LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಹಳೆ ತಂಡಕ್ಕೆ ಮಣೆ ಹಾಕಿದ ಕುಸ್ತಿ ಸಂಸ್ಥೆ

ನವದೆಹಲಿ: ಮುಂದಿನ ತಿಂಗಳು ಇಸ್ತಾನ್‍ಬುಲ್‍ನಲ್ಲಿ ನಡೆಯುವ ಅಂತಿಮ ಒಲಿಂಪಿಕ್ ಅರ್ಹತಾ ಕುಸ್ತಿ ಟೂರ್ನಿಗೆ ಭಾರತ ಕುಸ್ತಿ ಸಂಸ್ಥೆಯು (ಡಬ್ಲ್ಯುಎಫ್‍ಐ) ಸೋಮವಾರ ತಂಡವನ್ನು ಪ್ರಕಟಿಸಿದೆ. ಹೊಸ ಟ್ರಯಲ್ಸ್‍ಗೆ ಸಮಯದ ಕೊರತೆಯುಂದಾಗಿ ಬಿಶ್ಕೆಕ್‍ನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‍ನಲ್ಲಿ ಸ್ಪರ್ಧಿಸಿದ ಬಹುತೇಕ ಕುಸ್ತಿಪಟುಗಳನ್ನೇ ಅಂತಿಮಗೊಳಿಸಲಾಗಿದೆ.

ಮೇ 9ರಿಂದ 13ರವರೆಗೆ ಅರ್ಹತಾ ಟೂರ್ನಿ ನಡೆಯಲಿದೆ. 2018ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶಾ ಫೋಗಾಟ್, ಅಂಶು ಮಲಿಕ್ ಮತ್ತು 23 ವರ್ಷದೊಳಗಿನ ವಿಶ್ವ ಚಾಂಪಿಯನ್ ರಿತಿಕಾ ಹೂಡಾ ಅವರನ್ನು ಹೊರತುಪಡಿಸಿ ತಂಡವನ್ನು ಪ್ರಕಟಿಸಲಾಗಿದೆ. ಈ ಮೂವರು ಈಚೆಗೆ ಕಿರ್ಗಿಸ್ತಾನದ ಬಿಶ್ಕೆಕ್‍ನಲ್ಲಿ ನಡೆದ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‍ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‍ಗೆ ಕೋಟಾ ಪಡೆದಿದ್ದಾರೆ.

ಬಿಶ್ಕೆಕ್‍ನಲ್ಲಿ ಭಾರತದ ಪುರುಷರ ತಂಡದ ಕಳಪೆ ಪ್ರದರ್ಶನ ನೀಡಿತ್ತು. ಯಾರಿಗೂ ಒಲಿಂಪಿಕ್ಸ್ ಕೋಟಾ ಲಭಿಸಿರಲಿಲ್ಲ. ಈ ಬಗ್ಗೆ ಭಾರತ ಕುಸ್ತಿ ಸಂಸ್ಥೆ ಅತೃಪ್ತಿ ಹೊಂದಿತ್ತು. ಹೀಗಾಗಿ, ಅಂತಿಮ ಅರ್ಹತಾ ಟೂರ್ನಿಗೆ ಹೊಸ ಟ್ರಯಲ್ಸ್ ನಡೆಯಲು ಯೋಜನೆ ಹಾಕಿಕೊಂಡಿತ್ತು. ಆದರೆ, ಸಮಯಾವಕಾಶದ ಕೊರತೆಯಿಂದಾಗಿ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ ಎಂದು ಡಬ್ಲ್ಯುಎಫ್‍ಐ ಮೂಲಗಳು ತಿಳಿಸಿವೆ.

ಬಿಶ್ಕೆಕ್ ಮತ್ತು ಇಸ್ತಾನ್‍ಬುಲ್ ಟೂರ್ನಿಗಳ ಮಧ್ಯೆ ಕನಿಷ್ಠ ಒಂದು ತಿಂಗಳ ಸಮಯಾವಕಾಶ ಸಿಕ್ಕಿದ್ದರೆ ಅಂತಿಮ ಅರ್ಹತಾ ಟೂರ್ನಿಗೆ ಹೊಸ ಟ್ರಯಲ್ಸ್ ನಡೆಸಬಹುದಿತ್ತು. ಆದರೆ, ಇನ್ನು ಹೆಚ್ಚು ಸಮಯವಿಲ್ಲ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು