LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಐನೂರರ ಕ್ಲಬ್ ಸೇರಿದ ನಾರಾಯಣ್

ಆರ್‍ಸಿಬಿ ಎದುರಿನ ಪಂದ್ಯದಲ್ಲಿ ಕೆಕೆಆರ್ ತಂಡದ ಸ್ಪಿನ್ ಬೌಲಿಂಗ್ ಆಲ್‍ರೌಂಡರ್ ಸುನೀಲ್ ನಾರಾಯಣ್ ನೂತನ ಮೈಲುಗಲ್ಲು ನೆಟ್ಟರು. ಇದು ವೆಸ್ಟ್ ಇಂಡೀಸ್ ಕ್ರಿಕೆಟಿಗನ 500ನೇ ಟಿ20 ಪಂದ್ಯವಾಗಿದೆ. ಸುನೀಲ್ ನಾರಾಯಣ್ 500 ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಕೇವಲ 4ನೇ ಆಟಗಾರ. ವಿಂಡೀಸ್‍ನ 3ನೇ ಕ್ರಿಕೆಟಿಗನೂ ಹೌದು. ಉಳಿದ ಮೂವರೆಂದರೆ ಕೈರನ್ ಪೊಲಾರ್ಡ್ (660), ಡ್ವೇನ್ ಬ್ರಾವೊ (573) ಮತ್ತು ಶೋಯಿಬ್ ಮಲಿಕ್ (542).

ಈವರೆಗಿನ 499 ಪಂದ್ಯಗಳಲ್ಲಿ ಅವರು 536 ವಿಕೆಟ್ ಉರುಳಿಸಿ ತೃತೀಯ ಸ್ಥಾನಿಯಾಗಿದ್ದಾರೆ. ಡ್ವೇನ್ ಬ್ರಾವೊ (625 ವಿಕೆಟ್) ಮತ್ತು ರಶೀದ್ ಖಾನ್ (566 ವಿಕೆಟ್) ಮೊದಲೆರಡು ಸ್ಥಾನದಲ್ಲಿದ್ದಾರೆ.ಅತ್ಯಧಿಕ 30 ಓವರ್ ಮೇಡನ್ ಎಸೆದಿರುವುದು ಸುನೀಲ್ ನಾರಾಯಣ್ ಪಾಲಿನ ದಾಖಲೆಯಾಗಿದೆ. ಗರಿಷ್ಠ 10 ಆಟಗಾರರನ್ನು 5 ಹಾಗೂ ಇದಕ್ಕೂ ಹೆಚ್ಚಿನ ಸಲ ಔಟ್ ಮಾಡಿರುವುದು ಕೂಡ ಈ ಕೆರಿಬಿಯನ್ ಸ್ಪಿನ್ನರ್‍ನ ಸಾಧನೆ.

ಬೌಲಿಂಗ್‍ನಲ್ಲಿ ಯಶಸ್ಸು ಕಾಣದೇ ಹೋದರೂ ಸುನೀಲ್ ನಾರಾಯಣ್ ಬ್ಯಾಟಿಂಗ್ ಮೂಲಕ ಅಬ್ಬರಿಸಿ ತಮ್ಮ 500ನೇ ಪಂದ್ಯವನ್ನು ಸಂಭ್ರಮಿಸಿದರು. ಚೇಸಿಂಗ್ ವೇಳೆ 22 ಎಸೆತಗಳಿಂದ 47 ರನ್ ಸಿಡಿಸಿದರು (2 ಬೌಂಡರಿ, 5 ಸಿಕ್ಸರ್). ಇದರಿಂದ ಕೆಕೆಆರ್ ಪವರ್ ಪ್ಲೇಯಲ್ಲಿ 85 ರನ್ ರಾಶಿ ಹಾಕಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು