LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಹಾಕಿ: ಭಾರತಕ್ಕೆ ಡಚ್ ಸವಾಲು ಇಂದು

ರೂರ್ಕೆಲಾ: ಭಾರತ ಪುರುಷರ ಹಾಕಿ ತಂಡವು ಐಎಚ್‍ಎಫ್  ಪ್ರೊ ಲೀಗ್ ಟೂರ್ನಿಯಲ್ಲಿ ಬುಧವಾರ ಹಾಲಿ ಚಾಂಪಿಯನ್ ಹಾಗೂ ವಿಶ್ವದ ಅಗ್ರಮಾನ್ಯ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.ಭುವನೇಶ್ವರ ಲೆಗ್‍ನಲ್ಲಿ ಭಾರತದ ಆಟಗಾರರು ನೆದರ್ಲೆಂಡ್ಸ್ ವಿರುದ್ಧ ಶೂಟೌಟ್‍ನಲ್ಲಿ 4-2 ಗೋಲುಗಳಿಂದ (ನಿಗದಿ ಅವಧಿಯ ಆಟದಲ್ಲಿ 2-2) ಜಯ ಸಾಧಿಸಿದ್ದರು.

ಹರ್ಮನ್‍ಪ್ರೀತ್ ಸಿಂಗ್ ನೇತೃತ್ವದ ತಂಡವು ಇಲ್ಲೂ ಡಚ್ ತಂಡದ ವಿರುದ್ಧ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ ನೆದರ್ಲೆಂಡ್ಸ್ ತಂಡವು ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ. ಭಾರತತಂಡ ಸೋಮವಾರ ನಡೆದ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಶೂಟೌಟ್‍ನಲ್ಲಿ 8-7 ಗೋಲುಗಳಿಂದ (ನಿಗದಿ ಅವಧಿಯ ಆಟದಲ್ಲಿ 2-2) ಸೋಲಿಸಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿದೆ. ಅದೇ ದಿನ ನಡೆದ ಮತ್ತೊಂದು ಪಂದ್ಯದಲ್ಲಿ ಡಚ್ ತಂಡ 2-1 ರಿಂದ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು.

ಭಾರತ ತಂಡವು ಐದು ಪಂದ್ಯಗಳಿಂದ 10 ಅಂಕ ಸಂಪಾದಿಸಿ ಪೆÇ್ರ ಲೀಗ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್ 9 ಪಂದ್ಯಗಳಿಂದ 18 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ. ಅರ್ಜೆಟೀನಾ (13) ಮತ್ತು ಆಸ್ಟ್ರೇಲಿಯಾ (12) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST