ಯಲಹಂಕ: ದಿನಾಂಕ 21- 3 -2024 ಗುರುವಾರ ದಂದು ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿ ಭವನದಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿ ಗಾರರ ಸಂಘದ ರಾಜ್ಯಮಟ್ಟದ ಸರ್ವ ಸದಸ್ಯರ ಸಭೆ ಜರುಗಿತು.ರಾಜ್ಯಮಟ್ಟದ ಸರ್ವ ಸದಸ್ಯರ ಸಭೆಗೆ ಸಂಪಾದಕರ ಮತ್ತು ವಾಲಿಗಾರರ ಸಂಘದ ರಾಜ್ಯಾಧ್ಯಕ್ಷರಾದ ಕಲಾವಿದ ವಿಷ್ಣು ರಾಜ್ಯ ಉಪಾಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಜಿ (ಸೌರಭ) ನಾಗರಾಜ್, ರಾಜ್ಯ ಖಜಾಂಚಿಯಾದ ಕೆ ಮುನಿರಾಜು ಹಾಗೂ ರಾಜ್ಯ ಕಾರ್ಯದರ್ಶಿಯಾದ ಶ್ರೀಮತಿ ಸುಮಾ ಪುರಷೋತ್ತಮ್ ಆಗಮಿಸಿ ವೇದಿಕೆ ಅಲಂಕರಿಸಿದ್ದರು.
ಶುಭ ವಿಶ್ವಕರ್ಮ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಸಂಘಟನೆಗಾಗಿ ತಮ್ಮನ್ನು ತೊಡಗಿಸಿಕೊಂಡು ಶ್ರಮಿಸಿದ ನಗರ ಜಿಲ್ಲಾಧ್ಯಕ್ಷ ಡಾ.ಕೆ.ಶ್ರೀನಿವಾಸ್ (ಮಿಂಚು) ಹಾಗೂ ಕೊಡಗು ಜಿಲ್ಲಾಧ್ಯಕ್ಷ ಕೆ.ಟಿ.ಶ್ರೀನಿವಾಸ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ವೇದಿಕೆ ಗಣ್ಯರು
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಾತನಾಡಿದ ರಾಜ್ಯಾಧ್ಯಕ್ಷರಾದ ಕಲಾವಿದ ವಿಷ್ಣು ಅವರು ನನ್ನ ಆರೋಗ್ಯದ ನಿಮಿತ್ತ ಸರ್ವ ಸದಸ್ಯರ ಸಭೆಯನ್ನು ಮುಂದೂಡಬೇಕಾಯಿತು ನಿಮ್ಮೆಲ್ಲರ ಸಹಕಾರದಿಂದ ಸಂಘಟನೆ ಗಟ್ಟಿಯಾಗಿ ಉಳಿದಿದೆ ಇದೇ ರೀತಿ ನಿಮ್ಮ ಸಹಕಾರದಿಂದ ಸಂಘ ಇನ್ನಷ್ಟು ಬಲಗೊಳ್ಳಲಿ ಎಂದು ಸಂಘಟನೆಗಾಗಿ ಶ್ರಮಿಸಿದ ಮಿಂಚು ಶ್ರೀನಿವಾಸ್, ಕೊಡಗು ಶ್ರೀನಿವಾಸ ಅವರಿಗೆ ನುಡಿ ನಮನ ಸಲ್ಲಿಸಿದರು. ಪ್ರಸ್ತುತ ಸಂಘಟನೆಗಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಪದಾಧಿಕಾರಿ, ಸದಸ್ಯರನ್ನು ಸ್ಮರಿಸಿದರು.
ಸಂಘದ ಏಳಿಗೆಗಾಗಿ ಶ್ರಮಿಸುವರನ್ನು ಗುರುತಿಸಿ ಸೌರಭ ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿ, ಡಾ.ಸಿದ್ದಪ್ಪ ಅವರನ್ನು ಉಪಾದ್ಯಕ್ಷರನ್ನಾಗಿ, ಇ. ಎಸ್ ವಿಶ್ವನಾಥ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ,ಚೇತನ್ ಬಾಬು ಅವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ, ಉಮೇಶ್ ಅವರನ್ನು ಬೆಂಗಳೂರು ನಗರ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸರ್ವ ಸದಸ್ಯರ ಅನುಮತಿ ಪಡೆದು ನೇಮಿಸಲಾಯಿತು.
ವಿವಿಧ ಜಿಲ್ಲೆಗಳಿಂದ ತಾಲೂಕುಗಳಿಂದ ಆಗಮಿಸಿದ್ದ ಪದಾಧಿಕಾರಿಗೆ ಸದಸ್ಯರು ಅವರವರ ಸಮಸ್ಯೆಗಳನ್ನು ಸಭೆಯಲ್ಲಿ ಮಂಡಿಸಿದರು ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್ಯಕತಗೊಳಿಸುವುದಾಗಿ ಸಂಸ್ಥಾಪಕ ಅಧ್ಯಕ್ಷರಾದ ಕಲಾವಿದ ವಿಷ್ಣು ಅವರು ಭರವಸೆ ನೀಡಿದರು.ಈ ಸಂದರ್ಭದಲ್ಲಿ ವಿವಿದೆಡೆಗಳ ಜಿಲ್ಲೆ, ತಾಲ್ಲೂಕು, ಗ್ರಾಮ ಗ್ರಾಮಗಳಿಂದ ಆಗಮಿಸಿದ್ದ ಸಂಘದ ಪದಾಧಿಕಾರಿ ಸದಸ್ಯರು, ಪತ್ರಕರ್ತ ಸ್ನೇಹಿತರು, ಉಪಸ್ಥಿತರಿದ್ದು ರಾಜ್ಯಮಟ್ಟದ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಗೊಳಿಸಿದರು.