LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಪ್ರತಿಷ್ಠಿತ ಅರ್ಜುನ ಅವಾರ್ಡ್‍ಗೆ ಮೊಹಮ್ಮದ್ ಶಮಿ ಹೆಸರು...!

ನವದೆಹಲಿ: ಕ್ರೀಡಾ ಲೋಕದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ಅರ್ಜುನ ಅವಾರ್ಡ್‍ಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೆಸರೂ ಸೇರಿಸಲು ಬಿಸಿಸಿಐ ಮನವಿ ಮಾಡಿದೆ.

ಈ ಸಾಲಿನ ಅರ್ಜುನ ಪ್ರಶಸ್ತಿಗೆ ಈಗಾಗಲೇ ಸಾಧಕರ ಲಿಸ್ಟ್ ರೆಡಿಯಾಗಿದೆ.ಆ ಪಟ್ಟಿಯಲ್ಲಿ ಶಮಿ ಹೆಸರಿಲ್ಲ. ಆದರೆ ಏಕದಿನ ವಿಶ್ವಕಪ್ ಹೀರೋ ಹೆಸರನ್ನು ಸೇರಿಸುವಂತೆ ಬಿಸಿಸಿಐ ಕೊನೆಯ ಕ್ಷಣದಲ್ಲಿ ವಿಶೇಷ ಮನವಿ ಮಾಡಿದೆ.

ಈ ಬಾರಿ ಏಕದಿನ ವಿಶ್ವಕಪ್ ನಲ್ಲಿ 24 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಟೇಕರ್ ಗರಿಮೆಗೆ ಪಾತ್ರರಾಗಿದ್ದ ಮೊಹಮ್ಮದ್ ಶಮಿ ಭಾರತದ ಹೀರೋ ಆಗಿದ್ದರು. ಅವರ ಹೆಸರನ್ನು ಈ ಮೊದಲೇ ನೀಡಲಾದ ಲಿಸ್ಟ್ ನಲ್ಲಿ ಅರ್ಜುನ ಪ್ರಶಸ್ತಿಗೆ ಸೇರಿಸಿರಲಿಲ್ಲ.

ಆದರೆ ಈಗ ಬಿಸಿಸಿಐ ಕೊನೆಯ ಕ್ಷಣದಲ್ಲಿ ಅವರ ಹೆಸರನ್ನೂ ಸೇರಿಸುವಂತೆ ಆಯ್ಕೆ ಸಮಿತಿಗೆ ವಿಶೇಷ ಮನವಿ ಮಾಡಿದೆ.
33 ವರ್ಷದ ವೇಗಿ ಸೆಮಿಫೈನಲ್ ನಲ್ಲಿ ಪಡೆದ 7 ವಿಕೆಟ್ ಗಳ ಸ್ಪೆಲ್ ನಿಂದಾಗಿಯೇ ಭಾರತ ಫೈನಲ್ ಗೇರಲು ಸಾಧ್ಯವಾಗಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST