LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬಾಕ್ಸಿಂಗ್: ನಿಶಾಂತ್ ಶುಭಾರಂಭ

ಬುಸ್ಟೊ ಅರ್ಸಿಝಿಯೊ (ಇಟಲಿ): ವಿಶ್ವ ಚಾಂಪಿಯನ್‍ಷಿಪ್ ಕಂಚಿನ ಪದಕ ವಿಜೇತ ನಿಶಾಂತ್ ದೇವ್, ಪ್ರಥಮ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ 3-1 ರಿಂದ ಇಂಗ್ಲೆಂಡ್‍ನ ಲೂಯಿಸ್ ರಿಚರ್ಡ್ಸನ್ ಅವರನ್ನು ರೋಚಕ ಹೋರಾಟದಲ್ಲಿ ಸೋಲಿಸಿ ಬುಧವಾರ ಶುಭಾರಂಭ ಮಾಡಿದರು.

ಆದರೆ ಇನ್ನೊಬ್ಬ ಅನುಭವಿ ಬಾಕ್ಸರ್ ಶಿವ ಥಾಪಾ ಸೋಲನುಭವಿಸಿದರು.71 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ನಿಶಾಂತ್ ಅವರು ಎದುರಾಳಿಯಾದ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ರಿಚರ್ಡ್ಸನ್ ಎದುರು ಬೇಗನೇ ಹೊಂದಿಕೊಂಡು ಆಕ್ರಮಣಕ್ಕೆ ಇಳಿದು ಗೆಲ್ಲುವಲ್ಲಿ ಯಶಸ್ವಿ ಆದರು.

ಆದರೆ, ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ಆರು ಸಲ ಪದಕ ಗೆದ್ದಿರುವ ಶಿವ ಥಾಪಾ (63.5 ಕೆ.ಜಿ) ಹೊರಬಿದ್ದರು. ಹಾಲಿ ಚಾಂಪಿಯನ್ ಆಗಿರುವ ಉಜ್ಬೇಕಿಸ್ತಾನದ ರಸ್ಲಾನ್ ಅಬ್ದುಲ್ಲೇವ್, ಭಾರತದ ಎದುರಾಳಿಯನ್ನು ಸೋಲಿ ಸಿದರು. ಕರಾರುವಾಕ್ ಪಂಚ್ ಗಳನ್ನು ಪ್ರದರ್ಶಿಸಿದ ರಸ್ಲಾನ್ ನಿರೀಕ್ಷೆ ಯಂತೆ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಥಾಪಾ ಅವರ ರಕ್ಷಣೆಯನ್ನು ಹಲವು ಸಲ ಭೇದಿಸಿದರು. ಲಕ್ಷ್ಯ ಚಾಹರ್ (80 ಕೆ.ಜಿ) ಅವರು ಮಂಗಳವಾರ ಇರಾನ್‍ನ ಗೆಶ್ಲಾಗಿ ಮೇಸಂ ಅವರಿಗೆ ಮಣಿದಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು