LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಫ್ರಾನ್ಸ್ ಐತಿಹಾಸಿಕ ಸಾಧನೆ: ಬರೋಬ್ಬರಿ 10 ಗೋಲುಗಳು

ಫಿಫಾ ವಿಶ್ವಕಪ್ 2026 ರಲ್ಲಿ ಫ್ರಾನ್ಸ್ ಪಡೆಯ ಪ್ರರಾಕ್ರಮ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಇರಾಕ್ ವಿರುದ್ಧ 3-0 ಅಂತರದಿಂದ ಗೆದ್ದಿದ್ದ ಲೆ ಬ್ಲೂಸ್ ಇದೀಗ ಬಲಿಷ್ಠ ನಾರ್ವೆಯನ್ನು 4-1 ಅಂತರದಿಂದ ಮಣಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ನಾಕೌಟ್ ಹಂತಕ್ಕೇರಿದೆ.
ಫ್ರಾನ್ಸ್ ತಂಡವು ಬರೋಬ್ಬರಿ 28 ವರ್ಷಗಳ ಬಳಿಕ ತನ್ನ ಗ್ರೂಪ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದಕ್ಕೂ ಮುನ್ನ 1998 ರಲ್ಲಿ ಗ್ರೂಪ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದು ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಫ್ರಾನ್ಸ್ ಇದೀಗ ಮತ್ತೊಮ್ಮೆ ಅದೇ ರೀತಿಯ ಪ್ರಚಂಡ ಲಯವನ್ನು ಪ್ರದರ್ಶಿಸುತ್ತಿದೆ.ಫ್ರಾನ್ಸ್ ತಂಡವು ಮೊದಲ ಮೂರು ಪಂದ್ಯಗಳಲ್ಲಿ ದಾಖಲಿಸಿರುವುದು ಬರೋಬ್ಬರಿ 10 ಗೋಲುಗಳು ಎಂಬುದು ವಿಶೇಷ. ಈ ವೇಳೆ ಹೊಡೆಸಿಕೊಂಡಿರುವುದು ಕೇವಲ 2 ಗೋಲುಗಳು ಮಾತ್ರ. ಇದು ಫ್ರಾನ್ಸ್ ತಂಡದ ಮುನ್ಪಡೆಯ ಬಲಿಷ್ಠತೆಯನ್ನು ಹಾಗೂ ರಕ್ಷಣಾ ಕೋಟೆಯ ಬಲವನ್ನು ಸೂಚಿಸುತ್ತದೆ.ಮೊದಲ ಪಂದ್ಯ: ಇರಾಕ್ ವಿರುದ್ಧ 3-0 ಅಂತರದ ಭರ್ಜರಿ ಜಯ. ಎರಡನೇ ಪಂದ್ಯ: ಸೆನೆಗಲ್ ವಿರುದ್ಧ 3-1 ಗೋಲುಗಳ ಜಯಭೇರಿಮೂರನೇ ಪಂದ್ಯ: ನಾರ್ವೆ ವಿರುದ್ಧ 4-1 ಗೋಲುಗಳ ಅಮೋಘ ಗೆಲುವು.ಎಂಬಾಪೆ ಜೊತೆ ಡೆಂಬೆಲೆ ಮಿಂಚಿನಾಟ:ನಾರ್ವೆ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್ನ ಸ್ಟಾರ್ ಆಟಗಾರ ಉಸ್ಮಾನೆ ಡೆಂಬೆಲೆ ಮೊದಲಾರ್ಧದಲ್ಲೇ (7ನೇ, 20ನೇ ಮತ್ತು 32ನೇ ನಿಮಿಷ) ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ್ದರು. ಇದಾದ ಬಳಿಕ ಪಂದ್ಯದ ಕೊನೆಯ ಕ್ಷಣದಲ್ಲಿ (90+4 ನಿಮಿಷ) ಡೆಸಿರೆ ಡೌ ಯಂಗ್ ಬ್ಯಾಕ್ ಗೋಲು ಬಾರಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.ಅಂದರೆ ಫ್ರಾನ್ಸ್ ತಂಡವು ಕೇವಲ ಎಂಬಾಪೆಯನ್ನು ಮಾತ್ರ ಅವಲಂಭಿಸಿಲ್ಲ. ಇತ್ತ ಎದುರಾಳಿಗಳು ಎಂಬಾಪೆಗಾಗಿ ರಣತಂತ್ರ ರೂಪಿಸುತ್ತಿದ್ದರೆ ಅತ್ತ ಕಡೆಯಿಂದ ಉಸ್ಮಾನೆ ಡೆಂಬೆಲೆ, ಡೆಸಿರೆ ಡೌ ಅಟ್ಯಾಕಿಂಗ್ ಆಟದೊಂದಿಗೆ ಎದುರಾಳಿಗಳಿಗೆ ಚಳ್ಳೆಹಣ್ಣು ತಿನ್ನುಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ನಾರ್ವೆ ವಿರುದ್ಧದ ಪಂದ್ಯ.ನಾರ್ವೆ ತಂಡದ ಡಿಫೆಂಡರ್ ಗಳು ಸೆಂಟರ್ ಫಾರ್ವರ್ಡ್ ನಲ್ಲಿ ಕಿಲಿಯನ್ ಎಂಬಾಪೆಯತ್ತ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದರು. ಆದರೆ ಗೋಲು ಬಾರಿಸಿದ್ದು ರೈಟ್ ವಿಂಗ್ ನಲ್ಲಿದ್ದ ಉಸ್ಮಾನೆ ಡೆಂಬೆಲೆ. ಇಲ್ಲಿ ಎಂಬಾಪೆ ಗೋಲು ಬಾರಿಸುವ ಬದಲು ಎರಡು ಅಸಿಸ್ಟ್ ಗಳನ್ನು ನೀಡಿದ್ದು ವಿಶೇಷ. ಅಂದರೆ ಎದುರಾಳಿಗಳ ತಂತ್ರಕ್ಕೆ ರಣತಂತ್ರ ರೂಪಿಸುವಲ್ಲಿ ಫ್ರಾನ್ಸ್ ಯಶಸ್ವಿಯಾಗಿದೆ ಎನ್ನಬಹುದು.ಕಿಲಿಯನ್ ಎಂಬಾಪೆ: 4 ಗೋಲುಗಳು, 3 ಅಸಿಸ್ಟ್ಗಳುಉಸ್ಮಾನೆ ಡೆಂಬೆಲೆ: 4 ಗೋಲುಗಳು, 1 ಅಸಿಸ್ಟ್ಫ್ರಾನ್ಸ್ ಎದುರಾಳಿ ಯಾರು ನಾರ್ವೆ ತಂಡವನ್ನು 4-1 ಗೋಲುಗಳಿಂದ ಸೋಲಿಸಿದ ಫ್ರಾನ್ಸ್, ತನ್ನ ಗ್ರೂಪ್ ಐ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ. ನಾಕೌಟ್ (ರೌಂಡ್ ಆಫ್ 32) ಹಂತದಲ್ಲಿ ಫ್ರಾನ್ಸ್ ತಂಡವು ಸ್ವೀಡನ್ ತಂಡವನ್ನು ಎದುರಿಸಲಿದೆ.
ಸ್ವೀಡನ್ ವಿರುದ್ಧ ಕೂಡ ಫ್ರಾನ್ಸ್ ಪಡೆ ಗೆದ್ದರೆ ಮುಂದಿನ ಹಂತದಲ್ಲಿ (ರೌಂಡ್ ಆಫ್ 16) ಜರ್ಮನಿ ಅಥವಾ ಪರಾಗ್ವೆ ತಂಡವನ್ನು ಎದುರಿಸುವ ಸಾಧ್ಯತೆ ಇದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು