LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೇನ್ ವಿಲಿಯಮ್ಸನ್ ನಿವೃತ್ತಿ ಘೋಷಣೆ

ತಕ್ಷಣದಿಂದಲೇ ಜಾರಿಗೆ ಬರುವಂತೆ, ನ್ಯೂಜಿಲ್ಯಾಂಡ್ ತಂಡದ ಆಧಾರ ಸ್ಥಂಭದAತಿದ್ದ ಕೇನ್ ವಿಲಿಯಮ್ಸನ್, ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆAಡ್ ಮತ್ತು ನ್ಯೂಜಿಲ್ಯಾಂಡ್ ಸರಣಿಯ ಮಧ್ಯೆಯೇ ನಿವೃತ್ತಿ ಪ್ರಕಟಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಲಿಯಮ್ಸನ್ ನಿರ್ಧಾರ, ಕ್ರಿಕೆಟ್ ಜಗತ್ತನ್ನು ಶಾಕ್‌ಗೆ ತಳ್ಳಿದೆ. 16 ವರ್ಷಗಳ ಅದ್ಭುತ ಕ್ರಿಕೆಟ್ ಜೀವನಕ್ಕೆ ಕೇನ್ ವಿಲಿಯಮ್ಸನ್ ವಿದಾಯ ಘೋಷಿಸಿದ್ದಾರೆ.
ಕ್ರಿಕೆಟಿನ ಎಲ್ಲಾ ಮಾದರಿಯ 378 ಪಂದ್ಯಗಳನ್ನು ಆಡಿರುವ ವಿಲಿಯಮ್ಸನ್, ಇಂಗ್ಲೆAಡ್ ವಿರುದ್ದದ ಸರಣಿಯ ಮಧ್ಯೆಯೇ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದಾರೆ. 35 ವರ್ಷದ ವಿಲಿಯಮ್ಸನ್, ಲಾರ್ಡ್್ಸ ಮೈದಾನದಲ್ಲಿ ನಡೆದ ಇಂಗ್ಲೆAಡ್ ವಿರುದ್ದದ ಮೊದಲ ಟೆಸ್ಟಿನ ಮೊದಲ ಇನ್ನೀಂಗ್ಸ್ನಲ್ಲಿ ಸೊನ್ನೆ, ಎರಡನೇ ಇನ್ನಿಂಗ್ಸ್?ನಲ್ಲಿ ಹದಿನೆಂಟು ರನ್ ಗಳಿಸಿದ್ದರು. ಈ ಪಂದ್ಯವನ್ನು, ಕಿವೀಸ್ ಸೋತಿತ್ತು. ಸರಣಿಯ ಮಧ್ಯೆಯೇ ಇವರ ರಿಟೈರ್ಮೆಂಟ್, ಅಚ್ಚರಿಗೆ ಕಾರಣವಾಗಿದೆ.
ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್್ಸ ಮೈದಾನದಲ್ಲಿ ವಿಲಿಯಮ್ಸನ್ ಕೊನೆಯ ಪಂದ್ಯವನ್ನು ಆಡುವ ಮೂಲಕ, ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. 2015 - 2024ರವರೆಗೆ ಇವರು, ಐಪಿಎಲ್ ನಲ್ಲೂ ಆಡಿದ್ದರು. ಹಾಲೀ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ Strategic Advisor ಆಗಿ ಕೆಲಸ ನಿರ್ವಹಿಸಿದ್ದರು. 2024ರಲ್ಲಿ ಕೇವಲ ಎರಡು ಪಂದ್ಯವನ್ನು ಮಾತ್ರ ಇವರು ಆಡಿದ್ದರು.
ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಗೆ ಬರೆದ ರಿಟೈರ್ಮೆಂಟ್ ಪತ್ರದಲ್ಲಿ, "ನಾನು ನಿವೃತ್ತಿ ಹೊಂದುವ ಬಗ್ಗೆ ಕೆಲವು ಸಮಯದಿಂದ ಯೋಚಿಸುತ್ತಿದ್ದೆ. ಕೆಲವು ದಿನಗಳಿಂದ ಸರಣಿಯ ಮಧ್ಯೆಯೇ ನಿವೃತ್ತಿ ಹೊಂದುವುದು ಸರಿಯಾದ ಸಮಯ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ.ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನನ್ನ ತಂಡಕ್ಕೆ ಬಲವಾದ ಉತ್ಸಾಹವನ್ನು ತುಂಬಿದ್ದೇನೆ. ಈಗ ಕಡಿಮೆ ಶ್ರಮದೊಂದಿಗೆ ಆಟವನ್ನು ಮುಂದುವರಿಸುವುದು ಸರಿಯಲ್ಲ ಎನ್ನುವ ಹಂತಕ್ಕೆ ಬಂದಿದ್ದೇನೆ. ನನ್ನ ಸ್ವಂತ ಇಚ್ಚೆಯಿಂದ ನಿವೃತ್ತಿ ಹೊಂದುತ್ತಿದ್ದೇನೆ" ಎಂದು ಕೇನ್ ವಿಲಿಯಮ್ಸನ್, ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇನ್ ವಿಲಿಯಮ್ಸನ್ ಯಾವಾಗಲೂ ಮೊದಲು ತಂಡಕ್ಕೆ ಆದ್ಯತೆಯನ್ನು ನೀಡುತ್ತಿದ್ದರು. ಅವರ ನಿವೃತ್ತಿಯ ನಿರ್ಧಾರ ನನಗಂತೂ ಶಾಕ್ ನೀಡಿದೆ. ಅವರೊಬ್ಬರು ಅದ್ಭುತ ಆಟಗಾರ, ಅತ್ಯುತ್ತಮ ನಾಯಕರಾಗಿದ್ದರು. ಅವರು, ಕ್ರಿಕೆಟ್ ಕ್ರೀಡೆಯ ಅತ್ಯಂತ ಶ್ರೇಷ್ಠ ರಾಯಭಾರಿ ಎಂದು ನ್ಯೂಜಿಲ್ಯಾಂಡ್ ತಂಡದ ಕೋಚ್, ರಾಬ್ ವಾಲ್ಟರ್ ಅಭಿಪ್ರಾಯ ಪಟ್ಟಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು