LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ತವರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರಾಕ್ರಮ

ಹೊಸದಿಲ್ಲಿ: ತವರಿನ ಆವೃತ್ತಿಯ ವನಿತಾ ಪ್ರೀಮಿಯರ್ ಲೀಗ್ ಸ್ಪರ್ಧೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿಯಾಗಿ ಆರಂಭಿಸಿದೆ. ಮುಂಬೈ ಇಂಡಿಯನ್ಸ್‍ಗೆ 29 ರನ್ನುಗಳ ಸೋಲು ಣಿಸಿ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ.ಡೆಲ್ಲಿ 4 ವಿಕೆಟಿಗೆ 192 ರನ್ ರಾಶಿ ಹಾಕಿದರೆ, ಮುಂಬೈ 8 ವಿಕೆಟಿಗೆ 163 ರನ್ ಗಳಿಸಿತು.

ಇದು 5 ಪಂದ್ಯಗಳಲ್ಲಿ ಡೆಲ್ಲಿ ಸಾಧಿಸಿದ 4ನೇ ಜಯ. ಮುಂಬೈ ಇಷ್ಟೇ ಪಂದ್ಯಗಳಲ್ಲಿ 2ನೇ ಸೋಲನುಭವಿಸಿತು.
, ಜೆಮಿಮಾ ಫಿಫ್ಟಿ: ಡೆಲ್ಲಿ ಆರಂಭ ಸ್ಫೋಟಕವಾಗಿತ್ತು. ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಜೆಮಿಮಾ ರೋಡ್ರಿಗಸ್ ಅರ್ಧ ಶತಕದೊಂದಿಗೆ ಮಿಂಚಿದರು. ಇವರಲ್ಲಿ ಜೆಮಿಮಾ ಜಬರ್ದಸ್ತ್ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 33 ಎಸೆತಗಳಿಂದ ಅಜೇಯ 69 ರನ್ ಬಾರಿಸಿದರು.

ಸಿಡಿಸಿದ್ದು 8ಫೋರ್, 3 ಸಿಕ್ಸರ್. ಸ್ಟ್ರೈಕ್‍ರೇಟ್ 209.09. ಓಪನರ್ ಲ್ಯಾನಿಂಗ್ 38 ಎಸೆತ ಎದುರಿಸಿ 53 ರನ್ ಮಾಡಿದರು (6 ಬೌಂಡರಿ, 2 ಸಿಕ್ಸರ್). ಶಫಾಲಿ ವರ್ಮ ಕೂಡ ಮುನ್ನುಗ್ಗಿ ಬೀಸತೊಡಗಿದರು. 12 ಎಸೆತಗಳಿಂದ 28 ರನ್ ಬಂತು (3 ಬೌಂಡರಿ, 2 ಸಿಕ್ಸರ್).

ಚೇಸಿಂಗ್ ವೇಳೆ ಮುಂಬೈ ಪವರ್ ಪ್ಲೇ ಒಳಗಾಗಿ 4 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ಅಮನ್‍ಜೋತ್ ಕೌರ್ ಸರ್ವಾಧಿಕ 42, ಹ್ಯಾಲಿ ಮ್ಯಾಥ್ಯೂಸ್ 29, ಎಸ್. ಸಾಜನಾ ಅಜೇಯ 24 ರನ್ ಮಾಡಿದರು. ಜೆಸ್ ಜೊನಾಸೆನ್ 3, ಮರಿಜಾನ್ ಕಾಪ್ 2 ವಿಕೆಟ್ ಉರುಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು