LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಟೀಮ್ ಇಂಡಿಯಾದ ಹೆಲ್ಮೆಟ್ ಧರಿಸಿ ಕಣಕ್ಕಿಳಿದ ಕುಮಾರ್ ಸಂಗಕ್ಕಾರ

ಕ್ರಿಕೆಟ್‌ನಲ್ಲಿ ಕ್ಲಾಸ್ ಈಸ್ ಪರ್ಮನೆಂಟ್ ಎಂಬ ಮಾತಿದೆ. ಇದನ್ನು ಶ್ರೀಲಂಕಾ ಕ್ರಿಕೆಟ್‌ನ ಲೆಜೆಂಡ್ ಕುಮಾರ್ ಸಂಗಕ್ಕಾರ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಇಂಗ್ಲೆAಡ್‌ನ ಸ್ಥಳೀಯ ಕ್ಲಬ್ ಕ್ರಿಕೆಟ್ ಪಂದ್ಯವೊAದರಲ್ಲಿ ಕಣಕ್ಕಿಳಿದಿದ್ದ 48 ವರ್ಷದ ಸಂಗಕ್ಕಾರ, ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆದರೆ ಈ ಶತಕಕ್ಕಿಂತ ಹೆಚ್ಚು ಸದ್ದು ಟೀಮ್ ಇಂಡಿಯಾದ ಹೆಲ್ಮೆಟ್.
ಅಂದರೆ ಈ ಪಂದ್ಯದಲ್ಲಿ ಬ್ಯಾಟಿಂಗ್?ಗೆ ಆಗಮಿಸಿದ್ದ ಕುಮಾರ್ ಸಂಗಕ್ಕಾರ ಬಿಸಿಸಿಐ ಲೋಗೋ ಮತ್ತು ಭಾರತದ ತ್ರಿವರ್ಣ ಧ್ವಜವಿರುವ ಹೆಲ್ಮೆಟ್ ಧರಿಸಿದ್ದರು. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೈಸ್ವಾಲ್ ನೀಡಿದ ಉಡುಗೊರೆ: ಇಂಡಿಯನ್ ಪ್ರೀಮಿಯರ್ ಲೀಗ್?ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರ್ ಸಂಗಕ್ಕಾರ ಅವರಿಗೆ ಆರ್‌ಆರ್ ತಂಡದ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಟೀಮ್ ಇಂಡಿಯಾ ಹೆಲ್ಮೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದೇ ಹೆಲ್ಮೆಟ್ ಧರಿಸಿ ಕುಮಾರ್ ಸಂಗಕ್ಕಾರ ಇಂಗ್ಲೆಂಡ್‌ನಲ್ಲಿ ನಡೆದ ಕ್ಲಬ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು.
ಭರ್ಜರಿ ಸೆಂಚುರಿ: ಯುಕೆ ಮೂಲದ ಡೋರ್ಸೆಟ್ ಕೌಂಟಿ ಲೀಗ್‌ನಲ್ಲಿ ಕುಮಾರ್ ಸಂಗಕ್ಕಾರ ಶಿಲ್ಲಿಂಗ್‌ಸ್ಟೋನ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದಿದ್ದರು. ಬ್ರಾಡ್‌ಸ್ಟೋನ್ ಸಿಸಿ ವಿರುದ್ಧ ನಡೆದ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಂಗಕ್ಕಾರ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್‌ಗಳನ್ನಟ್ಟಿದ್ದಾರೆ.
ಈ ಮೂಲಕ ಕೇವಲ 117 ಎಸೆತಗಳಲ್ಲಿ 16 ಫೋರ್ ಹಾಗೂ 11 ಭರ್ಜರಿ ಸಿಕ್ಸರ್‌ಗಳೊಂದಿಗೆ ಕುಮಾರ್ ಸಂಗಕ್ಕಾರ ಅಜೇಯ 168 ರನ್ ಬಾರಿಸಿದ್ದಾರೆ. ಅಂದರೆ ಸಂಗಕ್ಕಾರ ಸಿಕ್ಸ್-ಫೋರ್‌ಗಳ ಮೂಲಕವೇ ಬರೋಬ್ಬರಿ 130 ರನ್ ಚಚ್ಚಿದ್ದರು. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಕೈಚಳಕ ತೋರಿದ ಸಂಗಕ್ಕಾರ, ತಮ್ಮ ರೈಟ್-ಆರ್ಮ್ ಆಫ್-ಸ್ಪಿನ್ ಮೂಲಕ 2 ಪ್ರಮುಖ ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ.
ಗೆದ್ದು ಬೀಗಿದ ಶಿಲ್ಲಿಂಗ್‌ಸ್ಟೋನ್: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಿಲ್ಲಿಂಗ್‌ಸ್ಟೋನ್ ಕ್ರಿಕೆಟ್ ಕ್ಲಬ್ ಕುಮಾರ್ ಸಂಗಕ್ಕಾರ (168) ಅವರ ಭರ್ಜರಿ ಶತಕದ ನೆರವಿನೊಂದಿಗೆ ನಿಗದಿತ 45 ಓವರ್?ಗಳಲ್ಲಿ 7 ವಿಕೆಟ್ ಕಳೆದುಕೊಂಡು 289 ರನ್ ಕಲೆಹಾಕಿತು.
290 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಬ್ರಾಡ್‌ಸ್ಟೋನ್ ಕ್ರಿಕೆಟ್ ಕ್ಲಬ್ ಪರ ಸೈಮನ್ ಲೀಡ್‌ಬೀಟರ್ (53) ಅರ್ಧಶತಕ ಬಾರಿಸಿದರೂ, ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಬ್ರಾಡ್‌ಸ್ಟೋನ್ ಕ್ರಿಕೆಟ್ ಕ್ಲಬ್ 45 ಓವರ್?ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 196 ರನ್‌ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಶಿಲ್ಲಿಂಗ್‌ಸ್ಟೋನ್ ಕ್ರಿಕೆಟ್ ಕ್ಲಬ್ ತಂಡವು 93 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು