ಬೆಂಗಳೂರು: ಕೇವಲ ಏಳು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದ ಪ್ರವೀಣ್(21) ಮತ್ತು ಸೋಮಣ್ಣ(19) ಯುವಕರುಗಳು ನಿನ್ನೆ ರಾತ್ರಿ ಡಿಯೋ ಮೋಟರ್ ಬೈಕ್ನ್ನು ಅತಿ ವೇಗವಾಗಿ ಚಲಾಯಿಸಿ ಟೆಂಪೋ ಟ್ರಾವೆಲ್ಗೆ ಸ್ವತಃ ಡಿಕ್ಕಿ ಹೊಡೆದುಕೊಂಡು ಇಬ್ಬರು ಮೃತಪಟ್ಟಿರುತ್ತಾರೆ.ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಹೇಳುವ ಪ್ರಕಾರ ಮೂಲತಹ ಇವರುಗಳು ಗುಲ್ಬರ್ಗ ಅಥವಾ ರಾಯಚೂರು ಜಿಲ್ಲೆಯವರಾಗಿದ್ದು ಬೆಂಗಳೂರಿನ ಉಲ್ಲಾಳ ನಗರದಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುತ್ತಾರೆ. ರಾತ್ರಿ7:30 ಕ್ಕೆ ಅಪಘಾತ ಸಂಭವಿಸಿ ಪ್ರವೀಣ್ 11:30 ಕ್ಕೆ ಮೃತಪಟ್ಟರೆ ಸೋಮಣ್ಣ ಮಧ್ಯರಾತ್ರಿ ಎರಡು ಮೂವತ್ತಕ್ಕೆ ಮೃತಪಟ್ಟಿರುತ್ತಾನೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



