LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್: ಅರವಿಂದ್ ಮುಡಿಗೆ ಕಿರೀಟ
ಕಡೆಯ ಎರಡು ಸುತ್ತುಗಳಲ್ಲಿ ಅಮೋಘ ರೀತಿ ಪುಟಿದೆದ್ದ  ಗ್ರ್ಯಾಂಡ್‌ ಮಾಸ್ಟರ್ ಅರವಿಂದ ಚಿದಂಬರಮ್ ನಂತರ ಬ್ಲಿಟ್ಜ್ನಲ್ಲೂ ಮಿಂಚಿ, ಚೆನ್ನೈ ಗ್ರ್ಯಾಂಡ್‌ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಸೋಮವಾರ ಚಾಂಪಿಯನ್ ಮುಕುಟ ಧರಿಸಿದರು. ಚಾಲೆಂಜರ್ಸ್ ವಿಭಾಗದಲ್ಲಿ ವಿ.ಪ್ರಣವ್ ಅರ್ಹವಾಗಿ ಪ್ರಶಸ್ತಿ ಗೆದ್ದುಕೊಂಡರು.
ಮಾಸ್ಟರ್ಸ್ ವಿಭಾಗದಲ್ಲಿ ಏಳನೇ (ಕೊನೆಯ) ಸುತ್ತಿನ ನಂತರ ಮೂವರು ಅಗ್ರಸ್ಥಾನ ಹಂಚಿಕೊಂಡಿದ್ದರು. ಅರವಿಂದ ಚಿದಂಬರಮ್, ಅಮೆರಿಕದ ಲೆವೊನ್ ಅರೋನಿಯನ್ ಮತ್ತು ಅರ್ಜುನ್ ಇರಿಗೇಶಿ ಅವರು ತಲಾ ೪.೫ ಪಾಯಿಂಟ್ಸ್ ಗಳಿಸಿದ್ದರು.
ಅರವಿಂದ ಉತ್ತಮ ಟೈಬ್ರೇಕ್ ಹೊಂದಿದ್ದು ನೇರವಾಗಿ ಪ್ರಶಸ್ತಿ ಸುತ್ತಿಗೆ ತಲುಪಿದರು. ಹೀಗಾಗಿ ಅರೋನಿಯನ್ ಮತ್ತು ಅರ್ಜುನ್ ನಡುವಣ ಎರಡು ಪಂದ್ಯಗಳ ಬ್ಲಿಟ್ಜ್ ಸ್ಪರ್ಧೆ ನಡೆದವು. ಇದರಲ್ಲಿ ಇಬ್ಬರೂ ತಲಾ ಒಂದು ಗೆದ್ದ ಕಾರಣ 'ಸಡನ್ ಡೆತ್' ಅಳವಡಿಸಲಾಯಿತು. ಇದರಲ್ಲಿ ಕಪುö್ಪ ಕಾಯಿಗಳಲ್ಲಿ ಆಡಿ ಡ್ರಾ ಮಾಡಿದ ಅರೋನಿಯನ್ ಗೆದ್ದರು.
ನಂತರ ಪ್ರಶಸ್ತಿಗೆ ನಡೆದ ಹಣಾಹಣಿಯಲ್ಲಿ ಅರವಿಂದ್ ಪ್ಲೇ ಆಫ್‌ನ ಮೊದಲ ಪಂದ್ಯ ಗೆದ್ದುಕೊಂಡರು. ನಂತರ ಕಪುö್ಪ ಕಾಯಿಗಳಲ್ಲಿ ಆಡಿ ಎರಡನೇ ಪಂದ್ಯ ಡ್ರಾ ಮಾಡಿಕೊಂಡು ಫೈನಲ್‌ನ ವಿಜೇತರಾದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು