LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಇಟ್ಟ ಪ್ರಣಯ್, ಸಮೀರ್

ಸಿಡ್ನಿ: ಭಾರತೀಯ ಶಟ್ಲರ್‍ಗಳಾದ ಎಚ್.ಎಸ್. ಪ್ರಣಯ್ ಮತ್ತು ಸಮೀರ್ ವರ್ಮ ಅವರು ಕಠಿನ ಗೆಲುವು ಸಾಧಿಸಿ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ಕ್ವಾರ್ಟರ್‍ಫೈನಲ್ ಹಂತಕ್ಕೇರಿದ್ದಾರೆ.ಐದನೇ ಶ್ರೇಯಾಂಕದ ಪ್ರಣಯ್ ಕೇವಲ 46 ನಿಮಿಷಗಳ ಹೋರಾಟದಲ್ಲಿ ಇಸ್ರೇಲಿನ ಮಿಶಾ ಝಿಲ್ಬರ್‍ಮ್ಯಾನ್ ಅವರನ್ನು 21-17, 21-15 ಗೇಮ್‍ಗಳಿಂದ ಸುಲಭವಾಗಿ ಮಣಿಸಿ ಮುನ್ನಡೆದರು.

ಇದೇ ವೇಳೆ ಸಮೀರ್ ವರ್ಮ ಮೂರು ಗೇಮ್‍ಗಳ ಕಠಿನ ಹೋರಾಟದಲ್ಲಿ ಸಿಂಗಾಪುರದ ಲೋಹ್ ಕೀನ್ ಯೆ ಅವರನ್ನು 21-14, 14-21, 21-19 ಗೇಮ್‍ಗಳಿಂದ ಉರುಳಿಸಿ ಕ್ವಾರ್ಟರ್‍ಫೈನಲ್ ತಲುಪಿದರು.ಮುಂದಿನ ಸುತ್ತಿನಲ್ಲಿ ಪ್ರಣಯ್ ದ್ವಿತೀಯ ಶ್ರೇಯಾಂಕದ ಜಪಾನಿನ ಕೊಡಾಯ್ ನರೋಕ ಅವರ ಸವಾಲನ್ನು ಎದುರಿಸಲಿದ್ದರೆ ಸಮೀರ್ ವರ್ಮ ಅವರು ಚೈನೀಸ್ ತೈಪೆಯ ಚುನ್ ಯಿ ಲಿನ್ ಅವರನ್ನು ಎದುರಿಸಲಿದ್ದಾರೆ.

ಆಕರ್ಷಿ ಕ್ವಾರ್ಟರ್‍ಫೈನಲಿಗೆ: ವನಿತೆಯರ ವಿಭಾಗದಲ್ಲಿ ಆಕರ್ಷಿ ಕಶ್ಯಪ್ ಆಸ್ಟ್ರೇಲಿಯದ ಕಾಯ್ ಕಿ ಬೆರ್ನೈಸ್ ಟೋಹ್ ಅವರನ್ನು 21-16, 21-13 ಗೇಮ್‍ಗಳಿಂದ ಕೆಡಹಿ ಕ್ವಾರ್ಟರ್‍ಫೈನಲ್ ತಲುಪಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST