LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬಾಕ್ಸಿಂಗ್ ಟೂರ್ನಿ: ಕ್ವಾರ್ಟರ್ ಫೈನಲ್‍ಗೆ ನಿಶಾಂತ್

ಬುಸ್ಟೊ ಆರ್ಸಿಝಿಯೊ, ಇಟಲಿ: ವಿಶ್ವ ಚಾಂಪಿಯನ್‍ಷಿಪ್ ಕಂಚಿನ ಪದಕ ವಿಜೇತ ನಿಶಾಂತ್ ದೇವ್ ಅವರು ಪ್ರಥಮ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಗ್ರೀಸ್‍ನ ಕ್ರಿಸ್ಟೋಸ್ ಕರೈಟಿಸ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿಸುವ ಮೂಲಕ ಒಲಿಂಪಿಕ್ಸ್ ಕೋಟಾಕ್ಕೆ ಮತ್ತಷ್ಟು ಹತ್ತಿರವಾದರು.

ಭಾನುವಾರ ತಡರಾತ್ರಿ ನಡೆದ 71 ಕೆ.ಜಿ ವಿಭಾಗದ ಪ್ರಿ ಕ್ವಾರ್ಟರ್‍ಫೈನಲ್ ಸೆಣಸಾಟದಲ್ಲಿ ಭಾರತದ 23 ವರ್ಷದ ಆಟಗಾರ ದೇವ್ 5-0 ಒಮ್ಮತದ ತೀರ್ಪು ಪಡೆದು ಎಂಟರ ಘಟ್ಟವನ್ನು ಪ್ರವೇಶಿಸಿದರು. ಇಲ್ಲಿ ಸೆಮಿಫೈನಲ್ ಪ್ರವೇಶಿಸುವ ನಾಲ್ಕೂ ಬಾಕ್ಸರ್‍ಗಳು ಪ್ಯಾರಿಸ್ ಒಲಿಂಪಿಕ್ ಕೋಟಾ ಪಡೆಯಲಿದ್ದು, ಅದಕ್ಕಾಗಿ ದೇವ್ ಅವರು ಒಂದೇ ಹೆಜ್ಜೆ ಮುಂದೆ ಸಾಗಬೇಕಿದೆ.

ಒಲಿಂಪಿಕ್ಸ್‍ನಲ್ಲಿ ಚೊಚ್ಚಲ ಸ್ಪರ್ಧೆಗೆ ಎದುರು ನೋಡುತ್ತಿರುವ ದೇವ್ ಅವರು ಸೋಮವಾರ ತಡರಾತ್ರಿ ನಡೆಯುವ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 2021ರ ವಿಶ್ವ ಚಾಂಪಿಯನ್‍ಷಿಪ್ ಬೆಳ್ಳಿ ಪದಕ ವಿಜೇತ ಅಮೆರಿಕದ ಒಮರಿ ಜೋನ್ಸ್ ಅವರನ್ನು ಎದುರಿಸಲಿದ್ದಾರೆ.
ಈ ಕೂಟದಲ್ಲಿ ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಭಾರತದ ಒಂಬತ್ತು ಬಾಕ್ಸರ್‍ಗಳು ಕಣಕ್ಕೆ ಇಳಿದಿದ್ದು, ಆ ಪೈಕಿ ಎಂಟು ಮಂದಿ ಒಲಿಂಪಿಕ್ಸ್ ಕೋಟಾ ಗಿಟ್ಟಿಸಲು ವಿಫಲರಾಗಿದ್ದಾರೆ. ಹರಿಯಾಣದ ದೇವ್ ಏಕೈಕ ಭರವಸೆಯಾಗಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಎಂಟರ ಘಟ್ಟದ ಸೆಣಸಾಟದಲ್ಲಿ ದೇವ್ ಮುನ್ನಡೆದರೆ ಪ್ಯಾರಿಸ್‍ಗೆ ಟಿಕೆಟ್ ಪಡೆಯುವ ಭಾರತದ ಐದನೇ ಮತ್ತು ಮೊದಲ ಪುರುಷ ಬಾಕ್ಸರ್ ಅವರಾಗಲಿದ್ದಾರೆ. ಏಷ್ಯನ್ ಕ್ರೀಡಾಕೂಟದ ಮೂಲಕ ನಿಖತ್ ಜರೀನ್ (50 ಕೆ.ಜಿ), ಪ್ರೀತಿ ಪವಾರ್ (54 ಕೆ.ಜಿ), ಪರ್ವೀನ್ ಹೂಡಾ (57 ಕೆಜಿ) ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆಜಿ) ಅವರು ಮುಂದಿನ ಒಲಿಂಪಿಕ್ಸ್‍ಗೆ ಅರ್ಹತೆಯನ್ನು ಈಗಾಗಲೇ ಗಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು