮೊದಲಿಗೆ ನಾಪತ್ತೆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗೆ ಬೇರೆ ಆಯಾಮಾದಲ್ಲಿ ತನಿಖೆಗಿಳಿದ ಪೊಲೀಸರಿಗೆ ರಾಜ್ ಕುಮಾರ್ ಮೇಲೆ ಅನುಮಾನ ಮೂಡಿದ್ದು, ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ 20 ಲಕ್ಷ ರೂ. ಸಾಲ ನೀಡಿದ್ದನ್ನು ದೇವರಾಜ್ ಪದೇ ಪದೆ ಕೇಳುತ್ತಿದ್ದ ಕಾರಣ ಸ್ನೇಹಿತ ಅನಿಲ್ ಜೊತೆಗೂಡಿ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಹೂತಿದ್ದ ಹೆಣ ಸಿಗಬಾರದು ಎಂದು ಕೊಲೆಯಾದ ಒಂದು ತಿಂಗಳ ಬಳಿಕ ಅದನ್ನು ಗುಂಡಿಯಿಂದ ತೆಗೆದು ಪೆಟ್ರೋಲ್ ಹಾಕಿ ಸುಟ್ಟಿದ್ದ. ಸುಟ್ಟ ನಂತರ ಬೂದಿ ಸಮೇತ ಕೆರೆಗೆ ಹಾಕಿದ್ದಾಗಿ ವಿಚಾರಣೆ ವೇಳೆ ಹೇಳಿದ್ದು, ಕೆರೆಗೆ ಹಾಕಿದ್ದ ಮೃತದೇಹದ ಮೂಳೆಗಳನ್ನು ಹೊರ ತೆಗೆಯಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು