ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ `ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆಗೆ ನಿರ್ಮಾಪಕ ನಮಿತ್ ಮಲ್ಹೋತ್ರ ವಿಶೇಷ ಮುಹೂರ್ತ ಆಯ್ಕೆ ಮಾಡಿಕೊಂಡಿದ್ದು ಜುಲೈ 30ರಂದು ಬೆಳಗ್ಗೆ 4:15ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಟ್ರೇಲರ್ ಬಿಡುಗಡೆಗೊಂಡಿತು. ಮೊದಲು ಜುಲೈ 24ರಂದು ಟ್ರೇಲರ್ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ನೀಟ್ ಹೋರಾಟ ಹಾಗೂ ಇತರೆ ಬೆಳವಣಿಗೆಗಳ ಕಾರಣದಿಂದ ಅಂದು ಬಿಡುಗಡೆ ಮುಂದೂಡಲಾಗಿತ್ತು. ಇದೀಗ ಹೊಸ ದಿನಾಂಕ ನಿಗದಿಪಡಿಸಿ ಟ್ರೇಲರ್ ಬಿಡುಗಡೆಯನ್ನು ಚಿತ್ರತಂಡ ಮಾಡಿತು. ಇದರ ಜೊತೆಗೆ ನಿರ್ಮಾಪಕರು ಮತ್ತೊಂದು ವಿಶೇಷ ಪ್ಲಾನ್ ಕೂಡ ಮಾಡಿದ್ದಾರೆ.ನಾಳೆ ವಿಶ್ವದಾದ್ಯಂತ `ಸ್ಪೈಡರ್ ಮ್ಯಾನ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರದರ್ಶನಕ್ಕೂ ಮುನ್ನ `ರಾಮಾಯಣ’ ಸಿನಿಮಾದ ಟ್ರೇಲರ್ ಪ್ರದರ್ಶಿಸಲಾಗುತ್ತದೆ. ಸ್ಪೈಡರ್ ಮ್ಯಾನ್ ಚಿತ್ರವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಆಗಮಿಸುವ ಹಿನ್ನೆಲೆ, ಹೆಚ್ಚಿನ ಜನರಿಗೆ ಟ್ರೈಲರ್ ತಲುಪುವ ಉದ್ದೇಶದಿಂದ ಚಿತ್ರತಂಡ ಈ ತಂತ್ರ ಅನುಸರಿಸಿದೆ.



