ಬೆಂಗಳೂರು: ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ವಿಧಾನಸಭೆಗಳಿಗೆ ಇಂದು ಮತದಾನ ನಡೆದಿದೆ.
ತಮಿಳುನಾಡಿನ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಹಾಗೂ ಪಶ್ಚಿಮ ಬಂಗಾಳದ 152 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ನಡೆಯಲಿದೆ. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಅವರ ಪುತ್ರ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಕುಟುಂಬದವರೊಂದಿಗೆ ಬಂದು ಮತದಾನ ಮಾಡಿದ್ದಾರೆ. ಖ್ಯಾತ ನಟರಾದ ರಜನಿಕಾಂತ್, ಕಮಲಹಾಸನ್ ಹಾಗೂ ಪುತ್ರಿ ಶ್ರುತಿ ಹಾಸನ್, ದಳಪತಿ ವಿಜಯ್, ಅಜಿತ್ ಸೇರಿದಂತೆ ಹಲವು ಗಣ್ಯರು ಬೆಳಿಗ್ಗೆಯೇ ಮತದಾನ ಚಲಾಯಿಸಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಟಿಎಂಸಿ ಹಾಗೂ ಎಜೆಯುಪಿ ಪಕ್ಷ ಕಾರ್ಯಕರ್ತರ ನಡುವೆ ಬೂತ್ನ ಬಳಿ ಘರ್ಷಣೆ ನಡೆದಿದ್ದು, ಘರ್ಷಣೆ ವಿಕೋಪಕ್ಕೆ ಹೋಗಿ ಎರಡು ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತ ತಲುಪಿದ್ದಾರೆ.
ಪ.ಬಂಗಾಳ, ತಮಿಳುನಾಡಿನಲ್ಲಿ ಮತದಾನ



