LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಇಂಥ ವಿಷಯ ಹರಿದಾಡದಿದ್ದರೆ ಆಡಲು ಮಜಾ ಇರುವುದಿಲ್ಲ: ರೋಹಿತ್ ಶರ್ಮ

ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸುವ ಊಹಾಪೋಹಗಳನ್ನು ತಿರಸ್ಕರಿಸಿರುವ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮ, ನಾನು ಆಡುವವರೆಗೂ ಇಂಥ ಚರ್ಚೆಗಳು ನಿಲ್ಲುವುದಿಲ್ಲ ಎಂಬುದು ತಿಳಿದಿದೆ. ಈ ವಿಷಯಗಳಿಗೆ ಸ್ಪಷ್ಟನೆ ನೀಡಿ ಹೋರಾಟ ನಡೆಸುವ ಬದಲು ರನ್ ಗಳಿಸುವತ್ತ ಗಮನಹರಿಸುತ್ತೇನೆ ಎಂದಿದ್ದಾರೆ.ಭಾನುವಾರ ಇಂಗ್ಲೆಂಡ್ ವಿರುದ್ಧ ಲಾರ್ಡ್್ಸನಲ್ಲಿ ಶತಕ ಸಿಡಿಸುವ ಮೂಲಕ ಮುಂದಿನ ವರ್ಷದ ಏಕದಿನ ವಿಶ್ವಕಪ್ ಆಡುವ ಕನಸಿಗೆ ಬಲ ತುಂಬಿಸಿಕೊAಡಿರುವ 39 ವರ್ಷದ ರೋಹಿತ್ ಶರ್ಮ, ಬಿಸಿಸಿಐ ಹಂಚಿಕೊAಡಿರುವ ವಿಡಿಯೋದಲ್ಲಿ ಮಾತನಾಡಿದ್ದು, ನಾನು ಚೊಚ್ಚಲ ಪಂದ್ಯವನ್ನು ಆಡಿದಾಗಿನಿಂದ ಸಾಮರ್ಥ್ಯದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ನಾನು ಇಲ್ಲಿಯೇ ಇರುತ್ತೇನೆ ಜತೆಗೆ ಮೈದಾನದಲ್ಲಿ ಏನು ಮಾಡುತ್ತೇನೆ, ತಂಡದ ಯಶಸ್ಸಿಗೆ ಏನು ಕೊಡುಗೆ ನೀಡುತ್ತೇನೆ ಎಂಬುದು ನಿಜವಾಗಿಯೂ ಮುಖ್ಯವಾಗಿರಲಿದೆ. ನನ್ನ ಸಂಪೂರ್ಣ ಗಮನ ಅಲ್ಲೇ ಇರಲಿದ್ದು, ಇಂಥ ವಿಷಯಗಳು ಹರಿದಾಡದಿದ್ದರೆ ಆಡಲು ಮಜಾ ಇರುವುದಿಲ್ಲ ಎಂದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಇಂಗ್ಲೆAಡ್‌ನಲ್ಲಿ ಆಡುವುದನ್ನು ಪ್ರೀತಿಸುತ್ತೇನೆ. ಅಲ್ಲಿನ ವಾತಾವರಣ, ಮೈದಾನ, ಪಿಚ್‌ನಲ್ಲಿ ಯಾವುದೇ ಸ್ವರೂಪದ ಕ್ರಿಕೆಟ್ ಆಡಲು ಇಳಿದಾಗ ವಿಭಿನ್ನ ರೀತಿಯ ಸವಾಲು ಎದುರಾಗಲಿದೆ. ಕ್ರಿಕೆಟಿಗರಾಗಿ ನಾವು ಬಯಸುವುದು ಅದನ್ನೇ. ಆದ್ದರಿಂದ ಲಾರ್ಡ್್ಸನಲ್ಲಿ ಸಿಡಿಸಿದ ಶತಕವನ್ನು ಎಂಜಾಯ್ ಮಾಡಿದೆ ಎಂದು ಭಾರತಕ್ಕೆ ಎರಡು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟಿರುವ ರೋಹಿತ್ ಸಂತಸ ವ್ಯಕ್ತಪಡಿಸಿದರು. ಕೊಹ್ಲಿ ಜತೆಗಿನ ಜತೆಯಾಟ ಖುಷಿ ನೀಡಿದೆ ಎಂದಿರುವ ರೋಹಿತ್, ನಾವು (ರೋಹಿತ್-ಕೊಹ್ಲಿ) ಇಡೀ ವೃತ್ತಿಜೀವನದಲ್ಲಿ ಒಟ್ಟಿಗೆ ಆಡಿದ್ದೇವೆ. ಆದ್ದರಿಂದ ಕೊಹ್ಲಿಯೊಂದಿಗಿನ ಜತೆಯಾಟ ಖುಷಿ ನೀಡಿತು. ಇಬ್ಬರು ಪರಸ್ಪರ ತುಂಬ ಅರ್ಥಮಾಡಿಕೊಂಡಿದ್ದೇವೆ. ಒಟ್ಟಿಗೆ ಬ್ಯಾಟಿಂಗ್ ಮಾಡುವುದು ಖುಷಿ ನೀಡುತ್ತದೆ. ಆದರೆ ಸರಣಿ ಸೋಲು ನಿರಾಸೆ ಮೂಡಿಸಿದೆ ಎಂಬುದನ್ನು ಒಪ್ಪಿಕೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು