LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಫಿಲ್ ಸಾಲ್ಟ್ ಆರ್ಭಟಕ್ಕೆ ವಿರಾಟ್ ಸಾಥ್! MIಗೆ ಹೀನಾಯ ಸೋಲು

ಮೊದಲ ಬಾರಿ ಸೀಸನ್ ನಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಫಿಲ್ ಸಾಲ್ಟ್. ಅನಾರೋಗ್ಯದ ನಡುವೆಯೂ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ! ಐಪಿಎಲ್ ನ ಅತಿ ವೇಗದ ಅರ್ಧಶತಕ ತಪ್ಪಿದರೂ ಶರವೇಗದ ಶತಕ ಹೊಡೆದ ನಾಯಕ ರಜತ್ ಪಾಟೀದಾರ್. ನಿರ್ಣಾಯಕ ಹಂತದಲ್ಲಿ 2 ವಿಕೆಟ್ ಕಿತ್ತ ಸುಯೇಶ್ ಶರ್ಮಾ ಇದು ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿ ಸೆಣೆಸಾಟದ ಝಲಕ್. ಹೀಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾರ್ದಿಕ್ ಪಾಂಡ್ಯ ಬಳಗವನ್ನು 18 ರನ್ ಗಳಿಂದ ಪರಾಭವಗೊಳಿಸಿತು.
ಈ ಮೂಲಕ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು 6 ಅಂಕಗಳನ್ನು ಕಲೆ ಹಾಕಿದ ರಜತ್ ಪಾಟೀದಾರ್ ಬಳಗ ಐಪಿಎಲ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಇದೇವೇಳೆ ಮುಂಬೈ ಇಂಡಿಯನ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ ಕೇವಲ 1 ಗೆಲುವು ಸಾಧಿಸಿರುವುದರಿಂದ 2 ಅಂಕಗಳೊAದಿಗೆ 8ನೇ ಸ್ಥಾನದಲ್ಲಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ಅಷ್ಟೇ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಆಕರ್ಷಕ ಅರ್ಧಶತಕ ಗಳಿಸಿದ ಫಿಲ್ ಸಾಲ್ಟ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.ಬೃಹತ್ ಮೊತ್ತ ಬೆಂಬತ್ತಿ ಹೊರಟ ಮುಂಬೈ ತಂಡಕ್ಕೆ ರಾನ್ ರಿಕೆಲ್ಟನ್(22 ಎಸೆತದಲ್ಲಿ 37) ಮತ್ತು ರೋಹಿತ್ ಶರ್ಮಾ(13 ಎಸೆತದಲ್ಲಿ 19) ಅವರು ಉತ್ತಮ ಆರಂಭವನ್ನು ನೀಡಿದರು. ಆದರೆ ತಂಡದ ಮೊತ್ತ 57 ಆಗಿದ್ದಾಗ ರೋಹಿತ್ ಶರ್ಮಾ ಅವರು ಗಾಯಾಳುವಾಗಿ ನಿವೃತ್ತರಾಗುತ್ತಾರೆ. ಆ ಬಳಿಕ ಸೂರ್ಯಕುಮಾರ್ ಯಾದವ್(22 ಎಸೆತದಲ್ಲಿ 33) ಮತ್ತು ನಾಯಕ ಹಾರ್ದಿಕ್ ಪಾಂಡ್ಯ(22 ಎಸೆತದಲ್ಲಿ 40) ಮುಂಬೈ ಹೋರಾಟಕ್ಕೆ ಜೀವ ತುಂಬುತ್ತಾರೆ. ಅಂತಿಮ ಹಂತದಲ್ಲಿ ಶೆರ್ಫಾನ್ ರುದರ್ ಫೋರ್ಡ್ (31 ಎಸೆತದಲ್ಲಿ ಅಜೇಯ 71) ಸರ್ವಪ್ರಯತ್ನವನ್ನೂ ನಡೆಸುತ್ತಾರೆ. ಆದರೂ ಮುಂಬೈ ಕೇವಲ 18 ರನ್ ಗಳಿಂದ ಹಿಂದುಳಿಯುತ್ತದೆ.
ಸಾಲ್ಟ್- ಕೊಹ್ಲಿ ಭರ್ಜರಿ ಆರಂಭಇದಕ್ಕೂ ಮೊದಲು ಆರ್ ಸಿಬಿ ತಂಡ ಆರಂಭಕಾರರಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅವರು ಒದಗಿಸಿಕೊಟ್ಟ ಭರ್ಜರಿ ಆರಂಭದ ಮೇಲೆ ದೊಡ್ಡ ಮೊತ್ತ ಕಲೆ ಹಾಕುತ್ತದೆ. ಇವರಿಬ್ಬರು ಮೊದಲ ವಿಕೆಟ್ ಗೆ 10.5 ಓವರ್ ಳಲ್ಲಿ 120 ರನ್ ಗಳನ್ನು ಕಲೆ ಹಾಕುತ್ತಾರೆ. 36 ಎಸೆತಗಳನ್ನು ಎದುರಿಸಿದ ಫಿಲ್ ಸಾಲ್ಟ್ 6 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದ 78 ರನ್ ಬಾರಿಸುತ್ತಾರೆ. ಇನ್ನು ವಿರಾಟ್ ಕೊಹ್ಲಿ ಅವರು ಅನಾರೋಗ್ಯದ ಮಧ್ಯೆಯೂ 38 ಎಸೆತಗಳಿಂದ 5 ಬೌಂಡರಿ ಮತ್ತು 1 ಸಿಕ್ಸರ್ ಗಳಿದ್ದ 53 ರನ್ ಗಳಿಸಿ ಔಟಾಗುತ್ತಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು