LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

2024ರ ಟ್ವೆಂಟಿ-20 ವಿಶ್ವಕಪ್‍ಗೆ ಅರ್ಹತೆ ಪಡೆದ ನೇಪಾಳ, ಒಮಾನ್

ನೇಪಾಳದಲ್ಲಿ ಶುಕ್ರವಾರ ಏಶ್ಯನ್ ಕ್ವಾಲಿಫೈಯರ್ ಫೈನಲ್‍ಗೆ ತಲುಪಿರುವ ನೇಪಾಳ ಹಾಗೂ ಒಮಾನ್ ತಂಡಗಳು ಐಸಿಸಿ ಪುರುಷರ ಟ್ವೆಂಟಿ-20 ವಿಶ್ವಕಪ್-2024ಕ್ಕೆ ಅರ್ಹತೆ ಪಡೆದಿವೆ.

ಆತಿಥೇಯ ನೇಪಾಳ ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಸೆಮಿ ಫೈನಲ್‍ನಲ್ಲಿ 8 ವಿಕೆಟ್‍ಗಳಿಂದ ಮಣಿಸಿದರೆ, ಒಮಾನ್ ತಂಡ ಬಹರೈನ್ ತಂಡವನ್ನು 10 ವಿಕೆಟ್‍ಗಳ ಅಂತರದಿಂದ ಸೋಲಿಸಿತು.ನೇಪಾಳ ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದೆ.

2024ರ ಟಿ-20 ವಿಶ್ವಕಪ್ ಟೂರ್ನಿಯು ಮುಂದಿನ ವರ್ಷ ಅಮೆರಿಕ ಹಾಗೂ ವೆಸ್ಟ್‍ಇಂಡೀಸ್ ಆತಿಥ್ಯದಲ್ಲಿ ನಡೆಯಲಿದೆ. ಒಮಾನ್ ತಂಡ ಕೂಡ ಟೂರ್ನಮೆಂಟ್‍ನಲ್ಲಿ ಮೊದಲ ಬಾರಿ ಭಾಗವಹಿಸುತ್ತಿದೆ. 2007ರಲ್ಲಿ ಟಿ-20 ವಿಶ್ವಕಪ್ ಟೂರ್ನಿ ಆರಂಭವಾಗಿದ್ದು, ಮುಂಬರುವ 9ನೇ ಆವೃತ್ತಿಯ ಟೂರ್ನಿಯಲ್ಲಿ ಮೊದಲ ಬಾರಿ 20 ತಂಡಗಳು ಭಾಗವಹಿಸುತ್ತಿವೆ.

ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ 5 ತಂಡಗಳು ಇರುತ್ತವೆ. ನಾಲ್ಕು ಗುಂಪಿನ ಅಗ್ರ-2 ತಂಡಗಳು ಸೂಪರ್-8ಕ್ಕೆ ಅರ್ಹತೆ ಪಡೆಯುತ್ತವೆ. 2024ರ ಟಿ-20 ವಿಶ್ವಕಪ್ ಫೈನಲ್ ಪಂದ್ಯವು 2024ರ ಜೂನ್ 30ರಂದು ನಡೆಯಲಿದೆ.

2024ರ ಟಿ-20 ವಿಶ್ವಕಪ್‍ಗೆ ಅರ್ಹತೆ ಪಡೆದಿರುವ ತಂಡಗಳು: ಆಸ್ಟ್ರೇಲಿಯ, ಇಂಗ್ಲೆಂಡ್, ಭಾರತ, ನೆದರ್‍ಲ್ಯಾಂಡ್ಸ್, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್‍ಲ್ಯಾಂಡ್, ಸ್ಕಾಟ್‍ಲ್ಯಾಂಡ್, ವೆಸ್ಟ್‍ಇಂಡೀಸ್ (ಆತಿಥೇಯ), ಅಮೆರಿಕ(ಆತಿಥೇಯ), ಪಪುವಾ ನ್ಯೂ ಗಿನಿ, ಕೆನಡ, ನೇಪಾಳ ಹಾಗೂ ಒಮಾನ್.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST