LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

8 ವರ್ಷದ ಹಿಂದಿನ ಆರ್ ಅಶ್ವಿನ್ ದಾಖಲೆ ಸರಿಗಟ್ಟಿದ ವೇಗಿ ಜಸ್ಪ್ರೀತ್ ಬುಮ್ರಾ!

ಭಾರತದ ವೇಗಿ ಜಸ್‍ಪ್ರಿತ್ ಬುಮ್ರಾ ಭಾರತೀಯ ಬೌಲರ್‍ಗಳ ಪೈಕಿ ಐಸಿಸಿ ರೇಟಿಂಗ್ ಇತಿಹಾಸದಲ್ಲೇ ಜಂಟಿ ಅತ್ಯುತ್ತಮ ಸ್ಥಾನ ಗಳಿಸಿದ್ದಾರೆ. ಈ ಹಾದಿಯಲ್ಲಿ ಅವರು ಸ್ಪಿನ್ನರ್ ಹಾಗೂ ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ರವಿಚಂದ್ರನ್ ಅಶ್ವಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಬ್ರಿಸ್ಬೇನ್‍ನಲ್ಲಿ ಡ್ರಾನಲ್ಲಿ ಕೊನೆಗೊಂಡ ಮೂರನೇ ಟೆಸ್ಟ್‍ನಲ್ಲಿ 94ಕ್ಕೆ 9 ವಿಕೆಟ್ ಪಡೆದ ಬುಮ್ರಾ, ತ್ವರಿತವಾಗಿ 14 ರೇಟಿಂಗ್ ಪಾಯಿಂಟ್ಸ್ ಗಿಟ್ಟಿಸಿದ್ದಾರೆ. ಈ ಮೂಲಕ ಐಸಿಸಿ ರ?ಯಾಂಕಿಂಗ್ ನಲ್ಲಿ ಗರಿಷ್ಠ 904 ರೇಟಿಂಗ್ ಅಂಕಗಳನ್ನು ಹೊಂದಿದ್ದ ಅಶ್ವಿನ್ ಅವರ ದಾಖಲೆಯನ್ನು ಸಮಗೊಳಿಸಿದ್ದಾರೆ.ಅಶ್ವಿನ್ ಹಿಂದಿಕ್ಕಲು ಸಹ ಅವಕಾಶಇದು ಮಾತ್ರವಲ್ಲದೆ, ಬೌಲರ್‍ಗಳ ರ?ಯಾಂಕಿಂಗ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಗುರುವಾರ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್‍ನಲ್ಲಿ ಕಣಕ್ಕಿಳಿಯುತ್ತಿರುವ ಬುಮ್ರಾ, 2016ರಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಎಂಬ ಸಾಧನೆ ಮಾಡಿರುವ ಅಶ್ವಿನ್ ಅವರ ದಾಖಲೆ ಮುರಿಯಲು ಈಗ ಅತ್ಯುತ್ತಮ ಅವಕಾಶವಿದೆ.

ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (856) ಮತ್ತು ಆಸ್ಪ್ರೇಲಿಯಾದ ಜೋಶ್ ಹೇಜಲ್‍ವುಡ್ (852) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಆಲ್‍ರೌಂಡರ್‍ಗಳ ವಿಭಾಗದಲ್ಲಿ 424 ಅಂಕಗಳನ್ನು ಹೊಂದಿರುವ ಭಾರತದ ರವೀಂದ್ರ ಜಡೇಜಾ, ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಸಾಧನೆ ಮಾಡಲು ಜಸ್‍ಪ್ರಿತ್ ಬುಮ್ರಾ ಅವರಿಗೆ 6 ವಿಕೆಟ್ ಗಳ ಅಗತ್ಯವಿದೆ. ಇದು ಸಾಧ್ಯವಾದರೆ, ಈ ಸಾಧನೆ ಮಾಡಿದ 12ನೇ ಭಾರತೀಯ ಬೌಲರ್ ಎನಿಸಲಿದ್ದಾರೆ.

ಭರ್ಜರಿ ಫಾರ್ಮ್ ನಲ್ಲಿ ಬುಮ್ರಾಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಬುಮ್ರಾ ಅವರು ಆಡಿರುವ 3 ಪಂದ್ಯಗಳಿಂದ ಒಟ್ಟು 21 ವಿಕೆಟ್ ಗಳಿಸಿದ್ದಾರೆ. ಒಂದು ವೇಳೆ ಮೆಲ್ಬರ್ನ್ ನಲ್ಲಿ 9 ವಿಕೆಟ್ ಗಳಿಸಲು ಸಾಧ್ಯವಾದರೆ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸರಣಿಯೊಂದರಲ್ಲಿ 30 ವಿಕೆಟ್ ಗಳಿಸಿದ ಮೊದಲ ವೇಗದ ಬೌಲರ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಬೆನ್ ಹಿಲ್ಫೆನಾಝ್ 2011ರಲ್ಲಿ 27 ವಿಕೆಟ್ ಪಡೆದಿರುವುದು ಈವರೆಗಿನ ದಾಖಲೆಯಾಗಿದೆ. ಒಂದು ವೇಳೆ ಮೆಲ್ಬರ್ನ್ ನಲ್ಲಿ ಈ ಸಾಧನೆ ಅಸಾಧ್ಯವಾದರೆ ಸಿಡ್ನಿಯಲ್ಲೂ ಅವಕಾಶ ಇದ್ದೇ ಇದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು