LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಪ್ರತಿಷ್ಠಿತ ೨೦೩೦ರ ಕಾಮನ್ ವೆಲ್ತ್ ಗೇಮ್ಸ್ ಆಹ್ಮದಾಬಾದ್‌ನಲ್ಲಿ ನಡೆಯೋದು ನಿಕ್ಕಿ!

೨೦ ವರ್ಷಗಳ ಬಳಿಕ ಭಾರತದಲ್ಲಿ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ನಡೆಯುವುದು ಪಕ್ಕಾ ಆಗಿದೆ. ಗುಜರಾತ್ ರಾಜ್ಯನ ಅಹಮದಾಬಾದ್ ನಗರವು ೨೦೩೦ಕ್ಕೆ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ ವಹಿಸಲು ಕಾಮನ್‌ವೆಲ್ತ್ ಸ್ಪೋರ್ಟ್ಸ್  ಕಾರ್ಯಕಾರಿ ಮಂಡಳಿ ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ಭಾರತದೊಂದಿಗೆ ಸ್ಪರ್ಧೆಗೆ ಬಿದ್ದಿದ್ದ ನೈಜೀರಿಯಾದ ಅಬುಜಾವನ್ನು ಹಿಂದಿಕ್ಕಿರುವ  ಭಾರತದ ಅಹಮದಾಬಾದ್‌ಗೆ ಕಾರ್ಯಕಾರಿ ಮಂಡಳಿ ಗೌರವವನ್ನು ಶಿಫಾರಸು ಮಾಡಿದೆ.

ಗ್ಲಾಸ್ಗೋದಲ್ಲಿ ನವೆಂಬರ್ ೨೬ರಂದು ನಡೆಯಲಿರುವ ಕಾಮನ್‌ವೆಲ್ತ್ ಸ್ಪೋರ್ಟ್ಸ್ ಸಾಮಾನ್ಯ ಸಭೆಯಲ್ಲಿ ಅಹಮದಾಬಾದ್ ಅನ್ನು ಅಧಿಕೃತವಾಗಿ ಆತಿಥೇಯ ನಗರವೆಂದು ದೃಢೀಕರಿಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ಕಾಮನ್‌ವೆಲ್ತ್ ಸ್ಪೋರ್ಟ್ಸ್  ಹಂಗಾಮಿ ಅಧ್ಯಕ್ಷ ಡೊನಾಲ್ಡ್  ರುಕಾರೆ "೨೦೩೦ರ ಕಾಮನ್‌ವೆಲ್ತ್ ಗೇಮ್ಸ್ಗೆ ಆತಿಥ್ಯ ವಹಿಸಲು ತಮ್ಮ ಪ್ರಸ್ತಾವನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ದೂರದೃಷ್ಟಿ ಮತ್ತು ಬದ್ಧತೆಯನ್ನು ತೋರಿಸಿದ ಭಾರತ ಮತ್ತು ನೈಜೀರಿಯಾ ಎರಡಕ್ಕೂ ನಾವು ಕೃತಜ್ಞರಾಗಿದ್ದೇವೆ. ಎರಡೂ ಪ್ರಸ್ತಾವನೆಗಳು ಸ್ಫೂರ್ತಿದಾಯಕವಾಗಿದ್ದವು, ನಮ್ಮ ಕಾಮನ್‌ವೆಲ್ತ್ ಕುಟುಂಬದೊಳಗಿನ ಅವಕಾಶದ ಪ್ರಮಾಣವನ್ನು ಪ್ರತಿಬಿಂಬಿಸುತ್ತವೆ.

ಕಾರ್ಯಕಾರಿ ಮಂಡಳಿಯು ಮೌಲ್ಯಮಾಪನ ಸಮಿತಿಯ ತೀರ್ಮಾನಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದೆ ಮತ್ತು ನಮ್ಮ ಸದಸ್ಯರಿಗೆ ಅಹಮದಾಬಾದ್ ಅನ್ನು ಶಿಫಾರಸು ಮಾಡುತ್ತಿದೆ'' ಎಂದಿದ್ದಾರೆ. ಜೊತೆಗೆ ``ನಮ್ಮ ಶತಮಾನೋತ್ಸವ ಗೇಮ್ಸ್ ಳನ್ನು ಎದುರುನೋಡುತ್ತಿರುವ ಈ ಚಳವಳಿಗೆ ಇದು ಒಂದು ಮಹತ್ವದ ಮೈಲಿಗಲ್ಲು, ಮತ್ತು ನಮ್ಮ ಸದಸ್ಯರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿರುವ ಗ್ಲಾಸ್ಗೋದಲ್ಲಿನ ಸಾಮಾನ್ಯ ಸಭೆಯನ್ನು ನಾವು ಈಗ ಎದುರುನೋಡುತ್ತಿದ್ದೇವೆ.
ನೈಜೀರಿಯಾದ ಪ್ರಸ್ತಾವನೆಯ ದೂರದೃಷ್ಟಿ ಮತ್ತು ಮಹತ್ವಾಕಾಂಕ್ಷೆಯಿAದ ಮಂಡಳಿಯು ಪ್ರಭಾವಿತವಾಗಿದೆ ಮತ್ತು ಅವರ ತಂಡದೊAದಿಗೆ ಭವಿಷ್ಯದ ಆತಿಥ್ಯ ಅವಕಾಶಗಳನ್ನು ಅನ್ವೇಷಿಸಲು ಕೆಲಸ ಮಾಡುವುದಕ್ಕೆ ನಾವು ನಮ್ಮ ಬದ್ಧತೆಯನ್ನು ದೃಢಪಡಿಸಿದ್ದೇವೆ. ಈ ನಿರ್ಧಾರವು ಕಾಮನ್‌ ವೆಲ್ತ್‌ ಗೇಮ್ಸ್ ಅನ್ನು ಆಫ್ರಿಕಾ ಖಂಡಕ್ಕೆ ಕೊಂಡೊಯ್ಯುವ ನಮ್ಮ ನಿರ್ಣಯವನ್ನು ಪ್ರತಿಬಿಂಬಿಸುತ್ತದೆ," ಎಂದು ಸಹ ತಿಳಿಸಿದ್ದಾರೆ.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಸುಮಾರು ೧,೩೦,೦೦೦ ಸಾಮರ್ಥ್ಯದ ಈ ಕ್ರೀಡಾಂಗಣದಲ್ಲಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳನ್ನು ಆಯೋಜಿಸುವ ಸಾಧ್ಯತೆಯಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು