ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರದ ಕ್ವಾರಂಟೈನ್ ಸೆಲ್ ಸೇರಿದ್ದಾರೆ. ನಟ ದರ್ಶನ್ ಸೆಲ್ನ ಕೂಗಳತೆ ದೂರದಲ್ಲೇ ಈ ಕೈದಿಗಳು ಇದ್ದಾರೆ.ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹದಿನೇಳು ಜನರನ್ನು ಅಪರಾಧಿಗಳು ಅಂತಾ ತೀರ್ಪು ಪ್ರಕಟಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ನಿನ್ನೆ ಪರಪ್ಪನ ಅಗ್ರಹಾರ ಜೈಲು ಸೇರಿದ ಎಲ್ಲಾ ಹದಿನೇಳು ಅಪರಾಧಿಗಳನ್ನು ಕ್ವಾರಂಟೈನ್ ಸೆಲ್ನ `ಡಿ’ ಬ್ಲಾಕ್ ಬ್ಯಾರಕ್ಗೆ ಹಾಕಲಾಗಿದೆ. ಎಲ್ಲಾ ಹದಿನೇಳು ಕೈದಿಗಳನ್ನು ಒಂದೇ ಸೆಲ್ನಲ್ಲಿ ಇಡಲಾಗಿದ್ದು, ವಿನಯ್ ಕುಲಕರ್ಣಿಗೆ 3476 ತಾತ್ಕಾಲಿಕ ಯುಟಿಪಿ ನಂಬರ್ ನೀಡಲಾಗಿದೆ.



