LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

2026ರ ಫಿಫಾ ವಿಶ್ವಕಪ್‌ನಿಂದ ಹೊರ ಬಿದ್ದ ಬ್ರೆಝಿಲ್!

ಫಿಫಾ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಫಲಿತಾಂಶವೊಂದಕ್ಕೆ 2026ರ ಫಿಫಾ ವಿಶ್ವಕಪ್ ಸಾಕ್ಷಿಯಾಗಿದೆ. ಮಾಂತ್ರಿಕ ಆಟಗಾರರ ದಂಡನ್ನೇ ಹೊಂದಿರುವ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್ ತಂಡವು, ನಾರ್ವೆ ವಿರುದ್ಧದ ರೌಂಡ್ ಆಫ್-16 ಪಂದ್ಯದಲ್ಲಿ 2-1 ಗೋಲುಗಳ ಅಂತರದಿAದ ಸೋತು ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಫಿಫಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಬ್ರೆಝಿಲ್ ತಂಡವು ಕ್ವಾರ್ಟರ್ ಫೈನಲ್‌ಗೂ ಮುನ್ನವೇ ಹೊರಬಿದ್ದಿದೆ. ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ರೌಂಡ್ ಆಫ್-16 ನಾಕೌಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಾರ್ವೆ ತಂಡವು 2-1 ಗೋಲುಗಳ ಅಂತರದಿಂದ ಬ್ರೆಝಿಲ್ ತಂಡವನ್ನು ಮಣಿಸಿದೆ. ಈ ಸೋಲಿನೊಂದಿಗೆ ಬ್ರೆಝಿಲ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯಗೊAಡಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಗೆಲ್ಲುವ ಫೇವರೇಟ್ ತಂಡವಾಗಿ ಬ್ರೆಝಿಲ್ ಗುರುತಿಸಿಕೊಂಡಿತ್ತು. ಅದರಲ್ಲೂ ವಿನೀಶಿಯಸ್ ಜೂನಿಯರ್, ಗೇಬ್ರಿಯಲ್ ಮಾರ್ಟಿನೆಲ್ಲಿ, ಎಂಡ್ರಿಕ್ , ನೇಮಾರ್ ಜೂನಿಯರ್ ನಂತಹ ಬಲಿಷ್ಠ ಮುನ್ಪಡೆ ಆಟಗಾರರನ್ನು ಹೊಂದಿದ್ದ ಬ್ರೆಝಿಲ್ ತಂಡ ನಾರ್ವೆ ವಿರುದ್ಧ ಪ್ರಾಬಲ್ಯ ಮೆರೆಯಲಿದ್ದಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಮೊದಲಾರ್ಧದಲ್ಲಿ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ ನಾರ್ವೆ ಪಡೆ ಬ್ರೆಝಿಲ್ ತಂಡಕ್ಕೆ ಒಂದೇ ಒಂದು ಗೋಲು ಬಾರಿಸಲು ಬಿಡಲಿಲ್ಲ. ಪರಿಣಾಮ ಮೊದಲಾರ್ಧ 0-0 ಅಂತರದಿಂದ ಕೊನೆಗೊಂಡಿತು. ದ್ವಿತೀಯಾರ್ಧದಲ್ಲಿ ತನ್ನ ರಣತಂತ್ರವನ್ನು ಸಂಪೂರ್ಣವಾಗಿ ಬದಲಾಯಿಸಿ ಅಟ್ಯಾಕಿಂಗ್‌ಗೆ ಇಳಿದ ನಾರ್ವೆ ಪರ ಎರ್ಲಿಂಗ್ ಹಾಲಂಡ್ ಬ್ಯಾಕ್ ಟು ಬ್ಯಾಕ್ ಎರಡು ಗೋಲು ಬಾರಿಸಿದರು. 79ನೇ ನಿಮಿಷದಲ್ಲಿ ಎರ್ಲಿಂಗ್ ಹಾಲಂಡ್ ನಾರ್ವೆ ಪರ ಮೊದಲ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. 90ನೇ ನಿಮಿಷದಲ್ಲಿ ಪಂದ್ಯ ಮುಗಿಯಲು ಕೇವಲ ಕೆಲವೇ ನಿಮಿಷಗಳಿದ್ದಾಗ ಹಾಲಂಡ್ ಮತ್ತೊಂದು ಆಕರ್ಷಕ ಗೋಲು ಸಿಡಿಸಿ ಬ್ರೆಝಿಲ್ ಸೋಲನ್ನು ಖಚಿತಪಡಿಸಿದರು. ಬ್ರೆಝಿಲ್‌ಗೆ ಆಘಾತ: 2022ರಲ್ಲಿ ಕ್ವಾರ್ಟರ್ ಫೈನಲ್?ಗೆ ತಲುಪಿದ್ದ ಬ್ರೆಝಿಲ್ ತಂಡವು ಇದೀಗ ದ್ವಿತೀಯ ನಾಕೌಟ್ ಹಂತದಲ್ಲೇ ಹೊರಬಿದ್ದಿದೆ. ಅದು ಕೂಡ 36 ವರ್ಷಗಳ ಬಳಿಕ. ಅಂದರೆ ಬ್ರೆಝಿಲ್ ತಂಡವು ಕೊನೆಯ ಬಾರಿ ಕ್ವಾರ್ಟರ್ ಫೈನಲ್ ತಲುಪದೇ ಹೊರಬಿದ್ದಿದ್ದು 1990 ರಲ್ಲಿ. ಇದಾದ ಬಳಿಕ 8 ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದರ ನಡುವೆ 2 ಬಾರಿ ಚಾಂಪಿಯನ್ ಪಟ್ಟವನ್ನೂ ಕೂಡ ಅಲಂಕರಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು