ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊನ್ನಘಟ್ಟ ಬಳಿ ಇಂದು ಬೆಳಿಗ್ಗೆ ಮಹಿಳೆಯೊಬ್ಬರು ವಾಯುವಿಹಾರ ಮಾಡುತ್ತಿರುವ ಸಮಯದಲ್ಲಿ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಬಂದು ಚಾಕು ತೋರಿಸಿ ಬೆದರಿಸಿ 50 ಗ್ರಾಂ ಚಿನ್ನದ ಸರ ದರೋಡೆ ಮಾಡಿಕೊಂಡು ಹೋಗಿರುತ್ತಾನೆ.
ಸಾವಿತ್ರಮ್ಮ 55 ವರ್ಷದ ಮಹಿಳೆ ವಾಯು ವಿಹಾರ ಮಾಡುತ್ತಿರುವ ಸಮಯದಲ್ಲಿ ಈ ಘಟನೆ ಸಂಭವಿಸಿರುತ್ತದೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



