ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮತ್ತೊಂದು ವಿಮಾನ ಲ್ಯಾಂಡಿಂಗ್ ಸಮಸ್ಯೆ ಉಂಟಾಗಿದ್ದು, ಮತ್ತೆ ಈಐಙ91 ವಿಮಾನ ಲ್ಯಾಂಡಿನಲ್ಲಿ ಸಮಸ್ಯೆ ಉಂಟಾಗಿದೆ. ಹೈದರಾಬಾದ್ ಫ್ಲೈಟ್ ಬಳಿಕ ಇದೀಗ ಬೆಂಗಳೂರು ಫ್ಲೈಟ್ ನಲ್ಲಿ ಸಮಸ್ಯೆ ಉಂಟಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಈ ಒಂದು ವಿಮಾನ ಬರುತ್ತಿತ್ತು.ಆಗಸದಲ್ಲಿ ಒಂದು ಗಂಟೆ ವಿಮಾನ ಹಾರಾಡಿದೆ. ಮೊನ್ನೆ ಆಕಾಶದಲ್ಲಿಯೇ ವಿಮಾನ ನಾಲ್ಕು ಗಂಟೆ ಆಕಾಶದಲ್ಲಿ ಸುತ್ತಾಡಿ ನಂತರ ಆಗಿತ್ತು. ಇದೀಗ ಮತ್ತೆ 91 ವಿಮಾನದಲ್ಲಿ ಸಮಸ್ಯೆ ಉಂಟಾಗಿದ್ದು ಇದೀಗ ಮತ್ತೆ ಒಂದು ಗಂಟೆ ಆಗಸದಲ್ಲಿ ಹಾರಾಟ ನಡೆಸಿ ಲ್ಯಾಂಡ್ ಆಗಿದೆ. ಹವಮಾನ ವೈಪರೀತ್ಯದಿಂದ ಈ ಒಂದು ವಿಮಾನ ಲ್ಯಾಂಡಿAಗ್ ನಲ್ಲಿ ಸಮಸ್ಯೆ ಆಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ವಿಮಾನದಲ್ಲಿ 21 ಪ್ರಯಾಣಿಕರು ಇದ್ದರು ಅವರೆಲ್ಲರೂ ಸದ್ಯ ಸೇಫ್ ಆಗಿದ್ದಾರೆ.



