LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಇಂದಿನಿಂದ ಕೋಲ್ಕತಾದಲ್ಲಿ ಹೋರಾಟ

ಕೋಲ್ಕತಾ: ಹತ್ತನೇ ಆವೃತ್ತಿಯ  ಪ್ರೊ  ಕಬಡ್ಡಿ ಲೀಗ್ ಅಂತಿಮ ಹಂತ ತಲುಪಿದ್ದು ಶುಕ್ರವಾರದಿಂದ ಕೋ ಲ್ಕತಾದಲ್ಲಿ ಪಂದ್ಯಗಳು ನಡೆಯಲಿವೆ. ಇನ್ನೆರಡು ವಾರಗಳ ತೀವ್ರ ಹೋರಾಟದ ಬಳಿಕ ಲೀಗ್ ನಾಕೌಟ್ ಹಂತ ತಲುಪಲಿದೆ. ಫೆ. 26ರಿಂದ ಹೈದರಾಬಾದ್‍ನಲ್ಲಿ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.

ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ ಮತ್ತು ಪುನೇರಿ ಪಲ್ಟಾನ್ಸ್ ತಂಡಗಳು ಈಗಾಗಲೇ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿವೆ. ಜೈಪುರ 13 ಗೆಲುವಿನಿನೊಂದಿಗೆ 77 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದರೆ ಪುನೇರಿ ಅಷ್ಟೇ ಜಯ ಸಾಧಿಸಿ 76 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ.

ಇನ್ನುಳಿದ ತಂಡಗಳು ಕೋಲ್ಕತಾ ಮತ್ತು ಪಂಚಕುಲದಲ್ಲಿ ಮುಂದಿನೆರಡು ವಾರ ನಡೆಯುವ ಕಬಡ್ಡಿ ಪಂದ್ಯಗಳಲ್ಲಿ ನಾಕೌಟ್ ಹಂತಕ್ಕೇರಲು ತೀವ್ರ ಹೋರಾಟ ನೀಡುವ ಸಾಧ್ಯತೆಯಿದೆ. ದಬಾಂಗ್ ಡೆಲ್ಲಿ 69 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ ಪಾಟ್ನಾ ಹರಿಯಾಣ ಮತ್ತು ಬೆಂಗಳೂರು ಅನಂತರದ ಸ್ಥಾನದಲ್ಲಿವೆ. ತವರಿನಲ್ಲಿ ಆಡುವ ಅವಕಾಶ ಪಡೆದ ಬೆಂಗಾಲ್ ವಾರಿಯರ್ ಸದ್ಯ 44 ಅಂಕ ಗಳಿಸಿದ್ದು ಮುನ್ನಡೆಯಲು ಎಲ್ಲ ಪಂದ್ಯಗಳಲ್ಲೂ ಜಯಭೇರಿ ಬಾರಿಸಬೇಕಾಗಿದೆ.

ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ದಿನದ ಇನ್ನೊಂದು ಪಂದ್ಯವು ಹರಿಯಾಣ ಮತ್ತು ಯುಪಿ ಯೋಧಾಸ್ ನಡುವೆ ನಡೆಯಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು