LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಡೇವಿಸ್ ಕಪ್ ವಿಶ್ವ ಬಣ 1 ಭಾರತಕ್ಕೆ ಸ್ವೀಡನ್ ಎದುರಾಳಿ

ಹೊಸದಿಲ್ಲಿ: ಮುಂದಿನ ಸೆಪ್ಟಂಬರ್‍ನಲ್ಲಿ ನಡೆಯಲಿರುವ ಡೇವಿಸ್ ಕಪ್ ವಿಶ್ವ ಬಣ ಒಂದರ ಹೋರಾಟದಲ್ಲಿ ಭಾರತವು ಸ್ವೀಡನ್ ತಂಡವನ್ನು ಎದುರಿಸಲಿದೆ.

ಭಾರತವು ಈ ಮೊದಲು ನಡೆದ ವಿಶ್ವ ಬಣ ಒಂದರ ಪ್ಲೇಆಫ್ನಲ್ಲಿ ಪಾಕಿಸ್ಥಾನವನ್ನು 4-0 ಅಂತರದಿಂದ ಸೋಲಿಸಿದ್ದರೆ ಸ್ವೀಡನ್ ತಂಡವು ಅರ್ಹತಾ ಹಂತದ ಮೊದಲ ಸುತ್ತಿನಲ್ಲಿ ಬ್ರಝಿಲ್ ವಿರುದ್ಧ 1-3 ಅಂತರದಿಂದ ಸೋಲನ್ನು ಕಂಡಿತ್ತು.

ಭಾರತ ಮತ್ತು ಸ್ವೀಡನ್ ಇಷ್ಟರವರೆಗೆ ಐದು ಬಾರಿ ಮುಖಾಮುಖೀಯಾದರೂ ಒಮ್ಮೆಯೂ ಗೆಲುವು ದಾಖಲಿಸಿಲ್ಲ. ಆದರೆ ಈ ಬಾರಿ ಭಾರತಕ್ಕೆ ಸ್ವೀಡನ್ ತಂಡವನ್ನು ಸೋಲಿಸುವ ಒಳ್ಳೆಯ ಅವಕಾಶ ಭಾರತಕ್ಕೆ ಲಭಿಸಿದೆ. ಭಾರತ ಈ ಹಿಂದೆ 2005ರಲ್ಲಿ ತವರಿನಲ್ಲಿ ಸ್ವೀಡನ್ ವಿರುದ್ಧ ಆಡಿತ್ತು. ಹೊಸದಿಲ್ಲಿಯಲ್ಲಿ ನಡೆದ ಈ ಹೋರಾಟದಲ್ಲಿ ಭಾರತ 1-3 ಅಂತರದಿಂದ ಸೋಲನ್ನು ಕಂಡಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST