ನೆದರ್‌ಲ್ಯಾಂಡ್ಸ್: ನೆದರ್‌ಲ್ಯಾಂಡ್ಸ್ನ ಐತಿಹಾಸಿಕ ವೆಗ್ನರ್ ಕ್ರೀಡಾಂಗಣದಲ್ಲಿ 2026ರ ಹಾಕಿ ವಿಶ್ವಕಪ್‌ನ ಮೂರನೇ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಹಾಕಿ ತಂಡಗಳ ನಡುವೆ ಹೈವೋಲ್ಟೇಜ್ ಕದನ ನಡೆಯಿತು. ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ನಾಯಕತ್ವದ ಭಾರತ ಹಾಕಿ ತಂಡ ಪಾಕಿಸ್ತಾನವನ್ನು 5-3 ಗೋಲುಗಳ ಅಂತರದಿAದ ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಈ ಗೆಲುವಿನೊಂದಿಗೆ ಮುಂದಿನ ಸುತ್ತಿಗೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಡಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ವೇಲ್ಸ್ ತಂಡವನ್ನು ಮಣಿಸಿದ್ದ ಭಾರತ ಹಾಕಿ ತಂಡ, ತನ್ನ ಎರಡನೇ ಪಂದ್ಯದಲ್ಲಿ ಇಂಗ್ಲೆAಡ್ ವಿರುದ್ಧ ಮುಗ್ಗರಿಸಿತ್ತು. ಹೀಗಾಗಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಟೀಂ ಇಂಡಿಯಾ, ಪಾಕ್ ವಿರುದ್ಧ ಗೆಲ್ಲಲೇಬೇಕಿತ್ತು. ಅದರಂತೆ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ. ಇತ್ತ ಟೀಂ ಇಂಡಿಯಾ ವಿರುದ್ದ ಸೋತ ಪಾಕಿಸ್ತಾನ ವಿಶ್ವಕಪ್‌ನಿಂದ ಹೊರಬಿದ್ದಿತು.
ಆರಂಭದಿAದಲೂ ಭಾರತದ ಮೇಲುಗೈ: ಮೊದಲ ಕ್ವಾರ್ಟರ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪಂದ್ಯದ ಐದನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಬಾರಿಸಿದರು. ನಂತರ 11 ನೇ ನಿಮಿಷದಲ್ಲಿ ಅಭಿಷೇಕ್ ಎರಡನೇ ಗೋಲು ಗಳಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿದರು. ಹೀಗಾಗಿ ಮೊದಲ ಕ್ವಾರ್ಟರ್ ನಂತರ ಭಾರತ 2-0 ಮುನ್ನಡೆ ಸಾಧಿಸಿತು. ಎರಡನೇ ಕ್ವಾರ್ಟರ್‌ನಲ್ಲಿ ಅದ್ಭುತ ಪ್ರದರ್ಶನ ಮುಂದುವರೆಸಿದ ಭಾರತಕ್ಕೆ 20ನೇ ನಿಮಿಷದಲ್ಲಿ ನಾಲ್ಕನೇ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಭಾರತ ಪೆನಾಲ್ಟಿಯನ್ನು ಸದುಪಯೋಗಪಡಿಸಿಕೊಳ್ಳಲು ವಿಫಲವಾದರೂ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಸ್ವಲ್ಪ ಸಮಯದ ನಂತರ ಭಾರತದ ಪರ ಮೂರನೇ ಗೋಲು ಬಾರಿಸಿದರು. ಇದು ಭಾರತಕ್ಕೆ 3-0 ಮುನ್ನಡೆಯನ್ನು ನೀಡಿತು. ಇದು ಹರ್ಮನ್‌ಪ್ರೀತ್ ಸಿಂಗ್ ಅವರ ಪಂದ್ಯದ ಎರಡನೇ ಗೋಲಾಗಿತ್ತು. ನಂತರ ಪಾಕಿಸ್ತಾನ ಆಕ್ರಮಣಕಾರಿ ಆಟ ಆರಂಭಿಸಿ, ಶಾಹಿದ್ ಹನ್ನನ್ ತಂಡದ ಮೊದಲ ಗೋಲು ಗಳಿಸಿದರು. ಪಾಕಿಸ್ತಾನದ ಮೊದಲ ಗೋಲಿನ ನಂತರ, ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರ ಫಲವಾಗಿ ಅಭಿಷೇಕ್ 24 ನೇ ನಿಮಿಷದಲ್ಲಿ ಫೀಲ್ಡ್ ಗೋಲ್ ಗಳಿಸಿ ಭಾರತಕ್ಕೆ 4-1 ಮುನ್ನಡೆ ತಂದುಕೊಟ್ಟರು. ಪಾಕಿಸ್ತಾನಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ಸಿಕ್ಕಿತು. ಇದನ್ನು ಗೋಲಾಗಿ ಪರಿವರ್ತಿಸಿದ ಸುಫ್ಯಾನ್ ಖಾನ್ 25 ನೇ ನಿಮಿಷದಲ್ಲಿ ತಂಡದ ಪರ 2ನೇ ಗೋಲು ಬಾರಿಸಿದರು.3ನೇ ಕ್ವಾರ್ಟರ್‌ನಲ್ಲಿ 5-2 ರ ಮುನ್ನಡೆ: ಮೂರನೇ ಕ್ವಾರ್ಟರ್‌ನ 34 ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಸುಲಭ ಗೋಲು ಗಳಿಸಿ ಭಾರತಕ್ಕೆ 5-2 ಮುನ್ನಡೆ ನೀಡಿದರು. 37 ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತ್ತಾದರೂ ಅದರಲ್ಲಿ ಗೋಲು ಗಳಿಸಲು ವಿಫಲವಾಯಿತು. ಇದು ಭಾರತದ ಐದನೇ ಪೆನಾಲ್ಟಿ ಕಾರ್ನರ್ ಆಗಿತ್ತು. ಪಾಕಿಸ್ತಾನವು ಮತ್ತೆ ಮುನ್ನಡೆ ಸಾಧಿಸಲು ಶ್ರಮಿಸಿದರೂ, ಮೂರನೇ ಕ್ವಾರ್ಟರ್‌ನಲ್ಲಿ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ.ಕೊನೆಯಲ್ಲಿ ಪಾಕ್ ಆಕ್ರಮಣಕಾರಿ ಆಟ: ನಾಲ್ಕನೇ ಕ್ವಾರ್ಟರ್ ಆರಂಭವಾದ ತಕ್ಷಣ, ಶಾಹಿದ್ ಹನ್ನನ್ 46 ನೇ ನಿಮಿಷದಲ್ಲಿ ಪಾಕಿಸ್ತಾನದ ಪರವಾಗಿ ಗೋಲು ಗಳಿಸಿದರು, ಇದರಿಂದಾಗಿ ಸ್ಕೋರ್ 3-5 ಆಯಿತು. ನಂತರ ಭಾರತ ಎಚ್ಚರಿಕೆಯಿಂದ ಆಟವಾಡಲು ಪ್ರಾರಂಭಿಸಿತು. ಇತ್ತ ನಾಲ್ಕನೇ ಕ್ವಾರ್ಟರ್‌ನಲ್ಲಿ ಪಾಕಿಸ್ತಾನ ಹಲವಾರು ಪ್ರಯತ್ನಗಳನ್ನು ಮಾಡಿತ್ತಾದರೂ ಅದರಲ್ಲಿ ಸಫಲವಾಗಲಿಲ್ಲ. ಅಂತಿಮವಾಗಿ ಭಾರತ ತಂಡ ಪಂದ್ಯವನ್ನು 5-3 ಅಂತರದಿAದ ಗೆದ್ದುಕೊಂಡಿತು.