ಬೆಂಗಳೂರು: ರಸ್ತೆ ದಾಟಲು ನಿಂತಿದ್ದಾಗ ತಲೆ ಸುತ್ತಿ ಬಿದ್ದು ಖಾಸಗಿ ಬಸ್ ತಲೆ ಮೇಲೆ ಹರಿದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ನಡೆದಿದೆ.
ವರುಣ್ (16) ಮೃತ ದುರ್ದೆÊವಿ. ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ವರುಣ್ ತಂದೆಗೆ ಆರಾಮಿಲ್ಲ ಎಂದು ಔಷಧಿ ತರಲು ಹೋಗಿದ್ದ. ರಸ್ತೆ ದಾಟಲು ನಿಂತಾಗ ತಲೆ ಸುತ್ತಿ ಬಿದ್ದಿದ್ದಾನೆ. ಈ ವೇಳೆ ಏಕಾಏಕಿ ಖಾಸಗಿ ಬಸ್ ಅಡಿಗೆ ಸಿಲುಕಿದ್ದಾನೆ.
ಖಾಸಗಿ ಬಸ್ ಹರಿದು ಬಾಲಕ ಸಾವು



