LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಸ್ಟಂಪಿಂಗ್, ಕನ್‍ಕಷನ್ ನಿಯಮ ಪರಿಷ್ಕರಿಸಿದ ಐಸಿಸಿ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಆಟದ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದರ ಪ್ರಕಾರ ಅಂಪೈರ್‍ಗಳು ಇನ್ನು ಮುಂದೆ ತೀರ್ಪು ಮರುಪರಿಶೀಲನೆ ವ್ಯವಸ್ಥೆ (ಡಿಆರ್‍ಎಸ್) ಸಮಯದಲ್ಲಿ ಸ್ಟಂಪಿಂಗ್ ಮನವಿ ಮಾಡಿದಲ್ಲಿ ಸೈಡ್-ಆನ್ ಕ್ಯಾಮೆರಾದ ರಿಪ್ಲೇಗಳನ್ನು ಮಾತ್ರ ನಿರ್ಣಯಿಸಿ ತೀರ್ಪು ನೀಡುತ್ತಾರೆ.

ಈ ಮಾರ್ಪಾಡು 2023ರ ಡಿಸೆಂಬರ್ 12 ರಿಂದ ಜಾರಿಗೆ ಬಂದಿದೆ. ಹೊಸ ನಿಯಮದ ಪ್ರಕಾರ ಸ್ಟಂಪಿಂಗ್‍ಗೆ ತಂಡ ಮನವಿ ಮಾಡಿದಲ್ಲಿ ಅಂಪೈರ್‍ಗಳು ಚೆಂಡು ಬ್ಯಾಟಿಗೆ ತಗುಲಿದೆಯೇ (ಸ್ನಿಕ್) ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ತಂಡವೊಂದು ವಿಕೆಟ್ ಕೀಪರ್‍ಗೆ ಕ್ಯಾಚ್ ಮನವಿ ಮಾಡಿದಲ್ಲಿ ಆಗ ಪ್ರತ್ಯೇಕವಾಗಿ ಡಿಆರ್‍ಎಸ್ ಆಯ್ಕೆ ಬಳಸಬೇಕಾಗುತ್ತದೆ.

ಕಳೆದ ವರ್ಷದ ಆರಂಭದಲ್ಲಿ ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ, ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸ್ಟಂಪಿಂಗ್ ನಂತರ ತೀರ್ಪು ಪರಿಶೀಲನೆಗೆ ಮನವಿ ಮಾಡಿ ಕಾಟ್ ಬಿಹೈಂಡ್ (ಕೀಪರ್‍ಗೆ ಕ್ಯಾಚ್) ಪರಿಶೀಲನೆ ಅವಕಾಶ ಪಡೆಯುತ್ತಿದ್ದರು. ಇದರಿಂದ (ಆಸ್ಟ್ರೇಲಿಯಾ) ತಂಡದ ಡಿಆರ್‍ಎಸ್ ಆಯ್ಕೆ ಉಳಿಯುತಿತ್ತು.

ಡಿಆರ್‍ಎಸ್ ದುರ್ಲಾಭ ತಡೆಯುವುದು ನಿಯಮ ಬದಲಾವಣೆಯ ಉದ್ದೇಶವಾಗಿದೆ. ಕಂಕಷನ್‍ಗೆ ವೇಳೆ, ಅದಕ್ಕೆ ಒಳಗಾದ ಆಟಗಾರ ಬೌಲಿಂಗ್ ಮಾಡಲಾಗದಿದ್ದರೆ, ಬದಲಿಯಾಗಿ ಬರುವ ಆಟಗಾರನಿಗೂ ಬೌಲಿಂಗ್ ಮಾಡಲು ಅವಕಾಶ ಇರುವುದಿಲ್ಲ.ಮೈದಾನದಲ್ಲಿ ಗಾಯದ ತೀವ್ರತೆ ತಿಳಿಯಲು ಮತ್ತು ಚಿಕಿತ್ಸೆಗೆ ಇರುವ ಒಟ್ಟು ಅವಧಿಯನ್ನು ಐಸಿಸಿ ನಾಲ್ಕು ನಿಮಿಷಗಳಿಗೆ ಸೀಮಿತಗೊಳಿಸಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು