LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

FIFA World Cup 2026: ನಾಕೌಟ್ ರೌಂಡ್ ಗೆ ಬ್ರೆಝಿಲ್ ಎಂಟ್ರಿ

ಫಿಫಾ ವಿಶ್ವಕಪ್ 2026ರ 49ನೇ ಪಂದ್ಯದಲ್ಲಿ ಬ್ರೆಝಿಲ್ ತಂಡ ಭರ್ಜರಿ ಜಯ ಸಾಧಿಸಿದೆ. ಮಿಯಾಮಿ ನಗರದ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬ್ರೆಝಿಲ್ ಹಾಗೂ ಸ್ಕಾಟ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಹಿಂದಿನ ಪಂದ್ಯದಂತೆ ಈ ಮ್ಯಾಚ್‌ನಲ್ಲೂ ಸಾಂಪ್ರದಾಯಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಬ್ರೆಝಿಲ್ ಮೊದಲಾರ್ಧದಲ್ಲೇ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು.ಅದರಲ್ಲೂ ವೇಗದೊಂದಿಗೆ ಮುನ್ನುಗ್ಗಿ ಆಡಿದ ಸ್ಟಾರ್ ಫಾರ್ವರ್ಡ್ ಆಟಗಾರ ವಿನೀಸಿಯಸ್ ಜೂನಿಯರ್ ಪಂದ್ಯದ ಆರಂಭದಲ್ಲೇ (7ನೇ ನಿಮಿಷದಲ್ಲಿ) ಮೊದಲ ಗೋಲು ಬಾರಿಸಿದರು. ನಂತರ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ (ಇಂಜುರಿ ಟೈಮ್) ಮತ್ತೊಂದು ಆಕರ್ಷಕ ಹೆಡರ್ ಮೂಲಕ 2ನೇ ಗೋಲು ದಾಖಲಿಸಿದರು.ಇನ್ನು ದ್ವಿತೀಯಾರ್ಧದ 60ನೇ ನಿಮಿಷದಲ್ಲಿ ಬ್ರೂನೋ ಗಿಮರೈಸ್ ನೀಡಿದ ಅದ್ಭುತ ಪಾಸ್ ಅನ್ನು ಮ್ಯಾಥ್ಯೂಸ್ ಕುನ್ಹಾ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಬ್ರೆಝಿಲ್ ತಂಡವು 3-0 ಅಂತರದ ಜಯವನ್ನು ಖಚಿತಪಡಿಸಿಕೊಂಡಿತು.ನೇಮರ್ ಕಂಬ್ಯಾಕ್:ಈ ಪಂದ್ಯದ ಮೂಲಕ ಬ್ರೆಝಿಲ್ ನ ಸಾರ್ವಕಾಲಿಕ ಗರಿಷ್ಠ ಗೋಲುಗಾರ ನೇಮರ್ ಜೂನಿಯರ್ ಕಂಬ್ಯಾಕ್ ಮಾಡಿದ್ದಾರೆ.. ಬಲಗಾಲಿನ ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿದ್ದ ಅವರು ಈ ಹಿಂದಿನ ಎರಡು ಮ್ಯಾಚ್ ಗಳಲ್ಲಿ ಕಣಕ್ಕಿಳಿದಿರಲಿಲ್ಲ. ಆದರೆ ಸ್ಕಾಟ್‌ಲ್ಯಾಂಡ್ ವಿರುದ್ಧದ ಪಂದ್ಯದ 76ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದರು. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ನೇಮರ್ ಜೂನಿಯರ್ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.ಈ ಗೆಲುವಿನೊಂದಿಗೆ ಬ್ರೆಝಿಲ್ ಒಟ್ಟು 7 ಅಂಕಗಳನ್ನು ಗಳಿಸಿ, ಉತ್ತಮ ಗೋಲುಗಳ ವ್ಯತ್ಯಾಸದ ಆಧಾರದ ಮೇಲೆ ಮೊರಾಕೊ ತಂಡವನ್ನು ಹಿಂದಿಕ್ಕಿ ಗ್ರೂಪ್ `ಸಿ' ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದರೊಂದಿಗೆ ಸಾಂಬಾ ಪಡೆ ಮುಂದಿನ ಹಂತಕ್ಕೇರಿದೆ. ಅಂದರೆ 32 ತಂಡಗಳ ನಡುವಣ ನಾಕೌಟ್ ರೌಂಡ್ ನಲ್ಲಿ ಬ್ರೆಝಿಲ್ ಕಣಕ್ಕಿಳಿಯಲಿದೆ.ಲೀಗ್ ಹಂತದಲ್ಲಿ ಗ್ರೂಪ್ `ಸಿ' ಅಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿರುವ ಬ್ರೆಝಿಲ್, ಜೂನ್ 29 ರಂದು ತನ್ನ ಮೊದಲ ನಾಕೌಟ್ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಬ್ರೆಝಿಲ್ ಪಾಲಿಗೆ ಎದುರಾಳಿಯಾಗಿ ಗ್ರೂಪ್ `ಎಫ್' ನ ರನ್ನರ್ ಅಪ್ ತಂಡ ಸಿಗಲಿದೆ. ಅಂದರೆ ನೆದರ್ಲ್ಯಾಂಡ್ಸ್ ಅಥವಾ ಜಪಾನ್ ಅಥವಾ ಸ್ವೀಡನ್ ತಂಡದೊAದಿಗೆ ಬ್ರೆಝಿಲ್
ಸೆಣಸಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು