LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಕೆ.ಎಲ್. ರಾಹುಲ್‍ಗೆ ಇಂದು ಮಹತ್ವದ ಪಂದ್ಯ

ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಮಂಗಳವಾರ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ತವರಿನ ಅಂಗಳದಲ್ಲಿ ಮಹತ್ವದ ಪಂದ್ಯವಾಡಲಿದ್ದಾರೆ. ಟಿ20 ವಿಶ್ವಕಪ್‍ಗಾಗಿ ಭಾರತ ತಂಡದ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದ್ದು, ದ್ವಿತೀಯ ವಿಕೆಟ್ ಕೀಪರ್ ಸ್ಥಾನಕ್ಕಾಗಿ ರಾಹುಲ್ ಮುಂದಿರುವ `ಅಂತಿಮ ಅವಕಾಶ’ ಇದಾಗಿದೆ.

ರಿಷಭ್ ಪಂತ್ ಫಿಟ್ ಆಗಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವುದರಿಂದ ಇವರು ಮೊದಲ ಆಯ್ಕೆಯ ಕೀಪರ್ ಎಂಬುದರಲ್ಲಿ ಅನುಮಾನವಿಲ್ಲ. ಹಾಗೆಯೇ ಸಂಜು ಸ್ಯಾಮ್ಸನ್ ಕೂಡ ರೇಸ್‍ನಲ್ಲಿದ್ದಾರೆ. ಇವರಿಬ್ಬರು ಕ್ರಮವಾಗಿ 160.60 ಮತ್ತು 161.08ರ ಸ್ಟ್ರೈಕ್‍ರೇಟ್ ಹೊಂದಿದ್ದಾರೆ. ಅಂದರೆ ಇದು ರಾಹುಲ್‍ಗಿಂತ ಹೆಚ್ಚು. ರಾಹುಲ್ 144.27ರ ಸ್ಟ್ರೈಕ್‍ರೇಟ್ ಹೊಂದಿದ್ದು, 378 ರನ್ ಬಾರಿಸಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ ಸ್ಟ್ರೈಕ್‍ರೇಟ್‍ಗೆ ಯಾವತ್ತೂ ಹೆಚ್ಚಿನ ಮಹತ್ವ ಇರುವುದರಿಂದ ರಾಹುಲ್ ಟಿ20 ವಿಶ್ವಕಪ್ ರೇಸ್‍ನಲ್ಲಿ ತುಸು ಹಿಂದುಳಿಯುವ ಸಾಧ್ಯತೆ ಇದೆ.

ಇಬ್ಬರಿಗೂ ನಿರ್ಣಾಯಕ: ತವರಿನಲ್ಲಿ ಆಡಲಾದ ಕಳೆದ ಪಂದ್ಯದಲ್ಲಿ ಲಕ್ನೋ ಟೇಬಲ್ ಟಾಪರ್ ರಾಜಸ್ಥಾನ್‍ಗೆ 7 ವಿಕೆಟ್‍ಗಳಿಂದ ಶರಣಾಗಿತ್ತು. ಡಿ ಕಾಕ್, ಸ್ಟೋಯಿನಿಸ್, ಪೂರಣ್ ಅವರಂಥ ಬಿಗ್ ಹಿಟ್ಟರ್‍ಗಳನ್ನು ಹೊಂದಿರುವ ಕಾರಣ ಲಕ್ನೋ ಮೊದಲು ಬ್ಯಾಟಿಂಗ್ ನಡೆಸಿದರೆ ಇನ್ನೂರರ ಗಡಿ ದಾಟಬೇಕಾದ ಅಗತ್ಯವಿದೆ. 9ನೇ ಸ್ಥಾನದಲ್ಲಿರುವ ಮುಂಬೈಗೂ ಈ ಪಂದ್ಯ ನಿರ್ಣಾಯಕ. ಪ್ಲೇ ಆಫ್ ರೇಸ್‍ನಲ್ಲಿ ಉಳಿಯಬೇಕಾದರೆ ಉಳಿದೆಲ್ಲ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡ ಪಾಂಡ್ಯ ಪಡೆಯದ್ದು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು