LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಫುಟ್‍ಬಾಲ್ ಲೀಗ್: ಯುನೈಟೆಡ್ ಎಫ್‍ಸಿ ತಂಡಕ್ಕೆ ಗೆಲುವು

ಬೆಂಗಳೂರು: ಇಶಾನ್ ಶಾಹಿ ಅವರ ಆಟದ ಬಲದಿಂದ ಸೌತ್ ಯುನೈಟೆಡ್ ಎಫ್‍ಸಿ ತಂಡವು ಬಿಡಿಎಫ್‍ಎ ಸೂಪರ್ ಡಿವಿಷನ್ ಫುಟ್‍ಬಾಲ್ ಲೀಗ್ ಚಾಂಪಿಯನ್‍ಷಿಪ್ ಪಂದ್ಯದಲ್ಲಿ 3-2ರಿಂದ ಯಂಗ್ ಚಾಲೆಂಜರ್ಸ್ ಎಫ್‍ಸಿ ತಂಡವನ್ನು ಮಣಿಸಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಇಶಾನ್ (60, 90+2ನೇ) ಎರಡು ಗೋಲು ಗಳಿಸಿ ಮಿಂಚಿದರು.

ಯು.ಕೆ. ಸೂರ್ಯ (70ನೇ) ಯುನೈಟೆಡ್ ಪರ ಒಂದು ಗೋಲು ಗಳಿಸಿದರು. ಚಾಲೆಂಜರ್ಸ್‍ನ ಸೂರಜ್ (20ನೇ), ಲೆಟ್ಮಿನ್ಲುನ್ ಸಿಂಗ್ಸನ್ (53) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಮತ್ತೊಂದು ಪಂದ್ಯದಲ್ಲಿ ಕೊಡಗು ಎಫ್‍ಸಿ ತಂಡವು 2-0ಯಿಂದ ಕಿಕ್‍ಸ್ಟಾರ್ಟ್ ಎಫ್‍ಸಿ ತಂಡವನ್ನು ಪರಾಭವಗೊಳಿಸಿತು. ಬಿಕ್ರಮ್ ಸರ್ಕಾರ್ (60ನೇ), ಅಲೆಕ್ಸ್ ಕೊಂತೌಜಮ್ (73ನೇ) ತಲಾ ಒಂದು ಗೋಲು ತಂದಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST