ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ತೆಂಗಿನ ನಾರಿನ ಮ್ಯಾಟ್ಗಳು ಮತ್ತು ಇತರೆ ಉತ್ಪನ್ನಗಳನ್ನು ದೆಹಲಿಗೆ ಸರಬರಾಜು ಮಾಡುವ ವಾಹನಕ್ಕೆ ಚಾಲನೆ ನೀಡಿದರು.
ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ನಟರಾಜ್ ಜಾನಕಿ ರಾಮ್, ಮುಖಂಡರಾದ ರವಿ ಬೋಸರಾಜು ಸೇರಿದಂತೆ ಅನೇಕರು ಈ ವೇಳೆ ಹಾಜರಿದ್ದರು.
ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತವು, ಗ್ರಾಮೀಣ ಮಹಿಳೆಯರಿಂದ ತಯಾರಿಸಲ್ಪಟ್ಟ ಒಟ್ಟು 8000 ಮ್ಯಾಟ್ ಗಳನ್ನು ದೆಹಲಿಗೆ ಸರಬರಾಜು ಮಾಡಲು ಸಿದ್ದಪಡಿಸಿದ್ದು, ಸದರಿ ಮ್ಯಾಟ್ಗಳ ಸರಬರಾಜು ವಾಹನಕ್ಕೆ ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರಿಂದ `ಹಸಿರು ನಿಶಾನೆ’ ತೊರುವ ಕಾರ್ಯಕ್ರಮವನ್ನು ದಿನಾಂಕ 22.04.2026 ರಂದು ಬೆಳ್ಳಿಗ್ಗೆ 09.00 ಗಂಟೆಗೆ ಮುಖ್ಯಮಂತ್ರಿಗಳ ಆಧಿಕೃತ ನಿವಾಸ `ಕಾವೇರಿ’ಯಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಉತ್ಪನ್ನಗಳಲ್ಲಿ ಅತ್ಯಂತ ಜನಪ್ರಿಯವಾದ ಮ್ಯಾಟ್ ಅಂದರೆ ಅದು `ಡಚ್ ಮ್ಯಾಟ್’. ಡಚ್ ಮ್ಯಾಟ್ ಎಂದರೆ ತೆಂಗಿನಕಾಯಿ ತೊಗಟೆಯಿಂದ ದೊರೆಯುವ ಕಾಯರ್ ನಾರುಗಳಿಂದ ತಯಾರಿಸಲ್ಪಡುವ ವಿಶೇಷ ಮ್ಯಾಟ್. 18 ನೇ ಶತಮಾನದಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ತಯಾರಿಸಲ್ಪಟ್ಟ ಕಾಯರ್ ಮ್ಯಾಟ್ ಗಳನ್ನು ಡಚ್ ವ್ಯಾಪಾರಿಗಳು ಯುರೋಪಿಗೆ ಸಾಗಾಟ ಮಾಡುತ್ತಿದ್ದರು, ಆದ್ದರಿಂದ ಈ ಮ್ಯಾಟ ಗಳು `ಡಚ್ ಮ್ಯಾಟ್’ ಎಂದು ಜನಪ್ರಿಯವಾಗಿವೆ.
ನಿಗಮದ ಉತ್ಪಾದನಾ ಘಟಕಗಳಲ್ಲಿ ಡಚ್ ಮ್ಯಾಟ್ ಗಳನ್ನು ತಯಾರಿಸಲು, ಮೊದಲು ತೆಂಗಿನಕಾಯಿ ತೊಗಟೆಯನ್ನು ಸಂಗ್ರಹಿಸುತ್ತಾರೆ, ಈ ತೊಗಟೆಯನ್ನು ಬಸ್ಟರ್ ಯಂತ್ರದಲ್ಲಿ ಮೃದುಗೊಳಿಸಲಾಗುತ್ತದೆ. ನಂತರ ತೊಗಟೆಯನ್ನು ನೀರಿನಲ್ಲಿ ಕನಿಷ್ಠ 7 ದಿನಗಳವರೆಗೆ ನೆನೆಸಿದ ನಂತರ ನಾರುಗಳನ್ನು ಬೇರ್ಪಡಿಸಲಾಗುತ್ತದೆ. ತೆಂಗಿನ ನಾರಿನ ಉದ್ದ ಸರಿ ಸುಮಾರು 7 ರಿಂದ 8 ಇಂಚುಗಳು ಮತ್ತು ದಪ್ಪ 0.1 ರಿಂದ 0.6 ಮಿ.ಮಿ ಗಳಷ್ಟು ಇರುತ್ತದೆ. ಎರಡು ನಾರುಗಳನ್ನು 2 ಠಿಟಥಿ ಯಂತ್ರದಲ್ಲಿ ತಿರುಗಿಸಿ ಹುರಿ ತಯಾರಿಸಲಾಗುತ್ತದೆ, ನಂತರ ಹುರಿಗೆ ಬಣ್ಣ ಹಾಕಲಾಗುತ್ತದೆ.ಹುರಿಯನ್ನು ಹಸ್ತಚಾಲಿತ ಮ್ಯಾಟ್ ಗಳ ಫ್ರೇಮ್ ಬಳಸಿ ಡಚ್ ಮ್ಯಾಟ್ ನ್ನು ಹೆಣೆಯಲಾಗುತ್ತದೆ, ನಂತರ ಪ್ರೆಸಿಂಗ ಡಿವೈಸ್ ನಲ್ಲಿ ಬಿಗಿಗೊಳಿಸಿದ ನಂತರ ಡಚ್ ಮ್ಯಾಟ್ ತಯಾರಾಗುತ್ತದೆ. 14*24 ಇಂಚಿನ ಡಚ್ ಮ್ಯಾಟ್ 900 ಗ್ರಾಂ ತೂಕ ಹೊಂದಿದ್ದು, ಇದೇ ಅಳತೆಯ ಕಾರಿಡಾರ್ ಮ್ಯಾಟ್ 1060 ಗ್ರಾಂ ತೂಕ ಹೊಂದಿರುತ್ತದೆ. ನಿಗಮದ ಡಚ್ ಮ್ಯಾಟ್ಗಳು ಬಲಿಷ್ಠ, ದೀರ್ಘಕಾಲಿಕ, ಪರಿಸರ ಸ್ನೇಹಿ ಹಾಗೂ ಅಲಂಕಾರಿಕ ಗುಣಗಳನ್ನು ಹೊಂದಿರುವುದರಿAದ ಇವುಗಳು ದೇಶಾದ್ಯಂತ ಜನಪ್ರಿಯವಾಗಿವೆ ಮತ್ತು ಉಪ ಹಿಮಾಲಯ ರಾಜ್ಯಗಳಲ್ಲಿ ಡಚ್ ಮ್ಯಾಟ್ಗಳಿಗೆ ಹೆಚ್ಚಿನ ಬೇಡಿಕೆ ಇದೆ.
ನಿಗಮದ 35 ಉತ್ಪಾದನಾ ಘಟಕಗಳಲ್ಲಿ, ಸನ್ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ, ಮಾನ್ಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರ ಮಾರ್ಗದರ್ಶನದಲ್ಲಿ ಹಾಗೂ ನಿಗಮದ ಅಧ್ಯಕ್ಷರಾದ ಮಾನ್ಯ ನಟರಾಜ್ ಜಾನಕಿರಾಮ್ ಇವರ ಮುಂದಾಳತ್ವದಲ್ಲಿ ಹಸ್ತಚಾಲಿತ ಮ್ಯಾಟ್ ಫ್ರೇಮ್ ಬಳಸಿ ಸುಮಾರು 700 ಗ್ರಾಮೀಣ ಉದ್ಯೋಗ ಸೃಷ್ಠಿಸಲು ಕ್ರಮವಹಿಸಲಾಗುತ್ತಿದೆ.
ನಿಗಮದ ಉತ್ಪನ್ನಗಳ ಮಾರಾಟ ಹೆಚ್ಚಿಸಲು `Coirkarnataka.in ವೆಬ್ಸೈಟ್ ಸಿದ್ದಪಡಿಸಿ ಇದರೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಡಿಜಿಟಲ್ ಮಾರಾಟ ಸಹಯೊಗಿಯೊಂದಿಗೆ ಒಂಧು ಮಾಡಿಕೊಂಡುe-commerce website-coirempower.com ನ್ನು ಸಿದ್ದಪಡಿಸಲಾಗಿದೆ. ಮಾಲ್ಗುಡಿ ಅಮೃತ್ ಚಹಾ ಇವರ 80ಕ್ಕೂ ಹೆಚ್ಚು ಮಳಿಗೆಗಳಲ್ಲಿ ತೆಂಗಿನ ನಾರಿನ ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರಾಟವನ್ನು ಉತ್ತೇಜಿಸಲು ಕ್ರಮವಹಿಸಲಾಗುತ್ತಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಾದ ನವ ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ,ಗೊವಾ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮಿರ್ ದಲ್ಲಿ Stockist cumForwarding and carrying agent ರನ್ನು ನೇಮಿಸಲು ಕ್ರಮವಹಿಸಲಾಗುತ್ತಿದೆ.
ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿರುವ ಡಚ್ ಮ್ಯಾಟ್, ಕಾರಿಡಾರ್ ಮ್ಯಾಟ್, ರೊಲಿಂಗ್ ಮ್ಯಾಟ್, ಜಿಯೋ ಟೆಕ್ಸಟೈಲ್ಸ, ಡೆಸ್ಕ, ಕಾಯರ್ ಹಾಸಿಗೆ ಮತ್ತು ದಿಂಬು ನಿಜವಾದ ಹಸಿರು ಉತ್ಪನ್ನಗಳಾಗಿವೆ, ಇವುಗಳ ಉತ್ಪಾದನೆಯಲ್ಲಿ ತೊಡಗಿರುವ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವನ್ನು ಬೆಳೆಸಲು ನಾವೆಲ್ಲಾ ತೆಂಗಿನ ನಾರಿನ ಉತ್ಪನ್ನಗಳನ್ನು ಖರೀದಿಸಿ ಪೋಷಿಸಬೇಕಿದೆ.
ದೆಹಲಿಗೆ ಕರ್ನಾಟಕದ ನಾರಿನ ಉತ್ಪನ್ನಗಳು ಸರಬರಾಜು: ಸಿದ್ದರಾಮಯ್ಯ ಚಾಲನೆ



