LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ದಕ್ಷಿಣ ಆಫ್ರಿಕಾಕ್ಕೆ ರೋಚಕ ಜಯ..!

ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1 ರನ್ ರೋಚಕ ಜಯ ದಾಖಲಿಸಿದ್ದು, ಈ ವಿಶ್ವ ಕಪ್‍ನಲ್ಲಿ ಕಿವೀಸ್ ಗೆಲುವಿನ ಖಾತೆ ತೆರೆದಿದೆ.ದಕ್ಷಿಣ ಆಫ್ರಿಕಾ ಮತ್ತು ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರಿಣ ಪಡೆ ರೀಜಾ ಹೆಂಡ್ರಿಕ್ಸ್(43) ಅವರ ಏಕಾಂಗಿ ಹೋರಾಟದ ನೆರವಿನಿಂದ 7 ವಿಕೆಟ್‍ಗೆ 115 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ನೇಪಾಳ ಅಂತಿಮ ಓವರ್‍ನ 2 ಎಸೆತದಲ್ಲಿ ಗೆಲುವಿಗೆ 2 ರನ್ ಬಾರಿಸಲು ಸಾಧ್ಯವಾಗದೆ ವಿರೋಚಿತ 1 ರನ್ ಅಂತರದ ಸೋಲು ಕಂಡಿತು. ಅಂತಿಮವಾಗಿ 7 ವಿಕೆಟ್‍ಗೆ 114 ರನ್ ಬಾರಿಸಿತು. ಒಂದು ರನ್ ಗಳಿಸುತ್ತಿದ್ದರೂ ಕೂಡ ಪಂದ್ಯ ಟೈ ಗೊಂಡು ಸೂಪರ್ ಓವರ್ ಕಾಣುತ್ತಿತ್ತು. ಆದರೆ ಗುಲ್ಸನ್ ಝಾ ರನೌಟ್ ಬಲೆಗೆ ಬಿದ್ದು ತಂಡ ಸೋಲಿಗೆ ತುತ್ತಾಯಿತು. ದಕ್ಷಿಣ ಆಫ್ರಿಕಾ ಪರ ತಬ್ರೈಜ್ ಶಮ್ಸಿ ಸ್ಪಿನ್ ಮ್ಯಾಚಿಕ್ ನಡೆಸಿ 4 ವಿಕೆಟ್ ಕಿತ್ತು ಮಿಂಚಿದರು
ಚೇಸಿಂಗ್ ಆರಂಭಿಸಿದ ನೇಪಾಳ ಉತ್ತಮ ಆರಂಭ ಗಳಿಸಿದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಆದರೆ ಗೆಲ್ಲುವ ಅವಕಾಶವೂ ಇತ್ತು.

ಅಂತಿಮ ಓವರ್‍ನಲ್ಲಿ ಗೆಲುವಿಗೆ 8 ರನ್ ಬೇಕಿತ್ತು. ಈ ಓವರ್ ಎಸೆದ ಒಟ್ನೀಲ್ ಬಾರ್ಟ್ಮನ್ ಮೊದಲ 2 ಎಸೆತವನ್ನು ಡಾಟ್ ಮಾಡಿದರು. ಮೂರನೇ ಎಸೆತದಲ್ಲಿ ಗುಲ್ಸನ್ ಝಾ ಬೌಂಡರಿ ಬಾರಿಸಿದ ಪರಿಣಾಮ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಮುಂದಿನ ಎಸೆತದಲ್ಲಿ ಗುಲ್ಸನ್ 2 ರನ್ ಕಸಿದರು. ಅಂತಿಮವಾಗಿ 2 ಎಸೆತದ ಮುಂದೆ 2 ರನ್‍ತೆಗೆಯುವ ಸವಾಲು ಎದುರಾಯಿತು. 5ನೇ ಎಸೆತವನ್ನು ಗುಲ್ಸನ್ ಡಾಟ್‍ಮಾಡಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಿದ್ದಾಗ ಗುಲ್ಸನ್ ರನೌಟ್‍ಆದರು. ದಕ್ಷಿಣ ಆಫ್ರಿಕಾ 1 ರನ್ ಅಂತರದ ರೋಚಕ ಗೆಲುವು ಸಾಧಿಸಿತು

ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಹೊರತುಪಡಿಸಿ ಉಳಿದೆಲ್ಲರೂ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡರು. ಯಾರು ಕೂಡ ಕನಿಷ್ಠ 20ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಿಂದ ಅಜೇಯ 27 ರನ್ ಬಾರಿಸಿದರು. ಹೆಂಡ್ರಿಕ್ಸ್ 43 ರನ್ ಬಾರಿಸಿದರು. ನಾಯಕ ಐಡೆನ್ ಮಾರ್ಕ್ರಮ್(15) ಅವರ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ದಿನದ ಮತ್ತೊಂದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಉಗಾಂಡ 18.4 ಓವರ್‍ಗಳಲ್ಲಿ 40 ರನ್‍ಗೆ ಆಲೌಟ್ ಆಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು